ನಟಿ, ನಿರೂಪಕಿ ಕಾವ್ಯ ಶಾಸ್ತ್ರಿ (Kavya Shastry) ಇದೀಗ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಬಗ್ಗೆ ಬೇಸರ ಹೊರಹಾಕಿದ್ದಾರೆ. ಈ ಶೋ ಮಕ್ಕಳಿಗೆ ತೋರಿಸದಂತೆ ನಟಿ ಮನವಿ ಮಾಡಿದ್ದಾರೆ. ಈ ಕುರಿತ ಅವರ ಸೋಷಿಯಲ್ ಮೀಡಿಯಾ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಸುದೀಪ್ ಮಿಮಿಕ್ರಿ ಮಾಡಿದ ತುಕಾಲಿ ಸಂತು
ಈ ಬಾರಿ ಕನ್ನಡದ ಬಿಗ್ ಬಾಸ್ ಸೀಸನ್ (Bigg Boss Kannada 10) ನಿಜಕ್ಕೂ ಬೇಸರ ತಂದಿದೆ. ಶೋನಲ್ಲಿ ಉಳಿಯೋ ಭರದಲ್ಲಿ ಅವಾಚ್ಯ ಶಬ್ದಗಳಲ್ಲಿ ನಿಂದನೆ, ಚಾರಿತ್ರ‍್ಯವಧೆ, ಹೆಣ್ಣುಮಕ್ಕಳ ಮೇಲೆ ಏಕವಚನದ ಬಳಕೆ, ಮಾನಸಿಕವಾಗಿ ಇತರರನ್ನು ಕುಗ್ಗಿಸುವ ಪ್ರಯತ್ನ, ಜೋರು ಧ್ವನಿಯಲ್ಲಿ ಗದರುವುದು, ಹೆದರಿಸುವುದು, ಇವೆಲ್ಲವೂ ಹೆಚ್ಚಾಗಿದೆ. ಚಿಕ್ಕ ಮಕ್ಕಳಿರುವ ತಂದೆ-ತಾಯಂದಿರು ದಯವಿಟ್ಟು ಇಂತಹ ಕಾರ್ಯಕ್ರಮಗಳನ್ನು ಚಿಕ್ಕ ಮಕ್ಕಳ ಎದುರು ನೋಡದಿರಿ. ಇದು ನಿಮ್ಮ ಮಗುವಿನ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಅವರು ಇದನ್ನೂ ಅನುಕರಣೆ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಕಾವ್ಯಾ ಶಾಸ್ತ್ರಿ ಬರೆದುಕೊಂಡಿದ್ದಾರೆ.
View this post on Instagram
ನಾನು ಯಾವುದೇ ಕಾರ್ಯಕ್ರಮದ ವಿರುದ್ಧವಾಗಿಲ್ಲ. ಚಿಕ್ಕ ಮಕ್ಕಳನ್ನು ಹೊಂದಿರುವ ಪೋಷಕರಲ್ಲಿ ಜಾಗೃತಿ ಮೂಡಿಸುತ್ತಿದ್ದೇನೆ. ಯಾವ ವಯೋಮಾನದ ಪ್ರೇಕ್ಷಕರಿಗೆ ಇದು ಸೂಕ್ತ ಎಂಬ ಸೂಚನೆಯನ್ನು ಸೀರಿಯಲ್‌ಗಳು ಕೂಡ ನೀಡುತ್ತವೆ. ಆದರೂ ಆ ಸೂಚನೆಯಲ್ಲಿ ನಿರ್ಲಕ್ಷಿಸಿ ನಾವು ಮನೆಯಲ್ಲಿ ಅದನ್ನು ವೀಕ್ಷಿಸುತ್ತೇವೆ. ನಿಮ್ಮ ಮಗು ಉದ್ದೇಶಪೂರ್ವಕವಾಗಿ ಇಂಥ ನೆಗೆಟಿವ್ ಕಂಟೆಂಟ್ ನೋಡದೇ ಇರಬಹುದು. ಕೇವಲ ಆಡಿಯೋ ಕೂಡ ಮಗುವಿನ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಎನರ್ಜಿಯನ್ನು ಮಕ್ಕಳ ಬಗ್ಗೆ ಕಾಳಜಿ ವಹಿಸಿ ಎಂದು ನಟಿ ಪೋಸ್ಟ್ ಮಾಡಿದ್ದಾರೆ.
ಶುಭವಿವಾಹ (Shubhavivah), ರಾಧಿಕಾ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ಮತ್ತು ಸಿನಿಮಾಗಳಲ್ಲಿ ಕಾವ್ಯ ನಟಿಸಿದ್ದಾರೆ. ಬಿಗ್ ಬಾಸ್ ಸೀಸನ್ 4ರಲ್ಲಿ ಕಾವ್ಯ ಶಾಸ್ತ್ರಿ ಸ್ಪರ್ಧಿಯಾಗಿ ಗಮನ ಸೆಳೆದರು. ಭುವನ್, ರೇಖಾ, ಕಾರುಣ್ಯ, ನಿರಂಜನ್ ದೇಶಪಾಂಡೆ, ಶಾಲಿನಿ ಕೂಡ ಈ ಸೀಸನ್‌ನಲ್ಲಿ ಇದ್ದರು.