‘ಲಕ್ಷ್ಮಿ ಬಾರಮ್ಮ’ ಖ್ಯಾತಿಯ ಕವಿತಾ ಗೌಡ (Kavitha Gowda) ಸೆ.18ರಂದು ಗಂಡು ಮಗುವಿಗೆ (Baby Boy) ಜನ್ಮ ನೀಡಿದ್ದರು. ಇದೀಗ ಮುದ್ದು ಮಗನೊಂದಿಗೆ ಬಾಣಂತಿ ಕವಿತಾ ಗೌಡ ಮನೆಗೆ ಮರಳಿದ್ದಾರೆ. ಮಗು ಹುಟ್ಟಿದ ಸಂಭ್ರಮದಲ್ಲಿ ನಟಿ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ಕುರಿತು ವಿಡಿಯೋವೊಂದನ್ನು ನಟ ಚಂದನ್ ಕುಮಾರ್ (Chandan Kumar) ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಬಾಲಿವುಡ್‌ಗೆ ಸಮರ್ಜಿತ್: ಕರಣ್ ಜೋಹರ್ ಸಿನಿಮಾದಲ್ಲಿ ಇಂದ್ರಜಿತ್ ಪುತ್ರ
ಚಂದನ್ ಕುಮಾರ್ ತಂದೆಯಾಗಿರುವ ಖುಷಿಯಲ್ಲಿದ್ದಾರೆ. ಮಗುವಿನ ಕಾಲಿನ ಮತ್ತು ಮಗುವಿನ ಕೈಹಿಡಿದಿರುವ ಫೋಟೋ ಶೇರ್ ಮಾಡಿ ನಟ ಖುಷಿ ಹಂಚಿಕೊಂಡಿದ್ದಾರೆ. ಇನ್ನೂ ಪತ್ನಿ ಮತ್ತು ಮಗುವನ್ನು ಡಿಸ್ಚಾರ್ಜ್ ಮಾಡಿಸುವ ವೇಳೆ, ಕವಿತಾಗೆ ಚಂದನ್ ಗಿಡವನ್ನು ಕೊಟ್ಟಿದ್ದಾರೆ. ಹಾಗೆಯೇ ಮಗುವನ್ನು ಚಂದನ್ ಹಿಡಿದುಕೊಂಡು ಬಹಳ ಖುಷಿಯಿಂದ ಮನೆಯ ಕಡೆ ಹೆಜ್ಜೆ ಹಾಕಿದ್ದಾರೆ. ಹೀಗೆ ಆಸ್ಪತ್ರೆಯಿಂದ ಮನೆಗೆ ಎಂಟ್ರಿ ಕೊಟ್ಟಿರುವ ತನಕ ವಿಡಿಯೋ ತುಣುಕನ್ನು ಅವರು ಹಂಚಿಕೊಂಡಿದ್ದಾರೆ.
View this post on Instagram
ಮನೆಗೆ ಮಗುವನ್ನು ಹಿಡಿದುಕೊಂಡು ಚಂದನ್ ಮತ್ತು ಕವಿತಾ ಗೌಡ ಬಂದಿದ್ದಾರೆ. ಈ ವೇಳೆ, ಮನೆ ಮಂದಿ ಎಲ್ಲಾ ಸೇರಿ ಮನೆಯನ್ನು ಸಿಂಗಾರ ಮಾಡಿದ್ದಾರೆ ಹಾಗೆಯೇ ಮಗು ಹಿಡಿದು ನಿಂತ ಚಂದನ್ ದಂಪತಿಗೆ ಆರತಿ ಬೆಳಗಿದ್ದಾರೆ. ಬಳಿಕ ಮನೆಗೆ ಎಂಟ್ರಿ ಕೊಟ್ಟಿದ್ದು, ಕುಟುಂಬದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ.
ಅಂದಹಾಗೆ, ಲಾಕ್‌ಡೌನ್ ವೇಳೆ 2021ರ ಮೇ 14ರಂದು ಚಂದನ್ ಕುಮಾರ್ ಮತ್ತು ಕವಿತಾ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟರು. ಇಬ್ಬರೂ ‘ಲಕ್ಷ್ಮಿ ಬಾರಮ್ಮ’ ಸೀರಿಯಲ್‌ನಲ್ಲಿ ಹೀರೋ, ಹೀರೋಯಿನ್ ಆಗಿ ನಟಿಸಿದ್ದರು.