ಅರ್ಜುನ್ ಜನ್ಯ- ಶಿವಣ್ಣ ಚಿತ್ರಕ್ಕೆ ನಟಿ ಕೌಸ್ತುಭ ಹೀರೋಯಿನ್

Public TV
1 Min Read
arjun janya

ರ್ಜುನ್ ಜನ್ಯ, ಉಪೇಂದ್ರ, ರಾಜ್ ಬಿ ಶೆಟ್ಟಿ ಕಾಂಬಿನೇಷನ್ `45′ ಚಿತ್ರಕ್ಕೆ ನಾಯಕಿಯ ಎಂಟ್ರಿಯಾಗಿದೆ. ಕಿರುತೆರೆಯಲ್ಲಿ ಮೋಡಿ ಮಾಡಿರುವ ರಾಧೆ ಕೌಸ್ತುಭ ಮಣಿ ಹೀರೋಯಿನ್ ಆಗಿ ಸೆಲೆಕ್ಟ್ ಆಗಿದ್ದಾರೆ.

arjun janya

ಮ್ಯೂಸಿಕಲ್ ಕಂಪೋಸರ್ ಅರ್ಜುನ್ ಜನ್ಯ (Arjun Janya) ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿದಿದ್ದಾರೆ. ಶಿವಣ್ಣ (Shivanna), ಉಪ್ಪಿ, ರಾಜ್ ಬಿ ಶೆಟ್ಟಿಗೆ(Raj B Shetty) ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. `45′ ಚಿತ್ರದಲ್ಲಿ ರಾಜ್ ಬಿ ಶೆಟ್ಟಿಗೆ ನಟಿ ಕೌಸ್ತುಭ (Kaustubha Mani) ನಾಯಕಿಯಾಗಿದ್ದಾರೆ.

arjun janya 2

`ನನ್ನರಸಿ ರಾಧೆ’ ಮತ್ತು ತೆಲುಗು ಸೀರಿಯಲ್‌ಗಳಲ್ಲಿ ನಟಿಸಿರುವ ಕೌಸ್ತುಭ, `ರಾಮಾಚಾರಿ 2.0′ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಈ ಬೆನ್ನಲ್ಲೇ ಅರ್ಜುನ್ ಜನ್ಯ ಅವರ ಸಿನಿಮಾದಲ್ಲಿ ನಟಿಸಲು ಬಿಗ್ ಆಫರ್ ಸಿಕ್ಕಿದೆ. ಇದನ್ನೂ ಓದಿ: Exclusive: ರಾಜಕೀಯ ಅಖಾಡಕ್ಕೆ ನಿರ್ಮಾಪಕ ಕೆ.ಮಂಜು

ಶಿವರಾಜ್‌ಕುಮಾರ್ (Shivarajkumar) ನಟನೆಯ `45′ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿದ್ಧಗೊಳ್ಳಲಿದೆ. ಈ ಸಿನಿಮಾಗೆ ರಮೇಶ್ ರೆಡ್ಡಿ ನಿರ್ಮಾಣ ಮಾಡ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಈಗಾಗಲೇ ಆರಂಭ ಆಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ಸಿನಿಮಾ ತೆರೆಕಾಣಿಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಅರ್ಜುನ್ ಜನ್ಯ ಅವರೇ ಕಥೆ-ಚಿತ್ರಕಥೆ ಬರೆದಿದ್ದು, ನಿರ್ದೇಶನದ ಜೊತೆಗೆ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ಕೂಡ ವಹಿಸಿಕೊಂಡಿದ್ದಾರೆ.

Share This Article