ಕಳೆದ ದಸರಾದಲ್ಲಿ ಸ್ಯಾಂಡಲ್ ವುಡ್ ನಟಿ ಕಾರುಣ್ಯ ರಾಮ್ (Karunya Ram) ರಾಜಕುಮಾರಿ ಲುಕ್ ನಲ್ಲಿ ಫೋಟೋಶೂಟ್ (Photoshoot) ಮಾಡಿಸಿಕೊಂಡಿದ್ದರು. ಆ ಫೋಟೋಗಳು ಸಖತ್ ವೈರಲ್ ಆಗಿದ್ದು, ಇದೀಗ ಮತ್ತೆ ಕಾರುಣ್ಯ ಹೊಸ ಫೋಟೋಶೂಟ್ ನಲ್ಲಿ ಮಿಂಚಿದ್ದಾರೆ. ಸಖತ್ ಹಾಟ್ ಹಾಟ್ ಆಗಿಯೇ ಕಾಣಿಸಿಕೊಂಡಿದ್ದಾರೆ.
ಆಗ್ಗಾಗ್ಗೆ ಲುಕ್ ಟೆಸ್ಟ್ ಅನ್ನುವಂತೆ ಕಾರುಣ್ಯ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಲೇ ಇರುತ್ತಾರೆ. ಈ ಬಾರಿಯ ಫೋಟೋಶೂಟ್ ಮತ್ತಷ್ಟು ಅಂದವನ್ನು ಹೆಚ್ಚಿಸಿದೆ. ಪಿಂಕ್ ಮತ್ತು ವೈಟ್ ಕಲರ್ ಕಾಂಬಿನೇಷನ್ ನಲ್ಲಿ ಅವರು ಸಖತ್ ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ಕಂಡಿದ್ದಾರೆ.
ಮೊನ್ನೆಯಷ್ಟೇ ಕಾರುಣ್ಯ ರಾಮ್ ನಟನೆಯ ಪೆಟ್ರೊಮ್ಯಾಕ್ಸ್ ಸಿನಿಮಾ ರಿಲೀಸ್ ಆಗಿದೆ. ಕಾರುಣ್ಯ ನಿರ್ವಹಿಸಿದ ಪಾತ್ರಕ್ಕೆ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಅಲ್ಲದೇ, ಪವನ್ ಒಡೆಯರ್ ನಿರ್ದೇಶನದ ರೆಮೋ ಸಿನಿಮಾದಲ್ಲಿ ಕಾರುಣ್ಯ ನಟಿಸಿದ್ದರು, ಈ ಸಿನಿಮಾದಲ್ಲಿ ಅವರು ಪ್ರಿಯಾ ಹೆಸರಿನ ಪಾತ್ರವನ್ನು ನಿರ್ವಹಿಸಿದ್ದರು.
ನಾನಾ ಪಾತ್ರಗಳ ಮೂಲಕ ಗುರುತಿಸಿಕೊಂಡಿರುವ ಕಾರುಣ್ಯ ಕಿರಗೂರಿನ ಗಯ್ಯಾಳಿಗಳು, ಮನೆ ಮಾರಾಟಕ್ಕಿದೆ ಸೇರಿದಂತೆ ಪ್ರಯೋಗಾತ್ಮಕ ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ. ಮನೆ ಮಾರಾಟಕ್ಕಿದೆ ಸಿನಿಮಾದ ನಟನೆಗಾಗಿ ಇವರು ಸೈಮಾ ಪ್ರಶಸ್ತಿ ಕೂಡ ದೊರೆತಿದೆ. ಸಿನಿಮಾಗಳಲ್ಲಿ ಮಾತ್ರವಲ್ಲ, ಕಿರುತೆರೆ ಹಲವಾರು ಶೋಗಳಲ್ಲಿ ಕಾರುಣ್ಯ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಮಾಜಿ ಸ್ಪರ್ಧಿ ಕೂಡ ಇವರಾಗಿದ್ದಾರೆ.
ಕನ್ನಡ ಸಿನಿಮಾ ರಂಗದಲ್ಲಿ ಮಾತ್ರವಲ್ಲ, ತಮಿಳಿನ ಎರಡು ಚಿತ್ರಗಳಲ್ಲೂ ಕಾರುಣ್ಯ ನಟಿಸಿದ್ದಾರೆ. ಆ ಮೂಲಕ ತಮಿಳು ಪ್ರೇಕ್ಷಕರಿಗೂ ಇವರು ಹತ್ತಿರವಾಗಿದ್ದಾರೆ. ಸದಾ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಸಂವಾದಿಸುವ ಇವರು, ಟ್ರಾವೆಲ್ ಪ್ರಿಯೆ. ಸದಾ ದೇಶಗಳನ್ನು ಸುತ್ತುತ್ತಲೇ ಇರುತ್ತಾರೆ. ಅವುಗಳ ಮಾಹಿತಿಯನ್ನೂ ಹಂಚಿಕೊಳ್ಳುತ್ತಾರೆ.