ಚಂದ್ರಯಾನ- 3 (Chandrayaan-3) ಆಗಸ್ಟ್ 23ರಂದು ಲ್ಯಾಂಡ್ ಆಗುತ್ತಿದೆ. ಇಡೀ ದೇಶವೇ ಈ ಕ್ಷಣಕ್ಕಾಗಿ ಕಾತರದಿಂದ ಎದುರು ನೋಡುತ್ತಿದ್ದಾರೆ. ಎಲ್ಲಾ ಭಾರತೀಯರಿಗೆ ಹೆಮ್ಮೆಯ ಕ್ಷಣ ಎಂದು ಚಂದ್ರಯಾನ ಬಗ್ಗೆ ನಟಿ ಕರೀನಾ ಕಪೂರ್ (Kareena Kapoor) ಮಾತನಾಡಿದ್ದಾರೆ. ಇದನ್ನೂ ಓದಿ:ಮೀನು ತಿನ್ನಿ, ನಿಮ್ಮ ಕಣ್ಣು ಐಶ್ವರ್ಯಾ ರೈ ರೀತಿ ಕಾಣುತ್ತದೆ- ಸಚಿವ ವಿಜಯ್ ಕುಮಾರ್ ಗವಿತ್
ಇಸ್ರೋ ಚಂದ್ರನ ಮೇಲೆ ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ಮಾಡಲು ಸಿದ್ಧತೆ ನಡೆಯುತ್ತಿದೆ. ಸಾಮಾನ್ಯರಿಂದ ಹಿಡಿದು ಅನೇಕ ಸಿನಿ ತಾರೆಯರು ಕೂಡ ಇಸ್ರೋ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಈ ಬಗ್ಗೆ ಕರೀನಾ ಕಪೂರ್ ಕೂಡ ರಿಯಾಕ್ಟ್ ಮಾಡಿ, ಚಂದ್ರಯಾನ-3 ಚಂದ್ರನ ಮೇಲೆ ಇಳಿಯುವುದನ್ನು ನೋಡಲು ಕಾಯುತ್ತಿದ್ದೇನೆ. ಎಲ್ಲಾ ಭಾರತೀಯರಿಗೆ ಇದು ಹೆಮ್ಮೆಯ ಕ್ಷಣವಾಗಿದೆ. ನಾನು ಮಕ್ಕಳ ಜೊತೆ ಕುಳಿತು ನೋಡುವೆ ಎಂದು ಮಾತನಾಡಿದ್ದಾರೆ.
ನಟಿ ಕರೀನಾ ಕಪೂರ್ ಹಾಡಿ ಹೊಗಳಿದ್ರೆ, ಪ್ರಕಾಶ್ ರಾಜ್ (Prakash Raj) ವ್ಯಂಗ್ಯವಾಗಿ ಮಾತನಾಡಿದ್ದಾರೆ. ಅವರ ಪೋಸ್ಟ್ ಕೂಡ ಸಂಚಲನ ಸೃಷ್ಟಿಸಿದೆ. ಚಂದ್ರಯಾನ ಕುರಿತಂತೆ ಟ್ವೀಟ್ ಮಾಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಚಂದ್ರಯಾನ ಇದೀಗ ಕಳುಹಿಸಿರುವ ಫೋಟೋ ಎಂದು ಕ್ಯಾಪ್ಷನ್ ನೀಡಿ ಚಾಯ್ ವಾಲಾ ಫೋಟೋ ಹಾಕಿದ್ದಾರೆ. ಅವರ ಈ ವರ್ತನೆಗೆ ಅನೇಕರು ಕಿಡಿಕಾರಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]