Toxic: ಯಶ್‌ಗೆ ಜೋಡಿಯಾಗಿ ಕನ್ನಡಕ್ಕೆ ಬರುತ್ತಿದ್ದಾರೆ ಕರೀನಾ

Public TV
1 Min Read
yash 1 1

ನ್ಯಾಷನಲ್ ಸ್ಟಾರ್ ಯಶ್ ಅವರ 19ನೇ ಸಿನಿಮಾ ಯಾವುದು ಎಂಬುದಕ್ಕೆ ಈಗಾಗಲೇ ಉತ್ತರ ಸಿಕ್ಕಿದೆ. ‘ಕೆಜಿಎಫ್ 2’ ಸಕ್ಸಸ್ ಬಳಿಕ ‘ಟಾಕ್ಸಿಕ್’ (Toxic) ಚಿತ್ರಕ್ಕೆ ಯಶ್ (Yash) ಕೈಹಾಕಿದ್ದಾರೆ. ಈಗ ಚಿತ್ರದ ನಾಯಕಿ ಬಗ್ಗೆ ಚರ್ಚೆ ಶುರುವಾಗಿದೆ. ಯಶ್ ಸಿನಿಮಾದಲ್ಲಿ ಕರೀನಾ ಕಪೂರ್ (Kareena Kapoor) ಕನ್ನಡಕ್ಕೆ ಬರುವ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ:ಮಗು ಬಗ್ಗೆ ಸುಳಿವು ಕೊಟ್ಟ ದೀಪಿಕಾ ಪಡುಕೋಣೆ

Yashಇದೇ ತಿಂಗಳು ಜನವರಿ 8ಕ್ಕೆ ಯಶ್ ಹುಟ್ಟುಹಬ್ಬವಿದೆ. ಅದೇ ದಿನ ‘ಟಾಕ್ಸಿಕ್’ ಚಿತ್ರದ ಟೀಸರ್ ರಿಲೀಸ್ ಮಾಡುವ ಬಗ್ಗೆ ಟಾಕ್ ಇದೆ. ಇದರ ಜೊತೆಗೆ ಈ ಚಿತ್ರಕ್ಕೆ ಬಾಲಿವುಡ್ ನಟಿಗೆ ಚಿತ್ರತಂಡ ಮಣೆ ಹಾಕುತ್ತಿದ್ದಾರೆ.

kareena kapoor

ಸಂದರ್ಶನವೊಂದರಲ್ಲಿ ನಾನು ‘ಕೆಜಿಎಫ್’ (KGF) ಗರ್ಲ್ ಎಂದು ಯಶ್ ಬಗ್ಗೆ ಹಾಡಿಹೊಗಳಿದ್ದ ನಟಿ ಕರೀನಾ ಕಪೂರ್, ಈ ಹೇಳಿಕೆ ನೀಡಿದ ಒಂದೇ ತಿಂಗಳಲ್ಲೇ ಗುಡ್ ನ್ಯೂಸ್ ಸಿಕ್ಕಿದೆ. ಯಶ್ ಸಿನಿಮಾಗೆ ಕರೀನಾ ಕಪೂರ್ ಸಾಥ್ ನೀಡೋದು ಖಚಿತ ಎಂಬ ಸುದ್ದಿ ಇದೆ.

‘ಕೆಜಿಎಫ್’ ಸೀರಿಸ್ ಬಳಿಕ ಯಶ್ ಟಾಕ್ಸಿಕ್ ಹೇಗೆ ಕಾಣಿಸಿಕೊಳ್ಳಬಹುದು? ಲುಕ್ ಹೇಗಿರುತ್ತೆ? ಇಂತಹದ್ದೇ ಒಂದಿಷ್ಟು ಪ್ರಶ್ನೆಗಳು ಎದ್ದಿದ್ದವು. ಯಶ್ ಬರ್ತ್‌ಡೇಯಂದು ‘ಟಾಕ್ಸಿಕ್’ ಟೀಮ್ ಸರ್ಪ್ರೈಸ್ ಕೊಡಬಹುದು ಎಂಬ ನಿರೀಕ್ಷೆಯಿದೆ. ಇದೇ ದಿನ ಕರೀನಾ ಕಪೂರ್ ಬಗ್ಗೆ‌ ಕೂಡ ಸಿನಿಮಾ ತಂಡ ಏನಾದರೂ ಬಿಗ್ ಅಪ್‌ಡೇಟ್ ಕೊಡುತ್ತಾ ಕಾದುನೋಡಬೇಕಿದೆ.

Share This Article