ಲೋಕಸಭಾ ಚುನಾವಣೆಯಲ್ಲಿ (Loksabha Election 2024) ಬಿಜೆಪಿ ಸ್ಪರ್ಧಿಯಾಗಿದ್ದ ಬಾಲಿವುಡ್ ಬೆಡಗಿ ಕಂಗನಾ ರಣಾವತ್ (Kangana Ranaut) ಮಂಡಿಯಲ್ಲಿ ಗೆದ್ದು ಬೀಗಿದ್ದಾರೆ. ಇದೇ ವೇಳೆ, ತಮ್ಮ ಮೊದಲ ಗೆಲುವನ್ನು ನರೇಂದ್ರ ಮೋದಿ (Narendra Modi) ಅವರಿಗೆ ನಟಿ ಅರ್ಪಿಸಿದ್ದಾರೆ. ಇದೀಗ ಕಂಗನಾ ಆಡಿದ ಮಾತಿನಂತೆ ಬಾಲಿವುಡ್ ಬಿಡ್ತೀರಾ ಎಂದು ಫ್ಯಾನ್ಸ್ ಪ್ರಶ್ನಿಸಿದ್ದಾರೆ. ಇದನ್ನೂ ಓದಿ:ಸುದೀಪ್‌ಗೆ ‘ಸಪ್ತಸಾಗರದಾಚೆ ಎಲ್ಲೋ’ ನಿರ್ದೇಶಕ ಆ್ಯಕ್ಷನ್ ಕಟ್
ನನ್ನ ಜನ್ಮಭೂಮಿ ಹಿಮಾಚಲ ಪ್ರದೇಶದಲ್ಲಿ ಜನರ ಸೇವೆಯನ್ನು ಮುಂದುವರಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಗುರಿಯಲ್ಲಿ ನಾನು ಸೈನಿಕನಾಗಿ ಕೆಲಸ ಮಾಡುತ್ತೇನೆ. ಬಹುಶಃ, ಬೇರೊಬ್ಬರು ತಮ್ಮ ಬ್ಯಾಗ್ ಪ್ಯಾಕ್ ಮಾಡಿ ಹೊರಡಬೇಕಾಗುತ್ತದೆ. ಆದರೆ ನಾನು ಇಲ್ಲಿ ಇದ್ದೇ ಇರುತ್ತೇನೆ ಎಂದು ಗೆಲುವಿನ ಮುಂಚೆ ನಟಿ ಹೇಳಿಕೆ ನೀಡಿದ್ದರು. ಬಳಿಕ ಮೊದಲ ಗೆಲುವಿನ ಖುಷಿಯನ್ನು ನರೇಂದ್ರ ಮೋದಿಯವರಿಗೆ ಕಂಗನಾ ಅರ್ಪಣೆ ಮಾಡಿದ್ದಾರೆ.
ಅಂದಹಾಗೆ, ಲೋಕಸಭಾ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ಮುಂದೆ ಕಂಗನಾ ಅವರು ಪಣ ತೊಟ್ಟಂತೆ ಸ್ಪರ್ಧೆ ಮಾಡಿ ಗೆದ್ದು ತೋರಿಸಿದ್ದಾರೆ. ಇನ್ನೂ ಕಂಗನಾ ಮುತ್ತಜ್ಜ, ಸರ್ಜು ಸಿಂಗ್ ರಣಾವತ್ ಅವರು ಅಂದು ಶಾಸಕರಾಗಿದ್ದರು. ಕಾಂಗ್ರೆಸ್ ಪಕ್ಷದಲ್ಲಿದ್ದರು. ಆದರೆ ಕಂಗನಾ, ಇದೀಗ ಬಿಜೆಪಿ ಪಕ್ಷದಿಂದ ಕಣಕ್ಕೆ ನಿಂತು ಗೆಲುವು ಸಾಧಿಸಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಲೋಕಸಭಾ ಚುನಾವಣೆಯಲ್ಲಿ ಗೆದ್ದರೆ ಬಾಲಿವುಡ್‌ಗೆ ವಿದಾಯ ಹೇಳುತ್ತೇನೆ ಎಂದು ನಟಿ ಹೇಳಿದ್ದರು. ಹಾಗಾದ್ರೆ ನಟಿ ಬಾಲಿವುಡ್‌ಗೆ ಗುಡ್ ಬೈ ಹೇಳ್ತಾರಾ ಎಂದು ನೆಟ್ಟಿಗರಲ್ಲಿ ಈಗಾಗಲೇ ಚರ್ಚೆ ಶುರುವಾಗಿದೆ. ಬಾಲಿವುಡ್ ಬಿಡ್ತೀರಾ ಎಂದು ನಟಿಗೆ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.
ಕಂಗನಾ ಮಾತಿನಲ್ಲಿ ಖಡಕ್ ಆಗಿದ್ದರೂ ಕೂಡ ನಟನೆ ಅಂತ ಬಂದಾಗ ಆ ಪಾತ್ರವೇ ತಾವಾಗಿ ಜೀವ ತುಂಬುತ್ತಿದ್ದರು. ಅದಕ್ಕೆ ಕ್ವೀನ್, ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ, ಕ್ರಿಶ್ 3, ಫ್ಯಾಷನ್ ಚಿತ್ರಗಳು ತಾಜಾ ಉದಾಹರಣೆ. ಗೆದ್ದರೆ ಬಾಲಿವುಡ್ ಬಿಡ್ತೀನಿ ಎಂದ ಕಂಗನಾ ಆಡಿರುವ ಮಾತಿನ ಬಗ್ಗೆ ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದಾರೆ. ಕಂಗನಾ ಮುಂದಿನ ನಡೆಯೇನು ಎಂಬುದು ಕಾದುನೋಡಬೇಕಿದೆ.