ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಪಟಾಕಿಗಳನ್ನು ಬ್ಯಾನ್ ಮಾಡುವಂತೆ ಆಗ್ರಹಿಸುತ್ತಿರುವ ವಿರುದ್ಧ ಇನ್‍ಸ್ಟಾಗ್ರಾಮ್‍ವೊಂದರಲ್ಲಿ ಪೋಸ್ಟ್ ಹಾಕಿರುವುದು ಸಖತ್ ಸುದ್ದಿಯಾಗುತ್ತಿದೆ.
Advertisement
ಸದ್ಗುರು ಪಟಾಕಿ ಬಗ್ಗೆ ಹೇಳಿರುವ ವಿಡಿಯೋವೊಂದನ್ನು ಹಂಚಿಕೊಂಡು, ಕಂಗನಾ ಅವರ ಅಭಿಪ್ರಾಯ ಹಂಚಿಕೊಂಡಿದ್ದಾರೆ. ದೀಪಾವಳಿ ಹೋರಾಟಗಾರರಿಗೆ ಇದು ಸರಿಯಾದ ಉತ್ತರ. ಅಂತಹವರು ಮೂರು ದಿನ ಆಫೀಸ್‍ಗೆ ಕಾರ್ ತೆಗೆದುಕೊಂಡು ಹೋಗಬೇಡಿ. ಮಿಲಿಯನ್‍ಗಟ್ಟಲೇ ಮರಗಳನ್ನು ವಿಶ್ವದಾದ್ಯಂತ ನೆಟ್ಟಿ ರೆಕಾರ್ಡ್ ಮಾಡಿದವರು ಈ ಮನುಷ್ಯ ಎಂದು ಕಂಗನಾ ರಣಾವತ್ ಅವರು ಇನ್‍ಸ್ಟಾಗ್ರಾಮ್‍ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಅಪ್ಪು ಸಮಾಧಿ ಬಳಿ ನೃತ್ಯ ನಮನ ಸಲ್ಲಿಸಿದ ಪುಟಾಣಿಗಳು
Advertisement
Advertisement
ಸದ್ಗುರು ಹೇಳಿದ್ದೇನು: ಚಿಕ್ಕವರಿದ್ದಾಗ ಸೆಪ್ಟೆಂಬರ್ ತಿಂಗಳು ಶುರುವಾಗುತ್ತಿದ್ದಂತೆ ಪಟಾಕಿ ಹೊಡೆಯುವ ಕನಸ್ಸು ಕಾಣುತ್ತಿದ್ದೆವು. ಕೆಲ ವರ್ಷಗಳಿಂದ ನಾನು ಪಟಾಕಿ ಹಚ್ಚಿಲ್ಲ. ದೀಪಾವಳಿ ಬರುವ ತನಕವೂ ಪಟಾಕಿ ಹೊಡೆಯುತ್ತಿದ್ದೆವು. ಆಮೇಲೆ ಒಂದು ತಿಂಗಳ ಬಳಿಕವೂ ಪಟಾಕಿ ಹೊಡೆಯುತ್ತಿದ್ದೆವು. ಕೆಲವರು ಪರಿಸರದ ಬಗ್ಗೆ ಇದ್ದಕ್ಕಿದ್ದಂತೆ ಕಾಳಜಿ ಮಾಡಿ ಮಕ್ಕಳು ಪಟಾಕಿ ಹೊಡೆಯಬಾರದು ಅಂತ ಹೇಳುತ್ತಿದ್ದಾರೆ, ಅದು ಸರಿಯಲ್ಲ. ಗಾಳಿ, ಪರಿಸರದ ಬಗ್ಗೆ ಕಾಳಜಿ ಹೊಂದಿರುವವರು 3 ದಿನ ಆಫೀಸ್‍ಗೆ ಕಾರ್ ಓಡಿಸಬೇಡಿ, ಮಕ್ಕಳಿಗೆ ಪಟಾಕಿ ಹೊಡೆಯಲು ಬಿಡಿ. ಈ ತ್ಯಾಗ ಮಾಡುವುದರಿಂದ ಮಕ್ಕಳು ಪಟಾಕಿ ಹೊಡೆದು ಎಂಜಾಯ್ ಮಾಡಬಹುದು ಎಂದು ಸದ್ಗುರು ಹೇಳಿದ್ದಾರೆ. ಇದನ್ನೂ ಓದಿ: ಬ್ಲೇಡ್ ನಿಂದ ಅಪ್ಪು ಎಂದು ಕೈ ಮೇಲೆ ಕುಯ್ದುಕೊಂಡ ವಿದ್ಯಾರ್ಥಿನಿ
Advertisement
ನಟ ಅನಿಲ್ ಕಪೂರ್ ಪುತ್ರಿ ರಿಯಾ ಕಪೂರ್ ಅವರು ಪಟಾಕಿ ಹೊಡೆಯೋದು ಬಹಳ ಹಳೆಯ ಸಂಪ್ರದಾಯ, ಜವಾಬ್ದಾರಿಯುತವಲ್ಲದ ದೀಪಾವಳಿ ಹಬ್ಬದ ಸಂಪ್ರದಾಯ ಎಂದು ಪೋಸ್ಟ್ ಹಾಕಿಕೊಂಡಿದ್ದರು. ಅದಾದ ನಂತರದಲ್ಲಿ ಕಂಗನಾ ಈ ಪೋಸ್ಟ್ ಹಾಕಿದ್ದಾರೆ.