ಈಗೆಲ್ಲಾ ಮಹಿಳೆಯರು ಡ್ರೈವಿಂಗ್ ಮಾಡೋದು ಸಾಮಾನ್ಯ. ಆದರೆ ಬಾಲಿವುಡ್ ನಟಿ ಕಂಗನಾಗೆ (Kangana Ranaut) ಮಾತ್ರ ಜೀವನದಲ್ಲಿ ಕಾರು ಓಡಿಸೋದನ್ನ ಕಲಿಯುವುದೇ ದೊಡ್ಡ ಸಮಸ್ಯೆಯಾಗಿತ್ತು ಅನ್ನೋ ವಿಚಾರವನ್ನ ಇತ್ತೀಚೆಗೆ ಹೇಳಿದ್ದಾರೆ. ಗಾಡ್‌ಫಾದರ್ ಇಲ್ಲದೆ ಸಿನಿಮಾ ಹಾಗೂ ರಾಜಕೀಯದಲ್ಲಿ ಕ್ಷೇತ್ರಗಳಲ್ಲಿ ಶಕ್ತಿ ಪ್ರದರ್ಶನ ಮಾಡಿರುವಾಕೆ ನಟಿ ಕಮ್ ಸಂಸದೆ ಕಂಗನಾ ರಣಾವತ್. ಆದರೆ ಇದುವರೆಗೂ ಇವರಿಗೆ ಕಾರು ಚಾಲನೆ ಮಾತ್ರ ಸಾಧ್ಯವಾಗಲಿಲ್ಲ ಅನ್ನೋದೇ ದುರಂತ. ಕಾರು ಡ್ರೈವಿಂಗ್ ಟ್ರೈನಿಂಗ್ ವೇಳೆ, ಎರಡು ಬಾರಿ ಆಗಿದ್ದ ಅನಾಹುತದಿಂದ ನಿರಾಸೆಗೊಂಡಿದ್ದ ನಟಿ. ಮುಂದೆ ಕಾರು ಓಡಿಸುವ ಪ್ರಯತ್ನವನ್ನೇ ನಿಲ್ಲಿಸಿ ಬಿಟ್ಟಿದ್ದರಂತೆ ಕಂಗನಾ. ಇದನ್ನೂ ಓದಿ:ಕೊನೆಗೂ ಕಾರ್ತಿಕ್ ಮಹೇಶ್ ಮನೆಗೆ ಬಂತು ಬಿಗ್ ಬಾಸ್ ಶೋನಲ್ಲಿ ಗೆದ್ದ ಕಾರು
ಸದ್ಯಕ್ಕೆ ‘ಎಮರ್ಜೆನ್ಸಿ’ ಸಿನಿಮಾದ ಸಂದರ್ಶನದಲ್ಲಿ ಮಾತನಾಡಿರುವ ಕಂಗನಾ, ಕಾರು ಓಡಿಸೋದನ್ನ ಕಲಿಯಲು ಮಾಡಿದ್ದ ಸಾಹಸಗಳ ಬಗ್ಗೆ ವಿವರಿಸಿದ್ದಾರೆ. ಇಂಡಸ್ಟ್ರಿಗೆ ಬಂದ ಆರಂಭದಲ್ಲಿ ಕಾರು ಓಡಿಸುವ ಮನಸಾಗಿ ಮುಂಬೈನ ಬಾಂದ್ರಾದಲ್ಲಿ ಡ್ರೈವಿಂಗ್ ಸ್ಕೂಲ್‌ವೊಂದಕ್ಕೆ ಸೇರಿಕೊಂಡಿದ್ರಂತೆ. ಅದೇ ಶಾಲೆಯಲ್ಲೇ ಆಗಷ್ಟೇ ಇಂಡಸ್ಟ್ರಿಗೆ ಕಾಲಿಟ್ಟಿದ್ದ ಇನ್ನೋರ್ವ ನಟಿ ದೀಪಿಕಾ ಪಡುಕೋಣೆ (Deepika Padukone) ಕೂಡ ತರಬೇತಿಗೆ ಬಂದಿರುತ್ತಾರೆ. ಸುಮಾರು 2006-07ರ ವೇಳೆ, ಹೀಗೆ ಒಂದು ದಿನ ಲೈಸೆನ್ಸ್ ಪಡೆಯಬೇಕಾದ ದಿನವೇ ಕಂಗನಾ ತಮ್ಮ ಕಾರನ್ನ ಬ್ರೇಕ್ ಒತ್ತುವ ಬದಲು ಆ್ಯಕ್ಸಿಲೇಟರ್ ಒತ್ತಿದ ಪರಿಣಾಮ ಮುಂದಿರುವ ಆಟೋ ರಿಕ್ಷಾಗೆ ಗುದ್ದಿದ್ರಂತೆ ಆ ಘಟನೆ ಬಳಿಕ ಭಯದಿಂದ ಕಂಗನಾ ಕಾರು ಓಡಿಸುವ ಆಸೆ ಕೈಬಿಡ್ತಾರೆ.
ಇದೇ ಕಂಗನಾಗೆ ಮತ್ತೆ ಐದಾರು ವರ್ಷಗಳ ಬಳಿಕ ಕಾರು ಓಡಿಸುವ ಆಸೆ ಹುಟ್ಟಿಸುವುದು ಡ್ರೈವಿಂಗ್ ಸ್ಕೂಲ್ ಕ್ಲಾಸ್‌ಮೇಟ್ ಆಗಿದ್ದ ನಟಿ ದೀಪಿಕಾ ಪಡುಕೋಣೆ. ಯಾಕೆಂದರೆ ಕಾರ್ಯಕ್ರಮವೊಂದರಲ್ಲಿ ಕಂಗನಾ ಎದುರೇ ದೀಪಿಕಾ ಪಡುಕೋಣೆ ತಾವೇ ಕಾರ್ ಡ್ರೈವ್ ಮಾಡಿಕೊಂಡು ಬರುತ್ತಾರೆ. ಇದನ್ನ ಕಂಡ ಕಂಗನಾಗೆ ಮತ್ತೆ ಸ್ವತಂತ್ರವಾಗಿ ಕಾರು ಓಡಿಸೋದನ್ನ ಕಲಿಯುವ ಆಸೆಯಾಗುತ್ತೆ. ಮತ್ತೆ ಡ್ರೈವಿಂಗ್ ಸ್ಕೂಲ್‌ಗೆ ಹೋಗ್ತಾರೆ. ಆದರೆ ಎರಡನೇ ಬಾರಿಯೂ ನಟಿ ವಿಫಲರಾಗುತ್ತಾರೆ. ತರಬೇತಿ ದಿನ ತಮ್ಮ BMW ಕಾರ್‌ನ್ನ ಪೊಲೀಸ್ ಜೀಪಿನ ಮೇಲೆ ಹತ್ತಿಸಿಬಿಡ್ತಾರೆ. ಈ ಪರಿಣಾಮ, ಕಂಗನಾ ಕಾರು ಬಹಳವೇ ಸ್ಕ್ರ್ಯಾಚ್ ಆಗಿರುತ್ತೆ. ಅಲ್ಲಿಗೆ ಕಾರು ಓಡಿಸುವ ದುಸ್ಸಾಹಸ ಬೇಡ ಎಂದು ತೀರ್ಮಾನಕ್ಕೆ ಬರುತ್ತಾರಂತೆ ಕಂಗನಾ. ಹೀಗೆ ಸಂಸದೆ ಕಂಗನಾ ಡ್ರೈವಿಂಗ್ ಕಥೆಯನ್ನ ಬಿಚ್ಚಿಟ್ಟಿದ್ದಾರೆ.