‘ಮಗಧೀರ’ ನಟಿ ಕಾಜಲ್ ಅಗರ್ವಾಲ್ (Kajal Aggarwal) ಮದುವೆ, ತಾಯ್ತನದ ಬಳಿಕ ಚಿತ್ರರಂಗದಲ್ಲಿ ಮತ್ತಷ್ಟು ಆ್ಯಕ್ಟೀವ್ ಆಗಿದ್ದಾರೆ. ಇದೀಗ ಅವರಿಗೆ ಮಹಿಳಾ ಪ್ರಧಾನ ಸಿನಿಮಾಗಳ ಆಫರ್‌ಗಳು ಅರಸಿ ಬರುತ್ತಿವೆ. ಇದೀಗ ಸಂದರ್ಶನವೊಂದರಲ್ಲಿ ಮದುವೆಯಾದ (Marraige) ನಟಿಯರಿಗೆ ದಕ್ಷಿಣ ಚಿತ್ರರಂಗಕ್ಕಿಂತ ಬಾಲಿವುಡ್ ಬೆಸ್ಟ್ ಎಂದು ನಟಿ ಬಣ್ಣಿಸಿದ್ದಾರೆ.
2 ವರ್ಷಗಳ ಹಿಂದೆ ಉದ್ಯಮಿ ಗೌತಮ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ, ಬಳಿಕ ಚೊಚ್ಚಲ ಮಗುವನ್ನು ಕೂಡ ಬರಮಾಡಿಕೊಂಡರು. ಇದೀಗ ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಆಗಿರುವ ನಟಿಗೆ ರೊಮ್ಯಾಂಟಿಕ್ ಸಿನಿಮಾಗಳು ಸಿಗುತ್ತಿಲ್ಲವಂತೆ. ಬರೀ ಮಹಿಳಾ ಪ್ರಧಾನ, ಪತ್ತೆಧಾರಿ ಕಥೆಗಳು ಅವರನ್ನು ಅರಸಿ ಬರುತ್ತಿವೆಯಂತೆ. ಹಾಗಾಗಿ ಈ ಬಗ್ಗೆ ನಟಿ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ:ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ಟ ‘ಅರಸು’ ನಟಿ- ತೆಲುಗಿಗೆ ಮೀರಾ ಜಾಸ್ಮಿನ್ ಕಮ್ ಬ್ಯಾಕ್
ಮದುವೆಯ ಬಳಿಕ ದೀಪಿಕಾ ಪಡುಕೋಣೆ (Deepika Padukone) ‘ಫೈಟರ್’ ಸಿನಿಮಾದಲ್ಲಿ ಆ್ಯಕ್ಷನ್ ಕಮ್ ರೊಮ್ಯಾಂಟಿಕ್ ಸಿನಿಮಾ ಮಾಡಿದರು. ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದಲ್ಲಿ ರಣವೀರ್ ಜೊತೆ ಹಾಟ್ ಆಗಿ ಆಲಿಯಾ (Alia Bhatt) ಕಾಣಿಸಿಕೊಂಡರು. ಆದರೆ ದಕ್ಷಿಣ ಸಿನಿಮಾದಲ್ಲಿ ಈ ರೀತಿ ಇಲ್ಲ. ರೊಮ್ಯಾಂಟಿಕ್ ಸಿನಿಮಾಗಳಿಂದ ಮದುವೆಯಾದ ನಟಿಯರನ್ನು ಹೊರಗಿಡುತ್ತಾರೆ. ಈ ವಿಚಾರದಲ್ಲಿ ದಕ್ಷಿಣಕ್ಕಿಂತ ಬಾಲಿವುಡ್ ಬೆಸ್ಟ್ ಆಗಿದೆ. ಈ ಮನಸ್ಥಿತಿ ಎಲ್ಲಾ ಚಿತ್ರರಂಗದಲ್ಲೂ ಬದಲಾಗಬೇಕು ಎಂದು ಕಾಜಲ್ ಮಾತನಾಡಿದ್ದಾರೆ.
ಅಂದಹಾಗೆ, ಕಮಲ್ ಹಾಸನ್ ಜೊತೆ ‘ಇಂಡಿಯನ್ 2’ ಸಿನಿಮಾ, ಬಾಲಿವುಡ್‌ನ ‘ಉಮಾ’ ಎಂಬ ಸಿನಿಮಾದಲ್ಲಿ ಕಾಜಲ್ ನಟಿಸಿದ್ದಾರೆ.