ತಮಿಳಿನ ನಟಿ ಜ್ಯೋತಿಕಾ (Jyothika) ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ರಾಜ್‌ಕುಮಾರ್ ರಾವ್ ನಿರ್ದೇಶನದ ಹಿಂದಿ ‘ಶ್ರೀಕಾಂತ್’ (Srikanth) ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಆನ್‌ಲೈನ್ ಮೂಲಕ ಮತದಾನ ಮಾಡಿದ್ದೇನೆ ಎಂದು ಹೇಳಿಕೆ ನೀಡುವ ಮೂಲಕ ಸೂರ್ಯ ಪತ್ನಿ ಜ್ಯೋತಿಕಾ ಫುಲ್ ಟ್ರೋಲ್ ಆಗಿದ್ದಾರೆ.
ಸಂದರ್ಶಕರು, ಈ ಬಾರಿ ಏಕೆ ವೋಟ್ ಮಾಡಲು ಬರಲಿಲ್ಲ? ಎಂದು ಜ್ಯೋತಿಕಾಗೆ ಕೇಳಿದ್ದರು. ಆಗ ನಾನು ಪ್ರತಿ ವರ್ಷ ವೋಟ್ ಮಾಡುತ್ತೇನೆ ಎಂದಿದ್ದಾರೆ. ನಂತರ ಮತದಾನ (Vote) ಪ್ರತಿ ವರ್ಷ ನಡೆಯಲ್ಲ ಎಂದು ಸಂದರ್ಶಕರು ಹೇಳಿದರು. ಇದನ್ನು ಜ್ಯೋತಿಕಾ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ:ಹೊಸ ಸಿನಿಮಾದ ಮುಹೂರ್ತ ಸಂಭ್ರಮದಲ್ಲಿ ಜಾನ್ವಿ ಕಪೂರ್
ಮತದಾನದ ಸಂದರ್ಭದಲ್ಲಿ ನಾವು ನಮ್ಮ ರಾಜ್ಯದಲ್ಲಿ ಇಲ್ಲದೆ ಇರಬಹುದು, ನಮಗೆ ಅನಾರೋಗ್ಯ ಆಗಿರಬಹುದು. ಅದು ನಮ್ಮ ಖಾಸಗಿ ವಿಚಾರ. ಕೆಲವೊಮ್ಮೆ ಖಾಸಗಿಯಾಗಿ ವೋಟ್ ಮಾಡಿ ಬಂದಿರುತ್ತೇವೆ, ಆನ್‌ಲೈನ್‌ನಲ್ಲಿ ವೋಟ್ ಮಾಡಿರಬಹುದು. ಎಲ್ಲವೂ ಪಬ್ಲಿಶ್ ಆಗಬೇಕೆಂದಿಲ್ಲ. ಜೀವನಕ್ಕೆ ಒಂದು ಖಾಸಗಿ ಭಾಗವಿದೆ ಮತ್ತು ಅದನ್ನು ನಾವು ಗೌರವಿಸಬೇಕು ಎಂದಿದ್ದಾರೆ ಜ್ಯೋತಿಕಾ. ಇದೀಗ ಆನ್‌ಲೈನ್ ವೋಟ್ ಮಾಡಿರಬಹುದು ಎಂದು ಹೇಳಿದ ಮಾತೇ ಟ್ರೋಲಿಗರ ಬಾಯಿಗೆ ಆಹಾರವಾಗಿದೆ.
ಆನ್‌ಲೈನ್‌ನಲ್ಲಿ ಮತದಾನ ಮಾಡುವ ಅವಕಾಶವಿದ್ದರೆ ನಮಗೂ ಹೇಳಿ. ನಾವು ಮಾಡುತ್ತೇವೆ ಎಂದು ನೆಟ್ಟಿಗರು ನಟಿಯ ಕಾಲೆಳೆದಿದ್ದಾರೆ. ಜ್ಯೋತಿಕಾ ಅವರೇ ಅಶಿಕ್ಷಿತರಿಗೂ ಗೊತ್ತು ಚುನಾವಣೆ ಪ್ರತಿ ವರ್ಷ ನಡೆಯಲ್ಲ, 5 ವರ್ಷಕೊಮ್ಮೆ ಎಂದು. ಭಾರತದಲ್ಲಿ ಇದುವರೆಗೂ ನಾವು ಆನ್‌ಲೈನ್ ವೋಟಿಂಗ್ ಬಗ್ಗೆ ನಾವು ಕೇಳಿಲ್ಲ ಎಂದು ಜ್ಯೋತಿಕಾಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ವೋಟ್ ಮಾಡಿಲ್ಲ ಎಂದು ನೇರವಾಗಿಯೇ ಒಪ್ಪಿಕೊಳ್ಳಬಹುದಲ್ಲ. ಅದನ್ನು ಹೀಗೆ ಯಾಕೆ ಹೇಳಬೇಕು ಎಂದೆಲ್ಲಾ ನಟಿಗೆ ನೆಟ್ಟಿಗರು ಕಿವಿಹಿಂಡಿದ್ದಾರೆ.