ಕರಾವಳಿ ಬೆಡಗಿ ಜ್ಯೋತಿ ರೈ (Jyothi Rai) ಮತ್ತೆ ಹಾಟ್ ಫೋಟೋಸ್ ಹಂಚಿಕೊಳ್ಳುವ ಮೂಲಕ ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ್ದಾರೆ. ನಟಿ ಹಾಟ್ ಅವತಾರ ತಾಳಿರುವ ಫೋಟೋಸ್ ನೋಡಿ ಪಡ್ಡೆಹುಡುಗರು ಫಿದಾ ಆಗಿದ್ದಾರೆ.
ಕನ್ನಡದ ಈ ಬ್ಯೂಟಿಗೆ ಸೌತ್‌ನಲ್ಲಿ ಬೇಡಿಕೆ ಶುರುವಾಗಿದೆ. ಒಂದಲ್ಲಾ ಒಂದು ವಿಚಾರದ ಮೂಲಕ ಸುದ್ದಿಯಾಗುವ ಜ್ಯೋತಿ ರೈ ಸದ್ಯ ಬೋಲ್ಡ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ.
ಗೋಲ್ಡನ್ ಕಲರ್ ಟಾಪ್ ಧರಿಸಿ ನಟಿ ಮಿಂಚಿದ್ದಾರೆ. ಜ್ಯೋತಿಯ ಮಾದಕ ನೋಟಕ್ಕೆ ಎಲ್ಲರೂ ಕಳೆದು ಹೋಗಿದ್ದಾರೆ. ವಿವಿಧ ಭಂಗಿಯಲ್ಲಿ ಒಟ್ಟು 6 ಗ್ಲ್ಯಾಮರಸ್ ಫೋಟೋಗಳನ್ನು ಜ್ಯೋತಿ ರೈ ಶೇರ್ ಮಾಡಿದ್ದಾರೆ.
ಜ್ಯೋತಿ ರೈ ಫೋಟೋ ನೋಡಿದ ನೆಟ್ಟಿಗರು ಟ್ಯಾಟೂ ಮತ್ತು ನಿಮ್ಮ ಪತಿ ಸಖತ್ ಲಕ್ಕಿ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಸದ್ಯ ಜ್ಯೋತಿ ಅವರು ಪಡ್ಡೆಹುಡುಗರ ಆರಾಧ್ಯ ದೇವತೆಯಾಗಿದ್ದಾರೆ ಎಂದರೆ ತಪ್ಪಾಗಲಾರದು. ಇದನ್ನೂ ಓದಿ:ಬಹುಕಾಲದ ಗೆಳೆಯನ ಜೊತೆ ತೆಲುಗು ನಟಿ ಮೇಘಾ ಆಕಾಶ್ ನಿಶ್ಚಿತಾರ್ಥ
ಅಂದಹಾಗೆ, ಇತ್ತೀಚೆಗೆ ಅಶ್ಲೀಲ ಮೆಸೇಜ್‌ಗೆ ಬೇಸತ್ತ ನಟಿ ಇನ್ಸ್ಟಾಗ್ರಾಂ ಖಾತೆಯಲ್ಲಿ 1 ಸಾವಿರ ಫಾಲೋವರ್ಸ್ ಅನ್ನು ಬ್ಲಾಕ್ ಮಾಡಿದ್ದರು. ಈ ವಿಷ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದನ್ನೂ ಓದಿ:‘ಸ್ತ್ರೀ 2’ ನಟಿಗೆ ಹೆಚ್ಚಿದ ಬೇಡಿಕೆ- ಹೃತಿಕ್ ರೋಷನ್‌ಗೆ ಶ್ರದ್ಧಾ ಕಪೂರ್ ಜೋಡಿ
ಇನ್ಸ್ಟಾಗ್ರಾಂ ಬ್ಲಾಕ್ ಫೀಚರ್ ಅನ್ನು ನಾನು ಉತ್ತಮವಾಗಿ ಬಳಸಿಕೊಂಡಿದ್ದೇನೆ. ಕಾಮೆಂಟ್ ಸೆಕ್ಷನ್‌ನಲ್ಲಿ ಕೆಟ್ಟ ಹಾಗೂ ಅಗೌರವದಿಂದ ಮೆಸೇಜ್ ಮಾಡುವ ಮೂಲಕ ಕೆಟ್ಟ ವರ್ತನೆ ತೋರಿದ್ದ 1 ಸಾವಿರಕ್ಕೂ ಅಧಿಕ ವೈಯಕ್ತಿಕ ಖಾತೆಗಳನ್ನು ನಾನು ತೆಗೆದು ಹಾಕಿದ್ದೇನೆ. ಅವರೊಂದಿಗೆ ಮಾತುಕತೆ ಮಾಡುವ ಮೂಲಕ ಚರ್ಚೆ ಮಾಡೋದು ನನಗೆ ಇಷ್ಟವಿಲ್ಲ. ಪಾಸಿಟಿವ್ ಆಗಿ ಪರಿಸರವನ್ನು ರಚನೆ ಮಾಡಲು ನೀವು ಕೂಡ ಇಂಥ ಟೂಲ್‌ಗಳನ್ನು ಬಳಕೆ ಮಾಡಿ ಎಂದಿದ್ದರು. ಈ ವಿಚಾರದಲ್ಲಿ ಯಾರಾದರೂ ಕಲಿಯಬೇಕು ಎಂದಿದ್ದರೆ, ಅದಕ್ಕೆ ನಾನು ಸ್ವಾಗತ ನೀಡುತ್ತಿದ್ದೇನೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಜ್ಯೋತಿ ರೈ ಬರೆದುಕೊಂಡಿದ್ದರು.
ಇನ್ನೂ ಕನ್ನಡದ ಬಿಗ್ ಬಾಸ್ ಸೀಸನ್ 11ಕ್ಕೆ (Bigg Boss Kannada 11) ತೆರೆಮರೆಯಲ್ಲಿ ಭಾರೀ ತಯಾರಿ ನಡೆಯುತ್ತಿದೆ. ಜೊತೆಗೆ ಈ ಶೋನಲ್ಲಿ ಜ್ಯೋತಿ ರೈ ಹೆಸರು ಕೇಳಿ ಬಂದ ಬೆನ್ನಲ್ಲೇ, ನಾನು ಈ ಕಾರ್ಯಕ್ರಮದ ಭಾಗವಾಗುತ್ತಿಲ್ಲ. ಸಿಕ್ಕ ಆಫರ್ ಅನ್ನು ರಿಜೆಕ್ಟ್ ಮಾಡಿದ್ದೇನೆ. ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿದ್ದರಿಂದ ಬಿಗ್ ಬಾಸ್ ಶೋಗೆ ಬರಲ್ಲ ಎಂದು ನಟಿ ಸ್ಪಷ್ಟನೆ ನೀಡಿದ್ದರು.
ಇನ್ನೂ ಕನ್ನಡದ ಗೆಜ್ಜೆ ಪೂಜೆ, ಮೂರು ಗಂಟು, ಬಂದೇ ಬರತಾವ ಕಾಲ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ಜ್ಯೋತಿ ನಟಿಸಿದ್ದಾರೆ. ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.