ತಿರುಪತಿ ತಿಮ್ಮಪ್ಪನ ದರ್ಶನ ಮಾಡಲು ಬಾಯ್ ಫ್ರೆಂಡ್ ಶಿಖರ್ ಪಹರಿಯಾ (Shikhar Paharia) ಜೊತೆ ಹೋಗಿದ್ದಾರೆ ಬಾಲಿವುಡ್ ನಟಿ ಜಾನ್ವಿ ಕಪೂರ್. ನಿನ್ನೆಯಷ್ಟೇ ಅವರು ಶಿಖರ್ ಜೊತೆ ತಿರುಪತಿಗೆ (Tirupati) ಬಂದು, ಒಟ್ಟಿಗೆ ದೇವರ ದರ್ಶನ ಮಾಡಿದ್ದಾರೆ. ಆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಮದುವೆಗೂ ಮುಂಚೆ ಏನಿದು? ಎಂದು ಹಲವರು ಪ್ರಶ್ನೆಯನ್ನೂ ಮಾಡಿದ್ದಾರೆ.
ಒಂದು ಕಡೆ ಜಾನ್ವಿ ಟೆಂಪಲ್ ರನ್ ಮಾಡುತ್ತಿದ್ದರೆ, ಮತ್ತೊಂದು ಕಡೆ ಅವರು ಮತ್ತೊಂದು ಚಿತ್ರಕ್ಕೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ‘ದೇವರ’ ಸಿನಿಮಾದಲ್ಲಿ ಜ್ಯೂ.ಎನ್‌ಟಿಆರ್‌ಗೆ (Shivarajkumar) ಹೀರೋಯಿನ್ ಆಗಿ ನಟಿಸಿದ ಬೆನ್ನಲ್ಲೇ ರಾಮ್ ಚರಣ್- ಶಿವಣ್ಣ ಕಾಂಬಿನೇಷನ್ ಸಿನಿಮಾಗೆ ಜಾನ್ವಿ ಕಪೂರ್ (Jhanvi Kapoor) ನಾಯಕಿಯಾಗಿದ್ದಾರೆ.
ಬುಚ್ಚಿಬಾಬು ಸನಾ ನಿರ್ದೇಶನದ ಹೊಸ ಸಿನಿಮಾದಲ್ಲಿ ರಾಮ್ ಚರಣ್ (Ram Charan) ಜೊತೆ ಬಹುಮುಖ್ಯ ಪಾತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ ಕೂಡ ನಟಿಸುತ್ತಿದ್ದಾರೆ. ರಾಮ್ ಚರಣ್ ಜೋಡಿಯಾಗಿ ಬಾಲಿವುಡ್ ಹಾಟ್ ಬ್ಯೂಟಿ ಜಾನ್ವಿ ಕಪೂರ್ ಕಾಣಿಸಿಕೊಳ್ತಾರೆ. ನಟನೆಗೆ ಹೆಚ್ಚು ಪ್ರಾಮುಖ್ಯತೆ ಇರುವ ಭಿನ್ನ ಪಾತ್ರದಲ್ಲಿ ನಟಿ ಕಾಣಿಸಿಕೊಳ್ತಿದ್ದಾರೆ.
ಕೆಲ ತಿಂಗಳುಗಳ ಹಿಂದೆ ಬುಚ್ಚಿಬಾಬು ಸನಾ ಅವರು ಬೆಂಗಳೂರಿಗೆ ಆಗಮಿಸಿ ಶಿವಣ್ಣಗೆ ಭೇಟಿಯಾಗಿ ಕಥೆ ಹೇಳಿದ್ದರು. ಶಿವಣ್ಣಗೂ ಕಥೆ ಕೇಳಿ ಥ್ರಿಲ್ ಆಗಿ ಈ ಚಿತ್ರದ ಭಾಗವಾಗಲು ಓಕೆ ಎಂದಿದ್ದಾರೆ. ಸದ್ಯದಲ್ಲೇ ಸಿನಿಮಾ ಶುರುವಾಗಲಿದೆ.
ರಾಮ್ ಚರಣ್ ಮತ್ತು ಶಿವಣ್ಣ ಸಾಕಷ್ಟು ವರ್ಷಗಳಿಂದ ಪರಿಚಿತರು. ಇಬ್ಬರಿಗೂ ಉತ್ತಮ ಒಡನಾಟವಿದೆ. ಸಿನಿಮಾಗಾಗಿ ಮೊದಲ ಬಾರಿಗೆ ಜೊತೆಯಾಗ್ತಿರೋದ್ರಿಂದ ಶಿವಣ್ಣ- ಚರಣ್ ಕಾಂಬೋ ನೋಡಲು ಫ್ಯಾನ್ಸ್ಗೆ ಕಾಯ್ತಿದ್ದಾರೆ.