ಬಾಲಿವುಡ್ ಖ್ಯಾತ ನಟಿ ಶ್ರೀದೇವಿ (Sridevi) ಪುತ್ರಿ ಜಾನ್ವಿ ಕಪೂರ್ (Janhvi Kapoor) ಮತ್ತು ಶಿಖರ್ ಪಹಾರಿಯಾ (Shikhar Paharia) ಡೇಟಿಂಗ್ ವಿಚಾರ ಹೊಸದೇನೂ ಅಲ್ಲ. ಹಲವು ವರ್ಷಗಳಿಂದ ಅವರು ಪ್ರೀತಿಸುತ್ತಿದ್ದರು ಎನ್ನುವುದಕ್ಕೆ ಹಲವು ಸಾಕ್ಷಿಗಳು ಸಿಗುತ್ತವೆ. ಆದರೆ, ಈ ಮಧ್ಯ ಇಬ್ಬರೂ ದೂರ ದೂರು ಆಗಿದ್ದರು ಅನ್ನುವ ಮಾತಿತ್ತು. ಇಬ್ಬರ ನಡುವೆ ಹೊಂದಾಣಿಕೆಯ ಕಾರಣದಿಂದಾಗಿ ಬ್ರೇಕ್ ಅಪ್ ಆಗಿದೆ ಎಂದು ಹೇಳಲಾಗಿತ್ತು. ಆದರೆ, ಮತ್ತೆ ಇದೀಗ ಜೋಡಿ ಒಂದಾಗಿದೆ.
Advertisement
ಜಾನ್ವಿ ಕಪೂರ್ ಮತ್ತು ಶಿಖರ್ ಇತ್ತೀಚಿನ ದಿನಗಳಲ್ಲಿ ಇಬ್ಬರೂ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲ ತಿಂಗಳ ಹಿಂದೆಯಷ್ಟೇ ಒಟ್ಟಿಗೆ ವಿದೇಶ ಪ್ರಯಾಣವನ್ನೂ ಮಾಡಿದ್ದರು. ಅಲ್ಲದೇ, ಅಂಬಾನಿ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲೂ ಈ ಜೋಡಿ ಕಾಣಿಸಿಕೊಂಡಿತ್ತು. ಇದೀಗ ತಿರುಪತಿಯಲ್ಲಿ ಜಾನ್ವಿ ಜೊತೆ ಶಿಖರ್ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಅವಳಿ ಮಕ್ಕಳ ಹೆಸರನ್ನು ರಿವೀಲ್ ಮಾಡಿದ ನಟಿ ನಯನತಾರಾ
Advertisement
Advertisement
ಬಾಯ್ ಫ್ರೆಂಡ್ ಜೊತೆ ಇಂದು ಬೆಳ್ಳಂಬೆಳಗ್ಗೆ ತಿರುಪತಿಗೆ ಬಂದಿದ್ದ ಜಾನ್ವಿ, ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಇಬ್ಬರೂ ತಿರುಪತಿಗೆ ಬಂದಿರುವ ಮತ್ತು ಪೂಜೆ ಸಲ್ಲಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇಬ್ಬರೂ ಒಟ್ಟಿಗೆ ದೇವಸ್ಥಾನಕ್ಕೆ ಬಂದಿದ್ದಾರೆ ಎಂದರೆ, ಮುಂದೊಂದು ದಿನ ಸ್ಪೆಷಲ್ ಸುದ್ದಿ ಏನಾದರೂ ಕೊಡಬಹುದಾ ಎಂದು ಅಂದಾಜಿಸಲಾಗುತ್ತಿದೆ.
Advertisement
ಜಾನ್ವಿ ಸದ್ಯ ತೆಲುಗಿನ ಖ್ಯಾತ ನಟ ಜ್ಯೂನಿಯರ್ ಎನ್.ಟಿ.ಆರ್ ನಟನೆಯ ಹೊಸ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಸಿನಿಮಾದ ಶೂಟಿಂಗ್ ಗಾಗಿ ಅವರು ಹೈದರಾಬಾದ್ ಗೂ ಬಂದಿಳಿದಿದ್ದರು. ಈ ಸಮಯದಲ್ಲೇ ಬಾಯ್ ಫ್ರೆಂಡ್ ಕರೆಯಿಸಿಕೊಂಡು ದೇವಸ್ಥಾನಕ್ಕೆ ಹೋಗಿದ್ದಾರೆ ಎಂದೂ ಹೇಳಲಾಗುತ್ತಿದೆ.