ನಟಿ ಜಯವಾಣಿ ಬೆತ್ತಲೆ ಫೋಟೋ: ದುರುಳರ ಹೆಡೆಮುರಿ ಕಟ್ಟಲು ಸಜ್ಜು

Public TV
1 Min Read
jayavani 1

ಟಿ ಜಯವಾಣಿ (Jayavani) ಅವರ ಬೆತ್ತಲೇ ಫೋಟೋಗಳು ಟ್ವಿಟರ್ ನಲ್ಲಿ ಭಾರೀ ಸದ್ದು ಮಾಡಿದ್ದವು. ಜಯವಾಣಿ ಅವರ ಹೆಸರಿನಲ್ಲೇ ಇದ್ದ ಟ್ವಿಟರ್ (Twitter) ಖಾತೆಯಿಂದ ಅವು ಹಂಚಲ್ಪಟ್ಟಿದ್ದವು. ಆ ಫೋಟೋಗಳು ವೈರಲ್ ಆಗುತ್ತಿದ್ದಂತೆಯೇ ನಟಿ ಜಯವಾಣಿ ಅವುಗಳ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಅಲ್ಲದೇ, ಕಿಡಿಗೇಡಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

jayavani 4

ತೆಲುಗಿನ (Telugu) ಖ್ಯಾತ ಪೋಷಕ ನಟಿಯಾಗಿರುವ (Actress) ಜಯವಾಣಿ, ವಿಕ್ರಮಾರ್ಕುಡು ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಅವರು ನಟನೆಯಿಂದ ದೂರ ಉಳಿದರೂ, ಸಿನಿಮಾ ಸಂಬಂಧಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಮೂವಿ ಕಲಾವಿದರ ಸಂಘದ ಕಾರ್ಯಕಾರಿಣಿ ಸದಸ್ಯೆಯಾಗಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಕೂಡ. ಇದನ್ನೂ ಓದಿ:‘ಭರ್ಜರಿ ಬ್ಯಾಚುಲರ್ಸ್’ ಜೊತೆ ಬರುತ್ತಿದ್ದಾರೆ ರವಿಚಂದ್ರನ್, ರಚಿತಾ‌ ರಾಮ್

jayavani 3

ಇಂತಹ ನಟಿಯ ಹೆಸರಿನಲ್ಲೇ ಟ್ವಿಟರ್ ಖಾತೆ ಇದೆ. ಅದು ಬ್ಲೂಟಿಕ್ ಇರುವುದರಿಂದ ಜಯವಾಣಿ ಅವರೇ ಈ ಖಾತೆಯಲ್ಲಿ ಫೋಟೋ ಹಂಚಿಕೊಳ್ಳುತ್ತಾರೆ ಎಂದು ಹೇಳಲಾಗಿತ್ತು. ಆ ಖಾತೆಯಿಂದಲೇ ಅವರ ಬೆತ್ತಲೆ ಫೋಟೋಗಳು ಅಪ್ ಲೋಡ್ ಆಗಿದ್ದವು. ಸಾಕಷ್ಟು ಜನರು ಆ ಫೋಟೋಗಳ ಬಗ್ಗೆ ಮಾತಾಡೋಕೆ ಶುರು ಮಾಡಿದ್ದರು. ಇದರಿಂದಾಗಿ ನಟಿ ಸಂಕಷ್ಟಕ್ಕೆ ಸಿಲುಕಿದ್ದರು.

jayavani 2

ಈ ಕುರಿತು ಜಯವಾಣಿಯೇ ಸ್ಪಷ್ಟನೆ ಕೊಟ್ಟಿದ್ದಾರೆ. ‘ನಾನು ಟ್ವಿಟರ್ ಖಾತೆಯನ್ನು ಹೊಂದಿಲ್ಲ. ಯಾರೋ ಕಿಡಿಗೇಡಿಗಳು ನನ್ನ ಹೆಸರಿನಲ್ಲಿ ಶುರು ಮಾಡಿದ್ದಾರೆ. ಜೊತೆಗೆ ಎಡಿಟ್ ಫೋಟೋಗಳನ್ನು ಅದರಲ್ಲಿ ಹಾಕಿ, ನನ್ನ ಹೆಸರಿಗೆ ಕಳಂಕ ತಂದಿದ್ದಾರೆ. ಅವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವೆ’ ಎಂದು ಎಚ್ಚರಿಕೆ ಕೂಡ ಕೊಟ್ಟಿದ್ದಾರೆ.

ಬೆತ್ತಲೆ ಫೋಟೋಗಳು (Nude Photo) ತಮ್ಮದಲ್ಲ ಎಂದು ಹೇಳಿಕೊಂಡಿರುವ ಜಯವಾಣಿ, ಕೂಡಲೇ ಅಕೌಂಡ್ ಡಿಲಿಟ್ ಮಾಡದೇ ಇದ್ದರೆ ಕಾನೂನು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ. ಯಾರೂ ಆ ಫೋಟೋಗಳನ್ನು ನಂಬಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

Share This Article