ಬಹುಭಾಷಾ ನಟಿ ಜಯಸುಧಾ ತಮ್ಮ 64ನೇ ವಯಸ್ಸಿನಲ್ಲಿ ಮತ್ತೊಂದು ಮದುವೆ ಆಗಿರುವ ಸುದ್ದಿ ತಮಿಳು ಚಿತ್ರೋದ್ಯಮದಲ್ಲಿ ಹರಿದಾಡುತ್ತಿದೆ. ಈಗಾಗಲೇ ಎರಡು ಮದುವೆ ಆಗಿದ್ದ ಅವರು, ಎರಡರಿಂದಲೂ ವಿಚ್ಚೇದನೆ ಪಡೆದಿದ್ದರು. ಇದೀಗ ಮೂರನೇ ಮದುವೆ ಕೂಡ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಉದ್ಯಮಿಯೊಂದಿಗೆ ಹೊಸ ಬದುಕಿಗೆ ಕಾಲಿಟ್ಟಿದ್ದಾರಂತೆ.
ಈ ಹಿಂದೆ ನಿರ್ಮಾಪಕ ವಡ್ಡೆ ರಮೇಶ್ ಜೊತೆ ಜಯಸುಧಾ ಮದುವೆ ಆಗಿದ್ದರು. ಹೊಂದಾಣಿಕೆಯ ಕೊರತೆಯಿಂದಾಗಿ ಈ ಜೋಡಿ ಬೇರ್ಪಟ್ಟಿತ್ತು. ಇದು ತಮಿಳು ಚಿತ್ರೋದ್ಯಮದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ರಮೇಶ್ ಅವರಿಂದ ವಿಚ್ಚೇದನೆ ಪಡೆದುಕೊಂಡ ನಂತರ ಬಾಲಿವುಡ್ ನಟ ಜಿತೇಂದ್ರ ಕಪೂರ್ ಸಹೋದರ ಸಂಬಂಧಿ ನಿತಿನ್ ಕಪೂರ್ ಜೊತೆ ಸಪ್ತಪದಿ ತುಳಿದಿದ್ದರು. ನಿತಿನ್ ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಂಡು ಜಯಸುಧಾ ಅವರನ್ನು ಒಂಟಿಯಾಗಿ ಬಿಟ್ಟು ಹೋದರು. ಇದನ್ನೂ ಓದಿ: ಹನಿಮೂನ್ ಬಗ್ಗೆ ಕೇಳಿದ್ದಕ್ಕೆ ನಾಚಿ ನೀರಾದ ಹರಿಪ್ರಿಯಾ- ವಸಿಷ್ಠ
ಇಷ್ಟಪಟ್ಟು ಮದುವೆ ಆಗಿದ್ದ ನಿತಿನ್ ಸಾವಿನ ನಂತರ ಜಯಸುಧಾ ತಮ್ಮ ಮಕ್ಕಳೊಟ್ಟಿಗೆ ಜೀವನ ಸಾಗಿಸುತ್ತಿದ್ದರು. ಈ ಹೊತ್ತಲ್ಲಿ ಉದ್ಯಮಿಯೊಬ್ಬರ ಜೊತೆ ಜಯಸುಧಾ ಮದುವೆ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಹಲವು ಕಾರ್ಯಕ್ರಮಗಳಲ್ಲಿ ಅವರು ಆ ಉದ್ಯಮಿಯೊಂದಿಗೆ ಭಾಗಿಯಾಗಿದ್ದು ಅನುಮಾನಕ್ಕೆ ಕಾರಣವಾಗಿದೆ. ಇತ್ತೀಚೆಗಷ್ಟೇ ನಡೆದ ಆಲಿ ಮಗಳ ಮದುವೆ ಮತ್ತು ವಾರೀಸು ಸಿನಿಮಾದ ಈವೆಂಟ್ ಗೂ ಕೂಡ ಆ ಉದ್ಯಮಿಯನ್ನು ಜಯಸುಧಾ ಕರೆತಂದಿದ್ದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k