ಸ್ಯಾಂಡಲ್‌ವುಡ್‌ನಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಒಂದ್ ಕಡೆ ಡಾಲಿ ಹಸೆಮಣೆ ಏರೋಕೆ ರೆಡಿಯಾಗಿದ್ರೆ, ಇನ್ನೊಂದ್ ಕಡೆ ಜಯಮಾಲಾ ಪುತ್ರಿ ಹೊಸ ಬಾಳಿಗೆ ಕಾಲಿಡಲು ರೆಡಿಯಾಗಿದ್ದಾರೆ. ಸೌಂದರ್ಯ ಜಯಮಾಲಾ ಹಳದಿ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ನಟಿಯರು ಮಿಂಚಿದ್ದಾರೆ. ನಟಿಯ ಹಳದಿ ಶಾಸ್ತ್ರ ಸುಂದರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
Advertisement
ಜಯಮಾಲಾ (Jayamala) ಪುತ್ರಿ ಸೌಂದರ್ಯ (Soundarya) ಅವರ ಫೆ.5ರಂದು ಮೆಹೆಂದಿ ಹಾಗೂ ಹಳದಿ ಶಾಸ್ತ್ರ ನಗರದ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನಡೆದಿದೆ. ವಧು ಸೌಂದರ್ಯ ಹಳದಿ ಬಣ್ಣದ ಉಡುಗೆಯಲ್ಲಿ ಕಂಗೊಳಿಸಿದ್ದಾರೆ. ಇದನ್ನೂ ಓದಿ:ಡೇಟಿಂಗ್ ಸುದ್ದಿ ನಡುವೆ ಮಾಜಿ ಪತಿಯ 2ನೇ ಮದುವೆ ಬಗ್ಗೆ ಸಮಂತಾ ಶಾಕಿಂಗ್ ಕಾಮೆಂಟ್
Advertisement
Advertisement
ಈ ಸಂಭ್ರಮದಲ್ಲಿ ಹಿರಿಯ ನಟಿ ಶ್ರುತಿ, ಮಾಳವಿಕಾ ಅವಿನಾಶ್, ಸುಧಾರಾಣಿ, ಉಮಾಶ್ರೀ, ಪ್ರಮೀಳಾ ಜೋಷಾಯ್, ಗಿರಿಜಾ ಲೋಕೇಶ್, ಹರ್ಷಿಕಾ, ಅನು ಪ್ರಭಾಕರ್, ಪ್ರಿಯಾಂಕಾ ಉಪೇಂದ್ರ, ಭಾರತಿ ವಿಷ್ಣುವರ್ಧನ್, ಹೇಮಾ ಚೌಧರಿ, ಸುಧಾ ನರಸಿಂಹರಾಜು ಮುಂತಾದ ಹಿರಿಯ ನಟಿಯರು ಭಾಗವಹಿಸಿದ್ದಾರೆ. ಎಲ್ಲರೂ ಹಳದಿ ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ. ಹಿರಿಯ ನಟಿಯರು ಜಯಮಾಲಾ ಜೊತೆ ಸಖತ್ ಆಗಿ ಡ್ಯಾನ್ಸ್ ಮಾಡಿ ಎಂಜಾಯ್ ಮಾಡಿದ್ದಾರೆ.
Advertisement
ಇನ್ನೂ ರುಷಬ್ ಕೆ ಎನ್ನುವವರ ಜೊತೆ ಸೌಂದರ್ಯ ಹಸೆಮಣೆ (Wedding) ಏರೋಕೆ ರೆಡಿಯಾಗಿದ್ದಾರೆ. ಆದರೆ ಇವರದ್ದು ಅರೇಂಜ್ ಮ್ಯಾರೇಜ್ ಅಥವಾ ಲವ್ ಮ್ಯಾರೇಜ್ ಎಂಬುದು ರಿವೀಲ್ ಆಗಿಲ್ಲ. ಹುಡುಗನ ವಿವರ ಕೂಡ ರಿವೀಲ್ ಆಗಿಲ್ಲ.
View this post on Instagram
ಇನ್ನೂ ಸೌಂದರ್ಯ ಜಯಮಾಲಾ ಅವರ ವಿವಾಹ (Wedding) ಫೆ.7 ಹಾಗೂ 8ರಂದು ಜರುಗಲಿದೆ. ಈ ಮದುವೆ ಸಂಭ್ರಮದಲ್ಲಿ ರಾಜಕೀಯ ಗಣ್ಯರಿಗೆ ಹಾಗೂ ಸಿನಿಮಾ ಸ್ಟಾರ್ಸ್ ಆಹ್ವಾನ ನೀಡಲಾಗಿದೆ.
ಇನ್ನೂ ಸೌಂದರ್ಯ ಜಯಮಾಲಾ ಅವರು ಚಿತ್ರರಂಗದಲ್ಲಿದ್ದ 2 ವರ್ಷಗಳಲ್ಲಿ 4 ಸಿನಿಮಾಗಳನ್ನು ಮಾಡಿದ್ದರು. ತೆಲುಗಿನಲ್ಲಿ ಮಿಸ್ಟರ್ ಪ್ರೇಮಿಕುಡು, ದುನಿಯಾ ವಿಜಯ್ ಜೊತೆ ಸಿಂಹಾದ್ರಿ, ಉಪೇಂದ್ರ ಜೊತೆ ಗಾಢ್ ಫಾದರ್, ಶ್ರೀನಗರ ಕಿಟ್ಟಿ ಜೊತೆ ಪಾರು ವೈಫ್ ಆಫ್ ದೇವದಾಸ್ ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಸದ್ಯ ಅವರು ಬಣ್ಣದ ಬದುಕಿನಿಂದ ಅಂತರ ಕಾಯ್ದುಕೊಂಡಿದ್ದಾರೆ.