ಕನ್ನಡದ ಶಬ್ದವೇಧಿ, ಈ ಬಂಧನ ಖ್ಯಾತಿಯ ನಟಿ ಜಯಪ್ರದಾ (Jaya Prada) ಅವರ ಹಿರಿಯ ಸಹೋದರ ರಾಜಾ ಬಾಬು (Raja Babu) ವಿಧಿವಶರಾಗಿದ್ದಾರೆ. ಸಹೋದರನ ನಿಧನದ ಕುರಿತು ನಟಿ ಭಾವನ್ಮಾತಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ನಟ ದರ್ಶನ್‌ಗೆ ಇನ್ಮುಂದೆ ದೇಶಾದ್ಯಂತ ಸಂಚಾರಕ್ಕೆ ಅವಕಾಶ – ಹೈಕೋರ್ಟ್ ಆದೇಶ
Advertisement
ನನ್ನ ಹಿರಿಯ ಸಹೋದರ ರಾಜಾ ಬಾಬು ಅವರ ನಿಧನದ ಬಗ್ಗೆ ನಾನು ತುಂಬಾ ದುಃಖದಿಂದ ತಿಳಿಸುತ್ತಿದ್ದೇನೆ. ಅವರು ಇಂದು ಮಧ್ಯಾಹ್ನ 3:26ಕ್ಕೆ ಹೈದರಾಬಾದ್‌ನಲ್ಲಿ ನಿಧನರಾದರು. ದಯವಿಟ್ಟು ಅವರ ಮೇಲೆ ನಿಮ್ಮ ಪ್ರಾರ್ಥನೆ ಇರಲಿ. ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ಹಂಚಿಕೊಳ್ಳಲಾಗುವುದು ಎಂದು ನಟಿ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
Advertisement
View this post on Instagram
Advertisement
ಇನ್ನೂ ಜಯಪ್ರದಾ ಅವರು ವರನಟ ರಾಜ್‌ಕುಮಾರ್, ವಿಷ್ಣುವರ್ಧನ್ ಅವರೊಂದಿಗೆ ಕನ್ನಡದ ಅನೇಕರ ಸಿನಿಮಾಗಳಲ್ಲಿ ನಟಿಸಿದ್ದಾರೆ. 70-80ರ ದಶಕದ ಟಾಪ್ ನಟಿಯಾಗಿ ಜಯಪ್ರದಾ ಸದ್ದು ಮಾಡಿದ್ದರು. ಬಾಲಿವುಡ್‌ನಲ್ಲೂ ಮಿಂಚಿದ್ದರು.