ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ (Janhvi Kapoor) ಅವರು ತಿರುಮಲದಲ್ಲಿ ಮದುವೆಯಾಗುವ (Wedding) ಪ್ಲ್ಯಾನ್ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ ಮಾತನಾಡಿ, ಮದುವೆಯ ಬಳಿಕ 3 ಮಕ್ಕಳೊಂದಿಗೆ ತಿರುಮಲದಲ್ಲಿ ಸೆಟಲ್ ಆಗುವ ಆಸೆ ಇದೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ಚಲನಚಿತ್ರ ರಾಜ್ಯ ಪ್ರಶಸ್ತಿ ನಿರಾಕರಿಸಿದ ನಟ ಸುದೀಪ್
ಹಿರಿಯ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಅವರು ಕೂಡ ತಿರುಮಲ ತಿಮ್ಮಪ್ಪನ ಭಕ್ತೆಯಾಗಿದ್ದಾರೆ. ತಿಮ್ಮಪ್ಪ ದೇವರಲ್ಲಿ ಅಪಾರ ನಂಬಿಕೆ ಹೊಂದಿದ್ದಾರೆ. ಆಗಾಗ ನಟಿ ತಿರುಪತಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಇದೀಗ ಜಾನ್ವಿ ಮದುವೆಯಾಗಿ ತಿರುಪತಿಯಲ್ಲೇ ನೆಲೆಸುವ ಆಸೆಯಿದೆ ಎಂದಿದ್ದಾರೆ.
ಕರಣ್ ಜೋಹರ್ ಶೋನಲ್ಲಿ ಮಾತಾಡಿದ ಜಾನ್ವಿ, ಮದುವೆಯಾಗಿ ತಿರುಮಲದಲ್ಲಿ ಪತಿಯೊಂದಿಗೆ ಸೆಟಲ್ ಆಗ್ತೀನಿ ಎಂದಿದ್ದಾರೆ. ಮದುವೆ ಬಳಿಕ 3 ಮಕ್ಕಳೊಂದಿಗೆ ನೆಮ್ಮದಿಯಿಂದ ಬದುಕುವಾಸೆ ಇದೆ. ತಿರುಪತಿ ತಿರುಮಲದಲ್ಲಿ ಸೆಟಲ್ ಆಗಿ ದಿನವೂ ಬಾಳೆ ಎಲೆ ಊಟ ಮಾಡಬೇಕು ಎಂದು ಮನದಾಳದ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
ಗೋವಿಂದಾ ಗೋವಿಂದಾ ಎಂದು ಸ್ಮರಿಸಬೇಕು. ಮಣಿರತ್ನಂ ಅವರ ಸಿನಿಮಾಗಳ ಸಂಗೀತವನ್ನ ಕೇಳುತ್ತಾ ದಿನ ಕಳೆಯುವೆ ಎಂದು ನಟಿ ಹೇಳಿದ್ದಾರೆ. ಶಿಖರ್ ಪಹಾರಿಯಾ ಜೊತೆ ಜಾನ್ವಿ ಡೇಟಿಂಗ್ ವಿಚಾರ ಸಾಕಷ್ಟು ಭಾರೀ ಕೇಳಿ ಬಂದಿದೆ. ಇಬ್ಬರೂ ಜೊತೆಯಾಗಿ ಹಲವು ಬಾರಿ ಕಾಣಿಸಿಕೊಂಡಿದ್ದಾರೆ. ಎಲ್ಲೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಮದುವೆ ಬಳಿಕ ಜಾನ್ವಿ ನಟನೆಗೆ ಗುಡ್ ಬೈ ಹೇಳ್ತಾರಾ? ಎಂಬ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.