ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ (Janhvi Kapoor) ಅವರು ಸದ್ಯ ರಾಮ್ ಚರಣ್‌ಗೆ (Ram Charan) ನಾಯಕಿಯಾಗಿ ಹೊಸ ಪ್ರಾಜೆಕ್ಟ್ನಲ್ಲಿ ನಟಿಸುತ್ತಿದ್ದಾರೆ. ಹೈದರಾಬಾದ್‌ನಲ್ಲಿ ಶೂಟಿಂಗ್ ನಡೆಯುತ್ತಿದೆ. ಈ ಹಿನ್ನೆಲೆ ರಾಮ್ ಚರಣ್ ಪತ್ನಿ ಉಪಾಸನಾ (Upasana) ಭೇಟಿ ನೀಡಿ ಜಾನ್ವಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ.
ಸೆಟ್‌ಗೆ ಬ್ರೇಕ್ ಇದ್ದ ಸಂದರ್ಭದಲ್ಲಿ ಉಪಾಸನಾ ಭೇಟಿ ನೀಡಿದ್ದಾರೆ. ಈ ವೇಳೆ, ‘ಅತ್ತಮ್ಮಾ ಕಿಚನ್’ ಕಡೆಯಿಂದ ಬಾಕ್ಸ್ ನೀಡಲಾಗಿದೆ. ರಾಮ್ ಚರಣ್ ತಾಯಿ ಸುರೇಖಾ ತಯಾರಿಸಿದ ರೆಸಿಪಿ ಇದಾಗಿದೆ. ಇದನ್ನು ‘ಅತ್ತಮ್ಮಾ ಕಿಚನ್’ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.
View this post on Instagram
ಇನ್ನೂ ‘ಆರ್ ಸಿ 16’ ಸಿನಿಮಾದಲ್ಲಿ ರಾಮ್ ಚರಣ್, ಜಾನ್ವಿ ಕಪೂರ್, ಶಿವರಾಜ್‌ಕುಮಾರ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಶೂಟಿಂಗ್ ಭರದಿಂದ ನಡೆಯುತ್ತಿದೆ. ಈ ಚಿತ್ರವನ್ನು ಬುಚಿ ಬಾಬು ಸನಾ ನಿರ್ದೇಶನ ಮಾಡುತ್ತಿದ್ದಾರೆ.