ಸ್ಟಾರ್ ನಟಿ ಶ್ರೀದೇವಿ (Sridevi) ಪುತ್ರಿ ಜಾನ್ವಿ ಕಪೂರ್ (Janhavi Kapoor), ಸಿನಿಮಾಗಿಂತ (Films) ಇತರೆ ವಿಚಾರವಾಗಿಯೇ ಸುದ್ದಿಯಲ್ಲಿರುತ್ತಾರೆ. ಇದೀಗ ಹೊಸ ಫೋಟೋಶೂಟ್‌ನಲ್ಲಿ ಜಾನ್ವಿ ಕಪೂರ್ ಮಿಂಚಿದ್ದಾರೆ. ಬ್ಲ್ಯಾಕ್ & ವೈಟ್ ಶೇಡ್‌ನಲ್ಲಿ ಹೊಸ ಫೋಟೋಶೂಟ್ (Photoshoot) ಮಾಡಿಸಿದ್ದಾರೆ.
Advertisement
ನಟಿ ಜಾನ್ವಿ ಕಪೂರ್ ಸದ್ಯ ಸೌತ್ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಜ್ಯೂ.ಎನ್‌ಟಿಆರ್‌ಗೆ (Jr.Ntr) ನಾಯಕಿಯಾಗುವ ಮೂಲಕ ಜಾನ್ವಿ ಟಾಲಿವುಡ್‌ಗೆ (Tollywood) ಎಂಟ್ರಿ ಕೊಟ್ಟಿದ್ದಾರೆ. ಸದ್ಯ ಹೊಸ ಫೋಟೋಶೂಟ್ ಮೂಲಕ ನಟಿ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. ಇದನ್ನೂ ಓದಿ: ವರುಣ್ ಧವನ್ ಮಾಡಿದ ಎಡವಟ್ಟಿಗೆ ಬೇಸರ ಹೊರಹಾಕಿದ ಕೃತಿ ಸನೂನ್
Advertisement
View this post on Instagram
Advertisement
ಚೆಂದದ ಸೀರೆಯುಟ್ಟು, ತುರುಬು ಕಟ್ಟಿ ಕೂದಲಿಗೆ ಹೂ ಮುಡಿದು ಸಿಂಪಲ್ ಆಗಿ ಮುದ್ದಾಗಿ ಜಾನ್ವಿ ಕಾಣಿಸಿಕೊಂಡಿದ್ದಾರೆ. ಕಣ್ಣಿಗೆ ಕಾಡಿಗೆ, ಹಣೆಯ ಮೇಲೆ ಕೊಂಚ ಕೂದಲು ಬಿಟ್ಟು ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿಯ ಹೊಸ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
Advertisement
ಬಾಲಿವುಡ್‌ನಲ್ಲಿ (Bollywood) ಸಕ್ಸಸ್ ಸಿಗದೇ ಇರುವ ಕಾರಣ, ಸೌತ್‌ನತ್ತ ನಟಿ ಮುಖ ಮಾಡಿದ್ದಾರೆ. ತಾಯಿ ಶ್ರೀದೇವಿಯಂತೆಯೇ ಬಹುಭಾಷೆಗಳಲ್ಲಿ ನಟಿ ತೆರೆಯ ಮೇಲೆ ಮಿಂಚಲು ಸಜ್ಜಾಗಿದ್ದಾರೆ.