ಕನ್ನಡದ ‘ವಿಕ್ರಾಂತ್ ರೋಣ’ (Vikrant Rona) ಸಿನಿಮಾದಲ್ಲಿ ರಾರಾ ರಕ್ಕಮ್ಮ ಎಂದು ಪಡ್ಡೆಹುಡುಗುರ ನಿದ್ದೆಗೆಡಿಸಿದ ಬಾಲಿವುಡ್ ನಟಿ ಜಾಕ್ವೆಲಿನ್ (Jacqueline Fernandez) ಇದೀಗ ಹಾಲಿವುಡ್‌ನತ್ತ ಮುಖ ಮಾಡಿದ್ದಾರೆ. ‘ಕಿಲ್ ದೆಮ್ ಆಲ್ 2’ ಎನ್ನುತ್ತಾ ನಟಿ ಆ್ಯಕ್ಷನ್ ಅವತಾರ ತಾಳಿದ್ದಾರೆ. ಇದನ್ನೂ ಓದಿ:ಚಿತ್ರಮಂದಿರದಲ್ಲಿ ಅಭಿಮಾನಿಗಳೊಂದಿಗೆ ʻಉಪೇಂದ್ರʼ ಸಿನಿಮಾ ವೀಕ್ಷಿಸಿದ ಉಪೇಂದ್ರ!
ಜಾಕ್ವೆಲಿನ್ ನಟಿಸಿದ ಮೊದಲ ಹಾಲಿವುಡ್ ಸಿನಿಮಾ ‘ಕಿಲ್ ದೆಮ್ ಆಲ್ 2’ ಚಿತ್ರದ ಟ್ರೈಲರ್‌ಗೆ ರಿಲೀಸ್ ಆಗಿ ಸಿನಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಹೀರೋ ಜೀನ್ ಕ್ಲೌಡ್ ವ್ಯಾನ್ ಡೆಮೆಗೆ (Jean Claude Van Damme) ನಾಯಕಿಯಾಗಿ ಜಾಕ್ವೆಲಿನ್ ಕಾಣಿಸಿಕೊಂಡಿದ್ದಾರೆ. ಗನ್ ಹಿಡಿದು ನಟಿ ಅಖಾಡಕ್ಕೆ ಕೂಡ ಇಳಿದಿದ್ದಾರೆ. ಈ ಸಿನಿಮಾದ ಮೊದಲ ಸರಣಿ 2017ರಲ್ಲಿ ಸೂಪರ್ ಹಿಟ್ ಆಗಿತ್ತು.
View this post on Instagram
ನಟಿಯ ಮೊದಲ ಹಾಲಿವುಡ್ ಚಿತ್ರವಾಗಿದ್ರೂ ಆತ್ಮವಿಶ್ವಾಸದಿಂದ ನಟಿಸಿದ್ದಾರೆ. ಬಿಟ್ಟಿರುವ ಟ್ರೈಲರ್ ನೋಡುಗರಿಗೆ ಇಂಟರೆಸ್ಟಿಂಗ್ ಎನಿಸಿದೆ. ಎಂದೂ ನಟಿಸಿರದ ವಿಭಿನ್ನ ಗೆಟಪ್‌ನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ.
ಅಂದಹಾಗೆ, ಶ್ರೀಲಂಕಾ ಸುಂದರಿಗೆ ಬಾಲಿವುಡ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ಗಟ್ಟಿ ನೆಲೆ ಗಿಟ್ಟಿಸಿಕೊಳ್ಳುತ್ತಿರುವ ವೇಳೆಯಲ್ಲಿ ಹಾಲಿವುಡ್‌ಗೆ ನಟಿ ಹಾರಿದ್ದಾರೆ. ಮೊದಲ ಸಿನಿಮಾದಲ್ಲೇ ಯಶಸ್ಸು ಸಿಗುತ್ತಾ? ಕಾಯಬೇಕಿದೆ.