ವಿಕ್ರಾಂತ್ ರೋಣ ಸಿನಿಮಾದಲ್ಲಿ ‘ರಾ ರಾ ರಕ್ಕಮ್ಮ’ ಹಾಡಿಗೆ ಸೊಂಟ ಬಳುಕಿಸಿದ್ದ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಇದೀಗ ಗೆಳೆಯನ ವಿರುದ್ಧವೇ ದೂರು ದಾಖಲಿಸಿದ್ದಾರೆ. ಬಹುಕೋಟಿ ವಂಚನೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿರುವ ಸುಖೇಶ್ ಚಂದ್ರಶೇಖರ್ ವಿರುದ್ಧವೇ ದೆಹಲಿ ಪಟಿಯಾಲಾ ಹೌಸ್ ಕೋರ್ಟಿನಲ್ಲಿ ಹೇಳಿಕೆ ದಾಖಲಿಸಿದ್ದಾರೆ. ಬಹುಕೋಟಿ ವಂಚನೆಯ ಆರೋಪಿ ಆಗಿರುವ ಸುಖೇಶ್ ಚಂದ್ರಶೇಖರ್ ಕಡೆಯಿಂದ ದುಬಾರಿ ಬೆಲೆಯ ಗಿಫ್ಟ್ ಪಡೆದುಕೊಂಡಿದ್ದಾರೆ ಎನ್ನುವ ಕಾರಣಕ್ಕಾಗಿ ಜಾಕ್ವೆಲಿನ್ ಇಡಿ ವಿಚಾರಣೆಯನ್ನು ಎದುರಿಸಿದರು.
Advertisement
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಕೋರ್ಟ್ ಮುಂದೆ ಹಾಜರಾಗಿದ್ದ ಜಾಕ್ವೆಲಿನ್ ಕಣ್ಣೀರಿಟ್ಟಿದ್ದಾರೆ. ಆತನ ಸ್ನೇಹದಿಂದಾಗಿ ನೆಮ್ಮದಿ ಕಳೆದುಕೊಂಡೆ ಹಾಗೂ ಅವನು ನನ್ನ ಭಾವನೆಗಳೊಂದಿಗೆ ಆಟವಾಡಿ, ಜೀವನವನ್ನೇ ನರಕ ಮಾಡಿದ್ದಾನೆ ಎಂದು ಅವರು ಹೇಳಿಕೊಂಡಿದ್ದಾರೆ. ಜೀವನವನ್ನು ಮಾತ್ರವಲ್ಲ, ವೃತ್ತಿ ಜೀವನವನ್ನೇ ಅವನು ಹದಗೆಡಿಸಿಬಿಟ್ಟಿದ್ದಾನೆ ಎಂದು ದೂರಿದ್ದಾರೆ. ಸುಖೇಶ್ ತಮಗೆ ಪರಿಚಯವಾಗಿದ್ದು ಪಿಂಕಿ ಇರಾನಿ ಎನ್ನುವ ಮಹಿಳೆಯಿಂದ ಎಂದು ಅವರು ಹೇಳಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ರಶ್ಮಿಕಾ ಬೀಚ್ ಫೋಟೋ: ದೇವರಕೊಂಡ ಕ್ಲಿಕ್ಕಿಸಿದ್ದಾ ಎಂದ ನೆಟ್ಟಿಗರು
Advertisement
Advertisement
ಪಿಂಕಿ ಇರಾನಿ ಎನ್ನುವ ಹೆಣ್ಣುಮಗಳು ಸುಖೇಶ್ ನನ್ನು ಗೃಹ ಸಚಿವಾಲಯದ ಅಧಿಕಾರಿ ಎಂದು ಪರಿಚಯಿಸಿದರು. ಈ ಪರಿಚಯ ಸ್ನೇಹವಾಯಿತು. ಆತ್ಮೀಯತೆ ಬೆಳೆಯಿತು. ಸುಖೇಶ್ ನಿಂದ ಕೆಲವು ಗಿಫ್ಟ್ ಗಳು ಬಂದಿದ್ದು ಪಿಂಕಿ ಇರಾನಿ ಕಡೆಯಿಂದ. ಸುಖೇಶ್ ಬಗ್ಗೆ ವಿಷಯ ಗೊತ್ತಿದ್ದರೂ, ಆಕೆ ನನ್ನಿಂದ ಎಲ್ಲವನ್ನೂ ಮುಚ್ಚಿಟ್ಟರು. ಅವನು ನನ್ನ ದೊಡ್ಡ ಅಭಿಮಾನಿ ಎಂದು ಸುಳ್ಳು ಹೇಳಿದ್ದರು ಎಂದು ಕೋರ್ಟ್ ನಲ್ಲಿ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k