ಬಾಲಿವುಡ್ ಬ್ಯೂಟಿ ಜಾಕ್ವೆಲಿನ್ (Jacqueline Fernandez) ಅವರು ಇತ್ತೀಚಿಗೆ ಸಿನಿಮಾಗಿಂತ ಸುಕೇಶ್ ಚಂದ್ರಶೇಖರ್ (Sukesh Chandrashekar) ಅವರ 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಹೆಸರು ಕೇಳಿ ಬಂದಿತ್ತು. ಇದೀಗ ರಾ ರಾ ರಕ್ಕಮ್ಮ ವಿವಾದಗಳನೆಲ್ಲ ಮರೆತು ಮುಂಬೈ ಬಾಂದ್ರಾ ದುಬಾರಿ ಮನೆಯನ್ನ ಖರೀದಿ ಮಾಡಿದ್ದಾರೆ. ವಿಷ್ಯ ತಿಳಿಯುತ್ತಿದ್ದಂತೆ ನಟಿಗೆ ಅಭಿಮಾನಿಗಳ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಎಂತಹ ಸ್ಟಾರ್ ನಟ-ನಟಿಯರಾದರು ಮುಂಬೈ ಬಾಂದ್ರಾದಲ್ಲಿ ಮನೆಯ ತೆಗೆದುಕೊಳ್ಳಬೇಕು ಎಂಬುದು ಪ್ರತಿ ಕಲಾವಿದರ ಕನಸು. ಅದರಂತೆ ಫೇಮಸ್ ಏರಿಯಾ ಬಾಂದ್ರಾದಲ್ಲಿ ಸೈಫ್, ಕರೀನಾ ಕಪೂರ್, ಆಲಿಯಾ ಭಟ್, ಕತ್ರಿನಾ ಕೈಫ್ ಮನೆಯೂ ಇದೆ. ಇದೀಗ ಈ ಸ್ಟಾರ್ ನಟಿಯರ ಮನೆಯ ಸಮೀಪವೇ ರಕ್ಕಮ್ಮ ದುಬಾರಿ ಖರೀದಿ ಮಾಡಿದ್ದಾರೆ. ಇದನ್ನೂ ಓದಿ:ತಿರುಪತಿ ತಿಮ್ಮಪ್ಪನಿಗೆ ‘ಮುಡಿ’ ಕೊಟ್ಟ ಖ್ಯಾತ ನಟ ಧನುಷ್
ಬಾಂದ್ರಾದ ಒಂದು ಮನೆ 1119 sq ನಿಂದ ತೊಡಗಿ 2557 sq ತನಕ ಹೋಗುತ್ತದೆ. ಇದು ಮುಂಬೈನ ಸೆಲೆಬ್ರಿಟಿ ಲೊಕೇಷನ್‌ಗಳಲ್ಲಿ ಒಂದಾಗಿದ್ದು ಸ್ಟಾರ್ ನಟ, ನಟಿಯರು ಇಲ್ಲಿ ಮನೆ ಖರೀಸಿದಲು ಬಯಸುತ್ತಾರೆ.ಈ ಕಾಂಪ್ಲೆಕ್ಸ್‌ನಲ್ಲಿ ಅತ್ಯಂತ ಕಡಿಮೆ ಬೆಲೆಯ ಮನೆಯೂ 12 ಕೋಟಿಯಿಂದ ಶುರುವಾಗುತ್ತದೆ. ಜಾಕ್ವೆಲಿನ್ ಖರೀದಿಸಿದ ಮನೆಯ ಬೆಲೆ ಎಷ್ಟು ಎನ್ನುವುದು ಇನ್ನೂ ಕೂಡಾ ರಿವೀಲ್ ಆಗಿಲ್ಲ. ಅವರ ಮನೆಯು ಚೆಂದದ ವರ್ಕಿಂಗ್ ಏರಿಯಾ, ಜಿಮ್, ಪೂಲ್‌ಗಳನ್ನು ಒಳಗೊಂಡಿದೆ. ಒಟ್ನಲ್ಲಿ ‘ವಿಕ್ರಾಂತ್ ರೋಣ’ ಸಿನಿಮಾದಲ್ಲಿ ಮಿಂಚಿದ ರಕ್ಕಮ್ಮ ಹೊಸ ಮನೆಗೆ ಕಾಲಿಟ್ಟಿರುವ ಖುಷಿಯಲ್ಲಿದ್ದಾರೆ.
ಸದ್ಯ ರಕ್ಕಮ್ಮ, ಸೋನು ಸೂದ್ ಜೊತೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮತ್ತೆ ಕನ್ನಡಕ್ಕೆ ಹೊಸ ಸಿನಿಮಾದ ಮೂಲಕ ಹಾವಳಿ ಶುರು ಮಾಡುತ್ತಾರಾ ಕಾಯಬೇಕಿದೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]