ಕನ್ನಡದ ‘ಸೂರ್ಯವಂಶ'(Suryavamsha), ‘ಓ ನನ್ನ ನಲ್ಲೆ’ ಖ್ಯಾತಿಯ ನಟಿ ಇಶಾ ಕೊಪ್ಪಿಕರ್ (Isha Koppikar) ಅವರು ಸಲ್ಮಾನ್ ಖಾನ್ ನಿರೂಪಣೆಯ ಬಿಗ್ ಬಾಸ್ ಶೋಗೆ ಎಂಟ್ರಿ ಕೊಡಲಿದ್ದಾರೆ ಎಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಇದನ್ನೂ ಓದಿ:‘ಕೆಜಿಎಫ್ 2’ ನಿರ್ದೇಶಕನನ್ನು ಹಾಡಿ ಹೊಗಳಿದ ಪ್ರಭಾಸ್
ಸಲ್ಮಾನ್ ಖಾನ್ ನಿರೂಪಣೆಯ (Salman Khan) ‘ಬಿಗ್ ಬಾಸ್ ಹಿಂದಿ ಸೀಸನ್ 18’ಕ್ಕೆ (Bigg Boss Hindi 18) ತೆರೆಮರೆಯಲ್ಲಿ ಭಾರೀ ತಯಾರಿ ನಡೆಯುತ್ತಿದೆ. ಸ್ಪರ್ಧಿಗಳ ಲಿಸ್ಟ್ ಕೂಡ ರೆಡಿಯಾಗ್ತಿದೆ. ಅದರಲ್ಲಿ ಈ ಬಾರಿಯ ಬಿಗ್ ಬಾಸ್ ಶೋಗೆ ಮೊದಲ ಸ್ಪರ್ಧಿಯಾಗಿ ಇಶಾ ಕೊಪ್ಪಿಕರ್ ಎಂಟ್ರಿ ಕೊಡಲಿದ್ದಾರೆ ಎನ್ನಲಾಗಿದೆ. ಇದರ ಬಗ್ಗೆ ವಾಹಿನಿ ಆಗಲಿ, ಸ್ಪರ್ಧಿಯಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಧಿಕೃತ ಮಾಹಿತಿಗಾಗಿ ಕಾಯಬೇಕಿದೆ.
- Advertisement3
- Advertisement
ಅಂದಹಾಗೆ, ಇತ್ತೀಚೆಗೆ ತಮಗಾದ ಕ್ಯಾಸ್ಟಿಂಗ್ ಕೌಚ್ ಅನುಭವ ಬಗ್ಗೆ ಕರಾಳ ಸತ್ಯ ಹೇಳುವ ಮೂಲಕ ನಟಿ ಭಾರೀ ಸುದ್ದಿಯಾಗಿದ್ದರು. ನನಗೆ ಆಗ 18 ವರ್ಷ. ಓರ್ವ ಸೆಕ್ರೆಟರಿ ನನಗೆ ಕರೆ ಮಾಡಿದರು. ಹೀರೋಗೆ ನೀವು ಒಂಟಿಯಾಗಿ ಸಿಗಬೇಕು ಎಂಬ ಬೇಡಿಕೆ ಇದೆ ಎಂದು ಹೇಳಿದ್ದರು. ಹೀರೋ ಜೊತೆ ನೀವು ಫ್ರೆಂಡ್ಲಿ ಆಗಿರಬೇಕು ಎಂದು ಸೂಚಿಸಿದರು. ನಾನು ಎಲ್ಲರ ಜೊತೆ ಫ್ರೆಂಡ್ಲಿ ಆಗಿದ್ದೇನೆ. ಆದರೆ ನೀವು ಹೇಳುವ ಫ್ರೆಂಡ್ಲಿ ಎಂದರೆ ಏನು ನನಗೆ ಅರ್ಥವಾಗಿಲ್ಲ ಎಂದು ಫೋನ್ ಇಟ್ಟಿದ್ದೆ.
23ನೇ ವಯಸ್ಸಿನಲ್ಲೂ ಹಾಗೆಯೇ ಆಗಿತ್ತು. ಒಂಟಿಯಾಗಿ ಸಿಗುವಂತೆ ಹಿಂದಿ ಸ್ಟಾರ್ ನಟನೊಬ್ಬ ಕೇಳಿದ್ದ. ಒಬ್ಬಂಟಿಯಾಗಿ ಕಾರು ಚಲಾಯಿಸಿಕೊಂಡು ಬರುವಂತೆ ಆತ ಹೇಳಿದ್ದ. ಆತನ ಹೆಸರು ಈಗಾಗಲೇ ಹಲವು ನಾಯಕಿಯರ ಜೊತೆ ತಳುಕು ಹಾಕಿಕೊಂಡಿತ್ತು. ಈ ರೀತಿ ಬೇಡಿಕೆ ಇಟ್ಟಿದ್ದು, ಬಾಲಿವುಡ್‌ನ ಸ್ಟಾರ್ ನಟ ಎಂದು ಇಶಾ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದರು. ಆದರೆ ಆ ನಟನ ಹೆಸರನ್ನು ಮಾತ್ರ ರಿವೀಲ್ ಮಾಡಿರಲಿಲ್ಲ.