ಬೇಬಿ ಬಂಪ್ ಫೋಟೋ ಶೇರ್- ಇಲಿಯಾನಾಗೆ ಮಗುವಿನ ತಂದೆ ಯಾರೆಂದು ಕುಟುಕಿದ ನೆಟ್ಟಿಗರು

Public TV
1 Min Read
ileana 1 1

ಬಾಲಿವುಡ್ (Bollywood) ಬ್ಯೂಟಿ ಇಲಿಯಾನಾ(Ileana D’cruze) ಡಿಕ್ರೂಜ್ ಇತ್ತೀಚಿಗೆ ತಾಯಿಯಾಗುತ್ತಿರುವ ಗುಡ್ ನ್ಯೂಸ್ ನೀಡುವ ಮೂಲಕ ಫ್ಯಾನ್ಸ್‌ಗೆ ಅಚ್ಚರಿ ಮೂಡಿಸಿದ್ದರು. ಇದೀಗ ಮೊದಲ ಬಾರಿಗೆ ಬೇಬಿ ಬಂಪ್ ಫೋಟೋವನ್ನ ಇಲಿಯಾನಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

iileana

ತೆಲುಗು- ತಮಿಳು ಸೇರಿದಂತೆ ಬಾಲಿವುಡ್‌ನಲ್ಲಿ ಮಿಂಚ್ತಿರುವ ಇಲಿಯಾನಾ ಡಿಕ್ರೂಜ್ ಸದ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮದುವೆಯಾಗದೇ ಮಗುವನ್ನ ಪಡೆಯುತ್ತಿರುವ ಇಲಿಯಾನಾಗೆ ನೆಟ್ಟಿಗರು ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಮಗುವಿನ ತಂದೆ ಯಾರು ಹೇಳಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಕುಟುಕಿದ್ದಾರೆ. ಇದನ್ನೂ ಓದಿ:ಬಂದೂಕಿನೊಂದಿಗೆ ಆಟವಾಡಿದ ‘ಬಿಗ್ ಬಾಸ್’ ಅಬ್ದು ರೋಜಿಕ್‌ ವಿರುದ್ಧ ಪ್ರಕರಣ ದಾಖಲು

ಇದೀಗ ನಟಿ ಇಲಿಯಾನಾ ಬೇಬಿ ಬಂಪ್ ಫೋಟೋವನ್ನ ಹಂಚಿಕೊಂಡಿದ್ದಾರೆ. ಅದಕ್ಕೆ ಬಂಪ್‌ ಅಲರ್ಟ್‌ ಅಂತಾ ಅಡಿಬರಹ ನೀಡಿದ್ದಾರೆ. ಈ ಮೂಲಕ ತಾವು ತಾಯಿಯಾಗುತ್ತಿರುವ ಖುಷಿ ವಿಚಾರವನ್ನ ವ್ಯಕ್ತಪಡಿಸಿದ್ದಾರೆ. ನಟಿ ಬೇಬಿ ಬಂಪ್ ಫೋಟೋ ಶೇರ್ ಮಾಡ್ತಿದ್ದಂತೆ ನೆಟ್ಟಿಗರು, ಮಗುವಿನ ತಂದೆ ಯಾರು ಎಂದು ಪ್ರಶ್ನೆ ಮಾಡಿದ್ದಾರೆ. ಎಲ್ಲಿತನಕ ಪ್ರಪಂಚದ ಕಣ್ಣಿಂದ ಈ ವಿಚಾರ ಮುಚ್ಚಿಡುತ್ತೀರಿ.? ಈಗ ನೀವು ಮಗುವಿನ ತಂದೆ ಯಾರೆಂದು ತಿಳಿಸುವುದಕ್ಕೆ ಸೂಕ್ತ ಸಮಯ ಎಂದು ನಟಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಇಲಿಯಾನಾ ಅವರು ಈ ಹಿಂದೆ ಆಸ್ಟ್ರೇಲಿಯಾದ ಫೋಟೋಗ್ರಾಫರ್ ಆ್ಯಂಡ್ರ್ಯೂ ನಿಬೋನ್ ಜೊತೆ ಇಲಿಯಾನಾ ಡೇಟ್ ಮಾಡ್ತಿದ್ದರು. ಬಳಿಕ ಬ್ರೇಕ್ ಮಾಡಿಕೊಂಡರು. ಇತ್ತೀಚಿಗೆ ಇಲಿಯಾನಾ, ಕತ್ರಿನಾ ಕೈಫ್ (Katrina Kaif) ಸಹೋದರ (Brother) ಸೆಬಾಸ್ಟಿಯನ್ ಲೊರಾನ್ ಮಿಶಾಲ್ ಜೊತೆ ಡೇಟಿಂಗ್ (Dating) ಮಾಡುತ್ತಿದ್ದಾರೆ ಎಂದು ಸುದ್ದಿ ವೈರಲ್ ಆಗಿತ್ತು.

Share This Article