ಮುಂಬೈ: ಬಹುಭಾಷಾ ನಟಿ ಇಲಿಯಾನಾ ಡಿಕ್ರೂಸ್ ಕಾರ್ಯಕ್ರಮವೊಂದರಲ್ಲಿ ಸೆಕ್ಸ್ ಲೈಫ್ ಬಗ್ಗೆ ಹೇಳಿಕೆಯೊಂದು ನೀಡಿದ್ದು, ಇದೀಗ ಅದು ಸಾಕಷ್ಟು ಚರ್ಚೆಯಾಗುತ್ತಿದೆ.
ಇತ್ತೀಚೆಗೆ ಇಲಿಯಾನಾ ಖ್ಯಾತ ಗಾಯಕ ಶಿಬಾನಿ ದಾಂಡೇಕರ್ ನಡೆಸಿಕೊಡುವ ‘ದಿ ಲವ್ ಲಾಫ್ ಲಿವ್ ಶೋ’ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಇಲಿಯಾನಾ ಸಿನಿಮಾಗಳ ಹೊರತಾಗಿ ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಸಾಕಷ್ಟು ಮಾತನಾಡಿದ್ದಾರೆ.
Advertisement
Advertisement
ಈ ಹಿಂದೆ ಇಲಿಯಾನಾ ನೀಡಿದ ಒಂದು ಹೇಳಿಕೆಯನ್ನು ಗಾಯಕ ಶಿಬಾನಿ ನೆನಪಿಸುತ್ತಾರೆ. ಈ ಮೊದಲು ಇಲಿಯಾನಾ, ಸೆಕ್ಸ್ ಹಾಗೂ ಪ್ರೀತಿಗೆ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದರು. ಶಿಬಾನಿ ಈ ಹೇಳಿಕೆಯನ್ನು ನೆನಪಿಸಿ ಇಲಿಯಾನಾ ಅವರಿಗೆ ಸೆಕ್ಸ್ ಲೈಫ್ ಬಗ್ಗೆ ಪ್ರಶ್ನಿಸುತ್ತಾರೆ.
Advertisement
ಈ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಇಲಿಯಾನಾ, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಇಷ್ಟಪಟ್ಟ ಮತ್ತೊಂದು ಹೇಳಿಕೆಯನ್ನು ಉಲ್ಲೇಖಿಸುತ್ತಿದ್ದೇನೆ. ನಾನು ಸೆಕ್ಸ್ ಲೈಫ್ ಎಂಜಾಯ್ ಮಾಡುತ್ತೇನೆ. ಇದನ್ನು ವರ್ಕೌಟ್ ರೀತಿ ತೆಗೆದುಕೊಳ್ಳುತ್ತೇನೆ. ನನಗೆ ಇದು ಸರಿ ಎನಿಸುವುದಿಲ್ಲ ಎಂದರು.
Advertisement
ಬಳಿಕ ತಮ್ಮ ಮಾತಿನ ಬಗ್ಗೆ ಇಲಿಯಾನಾ ವಿವರಣೆ ನೀಡಿದ್ದಾರೆ. ನನ್ನ ಪ್ರಕಾರ ನೀವು ಸೆಕ್ಸ್ ಲೈಫ್ ಎಂಜಾಯ್ ಮಾಡಬೇಕು. ಆದರೆ ಅದಕ್ಕೆ ಸ್ವಲ್ಪ ಭಾವನೆಗಳು ಇರಬೇಕಾಗುತ್ತದೆ. ನೀವು ಪ್ರೀತಿಯಲ್ಲಿದ್ದಾಗ ದೈಹಿಕ ಸಂಪರ್ಕ ಬೆಳೆಸುವುದನ್ನು ಇಷ್ಟಪಡುತ್ತೀರಿ. ಏಕೆಂದರೆ ಇದರಿಂದ ಎರಡು ಆತ್ಮಗಳು ಒಂದಾಗುತ್ತದೆ ಎಂದು ಇಲಿಯಾನಾ ತಿಳಿಸಿದ್ದಾರೆ.
ಸದ್ಯ ಇಲಿಯಾನಾ `ಪಾಗಲ್‍ಪಂತಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟ ಜಾನ್ ಅಬ್ರಾಹಂ, ಅನಿಲ್ ಕಪೂರ್, ಅರ್ಷದ್ ವಾರ್ಸಿ ಹಾಗೂ ನಟಿ ಕೃತಿ ಕರಬಂಧ ಅಭಿನಯಿಸುತ್ತಿದ್ದಾರೆ. ನವೆಂಬರ್ 22ರಂದು ಈ ಚಿತ್ರ ಬಿಡುಗಡೆ ಆಗಲಿದೆ.