ಬರ್ಫಿ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರುವ ಕ್ಯೂಟ್ ತಾರೆ ಇಲಿಯಾನಾ ಡಿ ಕ್ರೂಸ್ (Ileana D Cruz) ಅವರಿಗೆ ಸಂಕಷ್ಟ ಎದುರಾಗಿದೆ. ತಮಿಳು ಸಿನಿಮಾವೊಂದರಲ್ಲಿ ನಟಿಸಲು ಹಣ ಪಡೆದು, ಇದೀಗ ಚಿತ್ರೀಕರಣಕ್ಕೆ ಬರುತ್ತಿಲ್ಲವೆಂದು ನಿರ್ಮಾಪಕರೊಬ್ಬರು ಅಲ್ಲಿನ ಫಿಲ್ಮ್ ಚೇಂಬರ್ ಗೆ (Film Chamber) ದೂರು ನೀಡಿದ್ದಾರೆ. ಆ ನಟಿಯಿಂದಾಗಿ ಸಾಕಷ್ಟು ತೊಂದರೆ ಮತ್ತು ಹಾನಿಯಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಸದ್ಯ ರಣದೀಪ್ ಹೂಡಾ ನಟನೆಯ ಅನ್ ಫೇರ್ ಅಂಡ್ ಲವ್ಲಿ ಸಿನಿಮಾದಲ್ಲಿ ನಟಿಸುತ್ತಿರುವ ಇಲಿಯಾನಾ, ತಮಿಳು ಸಿನಿಮಾ ಮಾಡಲು ಒಪ್ಪಿಕೊಂಡಿದ್ದರಂತೆ. ನಿರ್ಮಾಪಕರಿಂದ ಮುಂಗಡ ಹಣವನ್ನೂ ಪಡೆದಿದ್ದಾರೆ. ಆದರೆ, ಈವರೆಗೂ ಅವರು ಚಿತ್ರೀಕರಣದಲ್ಲಿ ಭಾಗಿಯಾಗಿಲ್ಲ. ಅವರು ಚಿತ್ರತಂಡದ ಕೈಗೂ ಸಿಗುತ್ತಿಲ್ಲವಂತೆ. ವಾಪಸ್ಸು ಹಣ ಹಿಂತಿರುಗಿಸದೇ ಸತಾಯಿಸುತ್ತಿದ್ದಾರಂತೆ. ಇಲಿಯಾನಾ ನಡೆಗೆ ಬೇಸತ್ತ ನಿರ್ಮಾಪಕರು ದೂರು ನೀಡಿದ್ದಾರೆ.
ಈ ಕುರಿತು ಪರಿಶೀಲನೆ ಮಾಡಿರುವ ಫಿಲ್ಮ್ ಚೇಂಬರ್ ದಕ್ಷಿಣದ ಸಿನಿಮಾಗಳಲ್ಲಿ ಅವರಿಗೆ ಅವಕಾಶ ಕೊಡಬಾರದು ಎಂದು ತೀರ್ಪು ನೀಡಿದ್ದಾರೆ. ದಕ್ಷಿಣದ ಸಿನಿಮಾಗಳಿಂದ ಇಲಿಯಾನಾ ಅವರನ್ನು ಬ್ಯಾನ್ (Ban) ಮಾಡಿರುವುದಾಗಿಯೂ ತಿಳಿಸಿದ್ದಾರೆ. ಈ ವಿಷಯವು ಇಲಿಯಾನಾಗೆ ತಿಳಿದಿದೆಯೋ ಇಲ್ಲವೊ. ಹಾಗಾಗಿ ಈವರೆಗೂ ಅವರು ಬ್ಯಾನ್ ಕುರಿತು ಪ್ರತಿಕ್ರಿಯೆ ನೀಡಿಲ್ಲ. ಗೊತ್ತಾದ ಮೇಲೆ ಯಾವ ರೀತಿಯಲ್ಲಿ ಅವರು ಪ್ರತಿಕ್ರಿಯಿಸುತ್ತಾರೋ ಗೊತ್ತಿಲ್ಲ. ಇದನ್ನೂ ಓದಿ: ಬ್ಯಾಕ್‌ಲೆಸ್ ಫೋಟೋ ಶೇರ್, ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ `ಸಲಾರ್’ ನಟಿ
ಗೋವಾ ಮೂಲದ ಈ ಚೆಲುವು ಮೊದ ಮೊದಲು ದಕ್ಷಿಣದ ಬಹುತೇಕ ಭಾಷೆಗಳಲ್ಲಿ ನಟಿಸಿದವರು. ಆನಂತರ ಬಾಲಿವುಡ್ ಗೆ ಹಾರಿದರು. ಬಾಲಿವುಡ್ ನಲ್ಲೇ ನೆಲೆಯೂರಲು ಪರದಾಡಿ, ಇದೀಗ ಗೆಲುವನ್ನೂ ಪಡೆದಿದ್ದಾರೆ. ಹಾಗಾಗಿ ದಕ್ಷಿಣದ ಸಿನಿಮಾಗಳಿಗೆ ಅವರು ತೊಂದರೆ ನೀಡುತ್ತಿದ್ದಾರೆ ಎನ್ನುವ ಆರೋಪ ಅವರ ಮೇಲಿದೆ.