ಬೆಂಗಳೂರು: ಪತಿಯಿಂದ ನನಗೆ ಕಿರುಕುಳವಾಗುತ್ತಿದೆ. ಹೆಚ್ಚುವರಿ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದಾನೆ ಎಂದು ಪತಿಯ ವಿರುದ್ಧ ತಮಿಳು ನಟಿಯೊಬ್ಬರು ನಗರದ ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತಮಿಳು ನಟಿ ರಮ್ಯಾ ಪತಿಯ ವಿರುದ್ಧ ದೂರು ನೀಡಿದ್ದಾರೆ. ನಟಿ ರಮ್ಯಾಗೆ 2017ರಲ್ಲಿ ಕೊರಿಯೋಗ್ರಾಫರ್ ವರದರಾಜನ್ ಜೊತೆ ಮದುವೆಯಾಗಿತ್ತು. ವಿವಾಹದ ಸಂದರ್ಭದಲ್ಲಿ 25 ಲಕ್ಷ ಮೌಲ್ಯದ ಸೈಟ್, ಚಿನ್ನಾಭರಣ ಮತ್ತು ನಗದನ್ನು ಕೊಡಲಾಗಿತ್ತು.
Advertisement
Advertisement
ಇತ್ತೀಚೆಗೆ ಡ್ಯಾನ್ಸ್ ಅಕಾಡೆಮಿ ತೆರೆಯಲು ಮತ್ತಷ್ಟು ಹಣ ತರುವಂತೆ ಪತಿ ಮತ್ತು ಪತಿಯ ಕುಟುಂಬದವರು ಪೀಡಿಸಲಾರಂಭಿಸಿದ್ದಾರೆ. ಮದುವೆಯಾದ ಬಳಿಕ ನನ್ನ ಮನೆಗೆ ಕರೆದುಕೊಂಡು ಹೋಗದೆ ಹಿಂಸೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಕೋ ಡ್ಯಾನ್ಸರ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ನಟಿ ದೂರಿನಲ್ಲಿ ತಿಳಿಸಿದ್ದಾರೆ.
Advertisement
ನಟಿ ರಮ್ಯಾ ತಮಿಳಿನ ‘ಮಾಂಡಾ ಮಾಯಿಲ’ ರಿಯಾಲಿಟಿ ಶೋನಲ್ಲಿ ವಿಜೇತರಾಗಿದ್ದರು. ಸದ್ಯಕ್ಕೆ ವರದಕ್ಷಿಣೆ ಕೇಸ್‍ನಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.