ನ್ಯಾಷನಲ್ ಸ್ಟಾರ್ ಯಶ್ (Yash) ನಟನೆಯ ‘ಟಾಕ್ಸಿಕ್’ (Toxic) ಸಿನಿಮಾದ ಶೂಟಿಂಗ್ ಮುಂಬೈನಲ್ಲಿ ನಡೆಯುತ್ತಿದೆ. ಕಿಯಾರಾ ಬಳಿಕ ಮತ್ತೊಬ್ಬ ಬಾಲಿವುಡ್ ಬೆಡಗಿ ಹುಮಾ ಖುರೇಶಿ (Huma Qureshi) ‘ಟಾಕ್ಸಿಕ್’ ಚಿತ್ರದ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕುರಿತ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮುಂಬೈನಲ್ಲಿ ನಡೆಯುತ್ತಿದ್ದ ಸಿನಿಮಾ ಶೂಟಿಂಗ್ ಸ್ಥಳದಲ್ಲಿ ಹುಮಾ ಖುರೇಶಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ‘ಟಾಕ್ಸಿಕ್’ ಸಿನಿಮಾಗೆ ನಟಿ ಎಂಟ್ರಿ ಕೊಟ್ಟಿರುವ ಬಗ್ಗೆ ಚರ್ಚೆ ಶುರುವಾಗಿದೆ. ಸೆಟ್‌ಗೆ ಬರುತ್ತಿರುವ ನಟಿಯ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿದೆ. ಚಿತ್ರತಂಡಕ್ಕೆ ನಟಿ ಸಾಥ್ ನೀಡುವ ಕುರಿತು ಚಿತ್ರತಂಡ ಕ್ಲ್ಯಾರಿಟಿ ನೀಡುತ್ತಾರಾ? ಎಂದು ಕಾದುನೋಡಬೇಕಿದೆ.
. @humasqureshi also joined #Toxic Mumbai Schedule Yesterday ???? #ToxicTheMovie #YashBOSS @TheNameIsYash pic.twitter.com/g7wWiUzno3
— Yash fans trends (@yashKushal46) November 23, 2024
ಅಂದಹಾಗೆ, ಆ.8ರಂದು ‘ಟಾಕ್ಸಿಕ್’ ಸಿನಿಮಾದ ಮುಹೂರ್ತ ಸರಳವಾಗಿ ಜರುಗಿತ್ತು. ‘ಟಾಕ್ಸಿಕ್’ ಚಿತ್ರದ ಶೂಟಿಂಗ್ ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ. ಇದೀಗ ಮುಂಬೈನಲ್ಲಿ ತಂಡ ಬೀಡು ಬಿಟ್ಟಿದೆ. ಯಶ್ ನಟನೆಯ ಈ ಚಿತ್ರವು ಡ್ರಗ್ಸ್ ಮಾಫಿಯಾ ಕುರಿತಾದ ಕಥೆ ಎನ್ನಲಾಗಿದೆ. ಇದನ್ನೂ ಓದಿ:BBK 11: ಮತ್ತೆ ವರಸೆ ಬದಲಿಸಿದ ರಜತ್- ಸುಸ್ತಾದ ಮನೆ ಮಂದಿ
ಇನ್ನೂ ಈ ಚಿತ್ರವನ್ನು ಮಲಯಾಳಂ ಖ್ಯಾತ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಕೆವಿಎನ್ ಸಂಸ್ಥೆ ಜೊತೆ ಯಶ್ ಕೂಡ ಜಂಟಿಯಾಗಿ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಬಹುಭಾಷೆಗಳಲ್ಲಿ ಸಿನಿಮಾ ಮೂಡಿ ಬರಲಿದೆ.