ಮೂಗಿನಿಂದ ವಿಪರೀತ ರಕ್ತಸ್ರಾವ ಆದ ಹಿನ್ನೆಲೆಯಲ್ಲಿ ಪಂಜಾಬಿ ನಟಿ, ಗಾಯಕಿ ಹಿಮಾಂಶಿ ಖುರಾನಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ರೊಮೇನಿಯಾದಲ್ಲಿ ಅವರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಇದ್ದಕ್ಕಿದ್ದಂತೆ ಮೂಗಿನಿಂದ ರಕ್ತ ಸುರಿಯಲು ಶುರುವಾಯಿತು. ಅದು ನಿಲ್ಲದೇ ಇರುವ ಕಾರಣಕ್ಕಾಗಿ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಈಗ ಅವರಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ರೊಮೇನಿಯಾದಲ್ಲಿ ಇವರ ನಟನೆಯ ‘ಫಟ್ಟೋ ದೇ ಯಾರ್ ಬಡೇ ನೆ’ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಅಲ್ಲಿ ತೀವ್ರ ಶೀತದ ವಾತಾವರಣವಿತ್ತು. ಅಲ್ಲದೇ, ಅದು ಮಳೆಯಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗುತ್ತಿತ್ತು. ಈ ವೇಳೆಯಲ್ಲಿ ಹಿಮಾಂಶಿ ಜ್ವರದಿಂದ ಬಳಲುತ್ತಿದ್ದರು. ಆದರೂ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರಿಂದ ಮೂಗಿನಿಂದ ರಕ್ತಸಾವ್ರ ಶುರುವಾಗಿದೆ. ಇದನ್ನೂ ಓದಿ: ಪಾಕಿಸ್ತಾನದ ಹಲವೆಡೆ ಸ್ಫೋಟ – 5 ಸಾವು, 10 ಮಂದಿಗೆ ಗಾಯ
ಹಿಮಾಂಶಿ ಕೇವಲ ಗಾಯಕಿ ಮತ್ತು ನಟಿ ಮಾತ್ರವಲ್ಲ ಪಂಜಾಬಿ ಬಿಗ್ ಬಾಸ್ ಶೋನಲ್ಲೂ ಅವರು ಸ್ಪರ್ಧಿಯಾಗಿ ಭಾಗಿಯಾಗಿದ್ದರು. ಇದೇ ಸಮಯದಲ್ಲೇ ಮತ್ತೋರ್ವ ಸ್ಪರ್ಧಿ ಆಸಿಮ್ ರಿಯಾಜ್ ಜೊತೆ ಅವರು ಡೇಟಿಂಗ್ ಮಾಡುತ್ತಿದ್ದರು ಎಂದು ಹೇಳಲಾಗಿತ್ತು. ಹಲವು ವಿಚಾರಗಳಿಂದಾಗಿ ಅವರು ವಿರೋಧಿಗಳನ್ನೂ ಕಟ್ಟಿಕೊಂಡಿದ್ದರು. ಆ ವಿರೋಧಿಗಳು ಇವರ ಕಾರು ಮೇಲೆ ಕಲ್ಲು ತೂರಿದ್ದರು.