ಸಿನಿಮಾ ನಟರಿಗೆ ನಟ್ಟು ಬೋಲ್ಟು ಟೈಟ್ ಮಾಡುವುದು ಗೊತ್ತಿದೆ ಎಂದು ಹೇಳಿಕೆ ನೀಡಿದ್ದ ಡಿಸಿಎಂ ಡಿಕೆಶಿ (DK Shivakumar) ಮಾತಿಗೆ ಹಿರಿಯ ನಟಿ ಹೇಮಾ ಚೌಧರಿ (Hema Choudhary) ಪ್ರತಿಕ್ರಿಯೆ ನೀಡಿದ್ದಾರೆ. ಡಿಕೆಶಿ ಅವರಿಗೆ ಜವಾಬ್ದಾರಿ ಇದೆ ಎಂದು ನಟಿ ಹೇಮಾ ಚೌಧರಿ ಅವರು ಡಿಸಿಎಂ ಹೇಳಿಕೆ ಸಮರ್ಥಿಸಿ ಮಾತನಾಡಿದ್ದಾರೆ. ಇದನ್ನೂ ಓದಿ:ಡಿಸಿಎಂ ಅಧಿಕಾರ ದರ್ಪದಿಂದ ಹೇಳಿರಬಹುದು- ಡಿಕೆಶಿ ನಟ್ಟು, ಬೋಲ್ಟು ಹೇಳಿಕೆಗೆ ಫಿಲ್ಮ್ಂ ಚೇಂಬರ್ ಅಧ್ಯಕ್ಷ ಅಸಮಾಧಾನ
ಡಿಕೆ ಶಿವಕುಮಾರ್ ಅವರು ಈ ನಾಡಿನ ಡೆಪ್ಯೂಟಿ ಸಿಎಂ ಆಗಿದ್ದಾರೆ. ಅವರಿಗೂ ಜವಾಬ್ದಾರಿತನ ಇದೆ. ಅಷ್ಟೆಲ್ಲ ಹಣ ಬಿಡುಗಡೆ ಮಾಡಿ ಫಿಲ್ಮ್ಂ ಫೆಸ್ಟಿವಲ್ ಮಾಡುವಾಗ ಚಿತ್ರರಂಗದವರು ಬರಬೇಕು. ಬ್ಯುಸಿ ಇರುವವರ ಬಗ್ಗೆ ಹೇಳಲ್ಲ. ಬ್ಯುಸಿ ಇಲ್ಲದೇ ಇರುವವರು ಬರಬೇಕು ಎಂದು ಡಿಕೆಶಿ ಪರ ನಟಿ ಬ್ಯಾಟ್ ಬೀಸಿದ್ದಾರೆ.
ನಟರಿಗೆ ನಟ್ಟು ಬೋಲ್ಟು ಟೈಟ್ ಮಾಡುವುದು ಗೊತ್ತಿದೆ ಅಂತ ಅವರು ಬೇಕು ಅಂತಾ ಹೇಳಿಲ್ಲ. ಮಾತಿನ ಭರದಲ್ಲಿ ಆಗಿದೆ. ನಾವು ಮಾತಾಡುವಾಗ ಕೈಕಾಲು ಮುರಿತಿನಿ ಅಂತ ಹೇಳುತ್ತೇವೆ. ಹಾಗಂತ ಕೈ ಕಾಲು ಮುರಿದೇ ಹಾಕ್ತಿವಾ? ಎಂದು ನಟಿ ಪ್ರಶ್ನಿಸಿದ್ದಾರೆ. ಮಾತಿನ ಭರದಲ್ಲಿ ಡಿಕೆಶಿ ಅವರು ಹೇಳಿದ್ದಾರೆ. ಆದರೆ ಅವರ ಮಾತಿನಲ್ಲಿ ಅರ್ಥವಿದೆ ಎಂದು ಹೇಮಾ ಚೌಧರಿ ಮಾತನಾಡಿದ್ದಾರೆ.
ಅಂದಹಾಗೆ, ನಿನ್ನೆ ನಡೆದ 16ನೇ ಅಂತಾರಾಷ್ಟೀಯ ಚಲನಚಿತ್ರೋತ್ಸವದಲ್ಲಿ ಡಿಕೆ ಶಿವಕುಮಾರ್ ಮಾತನಾಡಿ, ಸಿನಿಮಾಗೆ ಯಾವುದೇ ಎಲ್ಲೆ ಇಲ್ಲ. ಎಲ್ಲಿ ಬೇಕಾದರೂ ಬೆಳೆಯಬಹುದು. ನೀವೆಲ್ಲ ಬಣ್ಣ ಹಾಕಿಕೊಂಡು ಸಿನಿಮಾ ಮಾಡ್ತೀರಾ. ನಾವು ಬಣ್ಣ ಹಾಕದೇ ಸಿನಿಮಾ ಮಾಡ್ತೀವಿ ಅಷ್ಟೆ ಎಂದು ರಾಜಕೀಯದ ಬಗ್ಗೆ ಹೇಳಿದರು.
ನನಗೆ ಚಲನಚಿತ್ರ ವಾಣಿಜ್ಯ ಮಂಡಳಿ, ಈ ಸಿನಿಮಾ ನಟರ ಬಗ್ಗೆ ನನಗೆ ಬಹಳ ಸಿಟ್ಟು ಬಂದುಬಿಟ್ಟಿದೆ, ಏಕೆಂದರೆ, ಕೋವಿಡ್ ಮುಗಿದ ಸಮಯದಲ್ಲಿ ನಾವು ನಮ್ಮ ಜಲ ನಮ್ಮ ಹಕ್ಕು ಎಂಬ ಜಾಥಾ ಮಾಡಿದ್ದೆವು, ನಮ್ಮ ಜನರಿಗೆ ನೀರು ಕೊಡುವ ಉದ್ದೇಶದಿಂದಾಗಿ ನಾವು, ಸಿದ್ದರಾಮಯ್ಯನವರು ಪಾದಯಾತ್ರೆ ಮಾಡಿದ್ದೆವು. ಆದರೆ ಆಗ ಯಾವ ನಟರೂ ಸಹ ನಮಗೆ ಬೆಂಬಲ ಕೊಡಲಿಲ್ಲ, ಸಾಧು ಕೋಕಿಲ ಮತ್ತು ದುನಿಯಾ ವಿಜಿ ಬಿಟ್ಟರೆ ಇನ್ಯಾರೂ ಸಹ ನಮಗೆ ಬೆಂಬಲ ಕೊಡಲಿಲ್ಲ. ಅನುಮತಿ ಕೊಡಲಿಲ್ಲ ಅಂದ್ರೆ ಶೂಟಿಂಗ್ ಮಾಡೋಕೆ ಆಗಲ್ಲ, ಯಾರು ಯಾರಿಗೆ ನಟ್ಟು ಬೋಲ್ಟ್ ಟೈಟ್ ಮಾಡಬೇಕು ಅಂತ ಗೊತ್ತಿದೆ ಎಂದು ಕಾರ್ಯಕ್ರಮದಲ್ಲಿ ಎಚ್ಚರಿಕೆ ನೀಡಿದ್ದರು.