ನಟಿ ಹೇಮಾ ಚೌಧರಿ ಆರೋಗ್ಯ ಸ್ಥಿತಿ ಗಂಭೀರ: ಐಸಿಯುನಲ್ಲಿ ಚಿಕಿತ್ಸೆ

Public TV
1 Min Read
Hema Chaudhary 2

ನ್ನಡದ ಹೆಸರಾಂತ ಹಿರಿಯ ನಟಿ ಹೇಮಾ ಚೌಧರಿ (Hema Chaudhary) ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎರಡು ದಿನಗಳ ಹಿಂದೆ ಅವರಿಗೆ ಬ್ರೈನ್ ಹ್ಯಾಮರೇಜ್ (Brain Hemorrhage) ಆಗಿತ್ತು ಎಂದು ತಿಳಿದು ಬಂದಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

Hema Chaudhary 1

ಮೂರು ದಿನಗಳ ಹಿಂದೆಯಷ್ಟೇ ಅವರು ಲೀಲಾವತಿ ಅವರ 11ನೇ ದಿನದ ಕಾರ್ಯದಲ್ಲಿ ಭಾಗಿಯಾಗಿದ್ದರು. ವಿನೋದ್ ರಾಜ್ ಅವರಿಗೆ ಸಾಂತ್ವನ ಕೂಡ ಹೇಳಿದ್ದರು. ಆಸಮಯದಲ್ಲಿ ಆರೋಗ್ಯವಾಗಿದ್ದ ಹೇಮಾ ಅವರು, ಅಲ್ಲಿಂದ ಬಂದ ನಂತರ ಏಕಾಏಕಿ ಮೆದುಳಿನಲ್ಲಿ ರಕ್ತಸ್ರಾವ ಆಗಿದೆ ಎಂದು ಹೇಳಲಾಗುತ್ತಿದೆ.

 

ಕನ್ನಡ, ಮಲಯಾಳಂ, ತೆಲುಗು, ತಮಿಳು ಹೀಗೆ ನಾನಾ ಭಾಷೆಗಳಲ್ಲಿ ಹೇಮಾ ಚೌಧರಿ ನಟಿಸಿದ್ದಾರೆ. ಕಿರುತೆರೆಯಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಹೀಗಾಗಿ ಹೇಮಾ ಅವರ ಅನಾರೋಗ್ಯ ಅವರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಹೇಮಾ ಅವರ ಪುತ್ರ ಐರ್ಲೆಂಡ್ ನಲ್ಲಿ ಇದ್ದಾರೆ. ಅವರು ಅಲ್ಲಿಂದ ಹೊರಟಿದ್ದಾರೆ ಎಂದು ಹೇಳಲಾಗುತ್ತಿದೆ.

Share This Article