ಸ್ಯಾಂಡಲ್ವುಡ್ ನಟಿ ಹರ್ಷಿಕಾ ಪೂಣಚ್ಚ (Harshika Poonacha) – ಭುವನ್ (Bhuvan) ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈಗ ನವವಧು ಹರ್ಷಿಕಾ ಗ್ಲ್ಯಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಕುರಿತ ಸುಂದರ ಫೋಟೋಗಳನ್ನ ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Advertisement
ಮದುವೆಯಾದ ಬಳಿಕ ವೆಕೇಷನ್ಗಾಗಿ ಹರ್ಷಿಕಾ ದಂಪತಿ ಅಮೆರಿಕಾದಲ್ಲಿದ್ದಾರೆ. ಅಲ್ಲಿ ಫ್ಯಾಷನ್ ಶೋವೊಂದರಲ್ಲಿ ರ್ಯಾಪ್ ವಾಕ್ ಮಾಡಿದ ಬಳಿಕ ಕೆಲ ಫೋಟೋಗಳನ್ನ ನಟಿ ಹಂಚಿಕೊಂಡಿದ್ದಾರೆ. ರೆಡ್ ಕಲರ್ ಉಡುಗೆಯಲ್ಲಿ ಸಖತ್ ಬೋಲ್ಡ್ & ಗ್ಲ್ಯಾಮರಸ್ ಆಗಿ ನಟಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ತಲಕಾವೇರಿಗೆ ವಿಶೇಷ ಪೂಜೆ ಸಲ್ಲಿಸಿದ ಅಭಿಷೇಕ್, ಅವಿವಾ ದಂಪತಿ
Advertisement
Advertisement
ಫ್ಯಾಷನ್ ಡ್ರೆಸ್ ಧರಿಸಿದ್ದರೂ ಕೂಡ ತನ್ನ ಮಾಂಗಲ್ಯವನ್ನ ತೆಗೆಯದೇ ಫೋಟೋಗೆ ಪೋಸ್ ಕೊಟ್ಟಿರೋದು ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
Advertisement
12 ವರ್ಷಗಳು ಪ್ರೀತಿಗೆ ಆಗಸ್ಟ್ 24ರಂದು ಮದುವೆಯಾಗುವ ಮೂಲಕ ಫ್ಯಾನ್ಸ್ಗೆ ಹರ್ಷಿಕಾ-ಭುವನ್ ಗುಡ್ ನ್ಯೂಸ್ ನೀಡಿದ್ದರು. ಕೊಡವ ಪದ್ಧತಿಯಂತೆ ಅದ್ದೂರಿಯಾಗಿ ಈ ಜೋಡಿ ಮದುವೆಯಾಗಿದ್ದಾರೆ.
ಭುವನ್ ನಟನೆ- ನಿರ್ದೇಶನದ ಹೊಸ ಸಿನಿಮಾಗೆ ಹರ್ಷಿಕಾ ಪೂಣಚ್ಚ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಸದ್ಯದಲ್ಲೇ ಈ ಸಿನಿಮಾದ ಶೂಟಿಂಗ್ ಶುರುವಾಗಲಿದೆ. ಮಾಲಾಶ್ರೀಗೆ ಜೊತೆಯಾಗಿ ‘ಮಾರಕಾಸ್ತ್ರ’ ಚಿತ್ರಕ್ಕೆ ಹರ್ಷಿಕಾ ಸಾಥ್ ನೀಡಿದ್ದಾರೆ. ಸದ್ಯದಲ್ಲೇ ಚಿತ್ರ ರಿಲೀಸ್ ಆಗಲಿದೆ.