ಸ್ಯಾಂಡಲ್‌ವುಡ್ ತಾರೆ ಹರ್ಷಿಕಾ ಪೂಣಚ್ಚ- ಭುವನ್ (Bhuvan) ಆಗಸ್ಟ್ 24ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯಾದ ಮೇಲೆ ಕೆಲ ದಿನಗಳ ಕಾಲ ಅಮೆರಿಕಾದಲ್ಲಿ ವೆಕೇಷನ್‌ನಲ್ಲಿದ್ರು. ಮದುವೆ ಬಳಿಕ ಮತ್ತೆ ಕ್ಯಾಮೆರಾ ಮುಂದೆ ಬರಲು ಹರ್ಷಿಕಾ (Harshika Poonacha) ತಯಾರಿ ಮಾಡಿಕೊಂಡಿದ್ದಾರೆ. ಹೊಸ ಚಿತ್ರಕ್ಕೆ ನಟಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
8 ಭಾಷೆಗಳಲ್ಲಿ ನಾಯಕಿಯಾಗಿ ಹರ್ಷಿಕಾ ಗುರುತಿಸಿಕೊಂಡಿದ್ದಾರೆ. ಮದುವೆಯಾದ್ಮೇಲೆಯೂ ಕೂಡ ಸಿನಿಮಾಗಳಲ್ಲಿ ನಟಿಸಲು ಆಸಕ್ತಿ ತೋರುತ್ತಿದ್ದಾರೆ. ಮದುವೆ ಮುಂಚೆ ನಟಿಸಿದ್ದ ‘ಮಾರಕಾಸ್ತ್ರ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿತ್ತು. ಈಗ ಮದುವೆ ಬಳಿಕ ವಿಭಿನ್ನ ಕಂಟೆಂಟ್ ಇರುವ ಭೋಜಪುರಿ ಚಿತ್ರಕ್ಕೆ ನಟಿ ಅಭಿನಯಿಸಲು ಓಕೆ ಎಂದಿದ್ದಾರೆ.
ಭೋಜಪುರಿ ನಟ ರಿತೇಶ್ ಪಾಂಡೆ ನಟನೆಯ ಸಿನಿಮಾದಲ್ಲಿ ಹರ್ಷಿಕಾ ಹೀರೋಯಿನ್ ಆಗಿದ್ದಾರೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಇದನ್ನೂ ಓದಿ:ದರ್ಶನ್ ವಿರುದ್ಧ ದೂರು ದಾಖಲಿಸಿದ್ದ ಮಹಿಳೆಗೆ ಪೊಲೀಸರಿಂದ ನೋಟಿಸ್
ಪತಿ ಭುವನ್ ನಟನೆಯ ಹೊಸ ಸಿನಿಮಾಗೆ ಹರ್ಷಿಕಾ ಬಂಡವಾಳ ಹೂಡುತ್ತಿದ್ದಾರೆ. ಈ ಚಿತ್ರದ ಮೂಲಕ ನಿರ್ಮಾಪಕಿಯಾಗಿ ಹರ್ಷಿಕಾ ಬರುತ್ತಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]