ಮದುವೆ ದಿನ ಹತ್ತಿರ ಬರುತ್ತಿದ್ದಂತೆ ಬಾಲಿಗೆ ಹಾರಿದ ಹರ್ಷಿಕಾ ಪೂಣಚ್ಚ

Public TV
1 Min Read
harshika

ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ (Harshika Poonacha) ಅವರ ಮದುವೆಗೆ ಕೆಲವೇ ದಿನಗಳು ಬಾಕಿಯಿದೆ. ಮದುವೆಗೆ ಸಿದ್ಧತೆ ಭರದಿಂದ ಸಾಗುತ್ತಿರುವ ಬೆನ್ನಲ್ಲೇ ನಟಿ ಬಾಲಿಗೆ ಹಾರಿದ್ದಾರೆ. ಬ್ಯಾಚುಲರ್ ಲೈಫ್‌ಗೆ ಗುಡ್ ಬೈ ಹೇಳುವ ಮುಂಚೆ, ಸಿಂಗಲ್ ಲೈಫ್ ಎಂಜಾಯ್ ಮಾಡಲು ಫ್ರೆಂಡ್ಸ್ ಜೊತೆ ಬಾಲಿಗೆ ತೆರಳಿದ್ದಾರೆ.

harshika

ಹಲವು ವರ್ಷಗಳ ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತಲು ಹರ್ಷಿಕಾ- ಭುವನ್ (Bhuvan) ರೆಡಿಯಾಗಿದ್ದಾರೆ. ಜುಲೈ 15ಕ್ಕೆ ಕೊಡಗಿನಲ್ಲಿ ಭುವನ್ ಮನೆಯ ಗೃಹಪ್ರವೇಶ ಈಗಾಗಲೇ ನೆರವೇರಿದ್ದು, ಇದೀಗ ಕೊಡವ ಸಂಪ್ರದಾಯದಂತೆ ಹರ್ಷಿಕಾ-ಭುವನ್ ಅವರು ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾಗಲಿದ್ದಾರೆ. ಇದೇ ಆಗಸ್ಟ್ 24ಕ್ಕೆ ವಿರಾಜ್‌ಪೇಟೆಯಲ್ಲಿ ಹರ್ಷಿಕಾ-ಭುವನ್ ಅದ್ದೂರಿ ಮದುವೆ (Wedding) ನಡೆಯಲಿದೆ.

harshika poonacha

ಹಾಗಾಗಿ ಹಸೆಮಣೆ ಏರುವ ಮುಂಚೆಯೇ ನಟಿ ಹರ್ಷಿಕಾ ಬಾಲಿಗೆ ಸ್ನೇಹಿತರ ಜೊತೆ ಹೋಗಿದ್ದಾರೆ. ಇಂಡೋನೇಷ್ಯಾದ ಬಾಲಿಯಲ್ಲಿ (Baali) ಫ್ರೆಂಡ್ಸ್ ಮಸ್ತ್ ಮಜಾ ಮಾಡ್ತಿದ್ದಾರೆ. ಇದರ ಬಗ್ಗೆ ನಟಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ತಿಳಿಸಿದ್ದಾರೆ. ಹರ್ಷಿಕಾ, ತಲೆಗೆ ಕ್ಯಾಪ್ ಧರಿಸಿ, ಬಿಳಿ ಬಣ್ಣದ ಟಾಪ್, ಆಕಾಶ ನೀಲಿ ಪ್ಯಾಂಟ್ ಧರಿಸಿದ್ದಾರೆ. ಬಾಲಿಯ ಸುಂದರ ದ್ವೀಪವನ್ನ ನೋಡುತ್ತಿರೋ ಫೋಟೋಗಳನ್ನ ನಟಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:‘ಓ ಮೈ ಗಾಡ್ 2’ ಚಿತ್ರಕ್ಕೆ 20 ಕಡೆ ಕತ್ತರಿಯ ಜೊತೆಗೆ ‘ಎ’ ಸರ್ಟಿಫಿಕೇಟ್

harshika 1

ಜಾಕಿ, ಕಾಸಿನ ಸರ, ಮುರಳಿ ಮೀಟ್ಸ್‌ ಮೀರಾ, ಅದ್ವೈತ, ಅಲೆ, ಚಿಟ್ಟೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ಹರ್ಷಿಕಾ ನಟಿಸಿದ್ದಾರೆ. ಮರಾಠಿ, ಮಲಯಾಳಂ, ಕೊಂಕಣಿ, ತೆಲುಗು ಸೇರಿದಂತೆ 8 ಭಾಷೆಗಳಲ್ಲಿ ನಟಿಸುವ ಮೂಲಕ ಕೊಡಗಿನ ಕುವರಿ ಗಮನ ಸೆಳೆದಿದ್ದಾರೆ.

ನಟಿ ಹರ್ಷಿಕಾ ಪೂಣಚ್ಚ ಅವರು ಕನ್ನಡ, ಮರಾಠಿ, ಸೇರಿದಂತೆ ಹಲವು ಭಾಷೆಗಳಲ್ಲಿ ಬ್ಯುಸಿಯಾಗಿದ್ದಾರೆ. ಕೈತುಂಬಾ ಸಿನಿಮಾಗಳಿವೆ, ಈ ವರ್ಷ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ತೆರೆಗೆ ಅಪ್ಪಳಿಸಲಿದೆ.

Share This Article