ನಟಿ ಹರ್ಷಿಕಾ ಪೂಣಚ್ಚ (Harshika Poonacha) ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 7 ತಿಂಗಳ ತುಂಬು ಗರ್ಭಿಣಿಯಾಗಿರುವ ನಟಿ ಇದೀಗ ರವಿವರ್ಮ ಪೇಂಟಿಂಗ್ ಥೀಮ್‌ನಲ್ಲಿ ಸುಂದರವಾಗಿ ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಿದ್ದಾರೆ. ಇದನ್ನೂ ಓದಿ:‘ಜಂಬೂ ಸರ್ಕಸ್’ : ರಿಲೀಸ್ ಆಯ್ತು ಮನಸೋತೆ ಮನಸಾರೆ ಸಾಂಗ್
ಮೈ ತುಂಬಾ ಆಭರಣ ಧರಿಸಿ ಪಿಂಕ್ ಬಣ್ಣದ ಸೀರೆಯುಟ್ಟು ಮುದ್ದಾಗಿ ನಟಿ ಕಾಣಿಸಿಕೊಂಡಿದ್ದಾರೆ. ವಿವಿಧ ಭಂಗಿಗಳಲ್ಲಿ ನಟಿ ಪೋಸ್ ನೀಡಿದ್ದಾರೆ. ವಿಭಿನ್ನ ರೀತಿಯಲ್ಲಿ ನಟಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ನಟಿಯ ಲುಕ್ ನೋಡಿ ಫ್ಯಾನ್ಸ್ ವಾವ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹರ್ಷಿಕಾ ಮತ್ತು ಭುವನ್ ದಂಪತಿ ಮೊದಲ ಮಗುವಿನ ಆಗಮನಕ್ಕಾಗಿ ಎದುರು ನೋಡ್ತಿದ್ದಾರೆ. ಚೊಚ್ಚಲ ಮಗು ಆಗಮನಕ್ಕೆ ದಿನಗಣನೆ ಶುರುವಾಗಿದ್ದು, ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದಾರೆ. ಇದನ್ನೂ ಓದಿ:ರಾಖಿ ಹಬ್ಬ ಆಚರಿಸಿದ ಸ್ಯಾಂಡಲ್‌ವುಡ್ ಸ್ಟಾರ್ಸ್
ಜು.2ರಂದು ಕೊಡಗು ಶೈಲಿಯಲ್ಲಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿ ತಾಯಿಯಾಗುತ್ತಿರುವ ಗುಡ್ ನ್ಯೂಸ್ ಅನ್ನು ನಟಿ ಹಂಚಿಕೊಂಡಿದ್ದರು. ಇಡೀ ಕುಟುಂಬ ಈ ಫೋಟೋಶೂಟ್‌ನಲ್ಲಿ ಭಾಗಿಯಾಗಿತ್ತು. ಇದನ್ನೂ ಓದಿ:ಲವ್ ಯೂ ಗೊಂಬೆ ಎಂದು ತಂಗಿಗೆ ಲವ್ಲಿ ನೋಟ್ ಬರೆದ ರಶ್ಮಿಕಾ ಮಂದಣ್ಣ
ಅಂದಹಾಗೆ, ಹಲವು ವರ್ಷಗಳು ಪ್ರೀತಿಸಿ, ಆ.24ರಂದು ಹರ್ಷಿಕಾ ಮತ್ತು ಭುವನ್ ಜೋಡಿ ಹಸೆಮಣೆ ಏರಿದರು. ಹುಟ್ಟೂರು ಕೊಡಗಿನಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಮದುವೆಗೆ ಪೂಜಾ ಗಾಂಧಿ, ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಸೇರಿದಂತೆ ಅನೇಕರು ಭಾಗಿಯಾಗಿ ಶುಭಕೋರಿದ್ದರು.
View this post on Instagram
ಇನ್ನೂ ಸಿನಿಮಾ ವಿಚಾರಕ್ಕೆ ಬರೋದಾದ್ರೆ, ಪತಿ ಭುವನ್ (Actor Bhuvan) ನಟಿಸಲಿರುವ ಮುಂಬರುವ ಚಿತ್ರಕ್ಕೆ ಹರ್ಷಿಕಾ ಅವರೇ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಸದ್ಯ ಶೂಟಿಂಗ್ ಕೂಡ ಭರದಿಂದ ನಡೆಯುತ್ತಿದೆ.