ಸ್ಯಾಂಡಲ್‌ವುಡ್ (Sandalwood) ನಟಿ ಹರಿಪ್ರಿಯಾ (Haripriya) ಪ್ರಸ್ತುತ ವೈವಾಹಿಕ ಜೀವನವನ್ನ ಎಂಜಾಯ್ ಮಾಡ್ತಿದ್ದಾರೆ. ವಸಿಷ್ಠ ಸಿಂಹ (Vasista Simha) ಜೊತೆ ಇತ್ತೀಚಿಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ, ಸದ್ಯ ತಮ್ಮ ಫಸ್ಟ್ ಕಿಸ್ ಬಗ್ಗೆ ಮಾತನಾಡಿದ್ದಾರೆ.
ಜನವರಿ 26ರಂದು ಹೊಸ ಬಾಳಿಗೆ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಕಾಲಿಟ್ಟರು. ದಾಂಪತ್ಯ- ಸಿನಿಮಾ ಕೆರಿಯರ್ ಎರಡನ್ನು ಬ್ಯಾಲೆನ್ಸ್ ಮಾಡುತ್ತಾ ಖುಷಿಯಿಂದ ಜೀವನ ಸಾಗಿಸುತ್ತಿದ್ದಾರೆ ಸಿಂಹಪ್ರಿಯಾ ದಂಪತಿ. ಇದನ್ನೂ ಓದಿ:‘ಕೆಜಿಎಫ್’ ರೈಟರ್ ಸಿನಿಮಾ ಮೂಲಕ ಕನ್ನಡಕ್ಕೆ ಬಂದ ಬೋಲ್ಡ್ ಬ್ಯೂಟಿ
View this post on Instagram
ಸಿನಿಮಾ ಜೊತೆ ಹರಿಪ್ರಿಯಾ ಸಿಂಹ ಎಂಬ ಯೂಟ್ಯೂಬ್ ಚಾನೆಲ್ ಕೂಡ ನಟಿ ಪ್ರಾರಂಭಿಸಿದ್ದಾರೆ. ಮನರಂಜನೆಗಾಗಿ ಮತ್ತು ಅಭಿಮಾನಿಗಳ ಜೊತೆಗೆ ತಮ್ಮ ವಿಚಾರಗಳನ್ನ ಹಂಚಿಕೊಳ್ಳಲು ಹರಿಪ್ರಿಯಾ ಮನಸ್ಸು ಮಾಡಿದ್ದಾರೆ. ಮೊದಲಿಗೆ ತಮ್ಮ ಮದುವೆಯ ವೀಡಿಯೋವನ್ನ ನಟಿ ಹಂಚಿಕೊಂಡಿದ್ದರು. ಈಗ ತಮ್ಮ ಫಸ್ಟ್ ಕಿಸ್ ಬಗ್ಗೆ ಮೌನ ಮುರಿದಿದ್ದಾರೆ.
ತಮ್ಮ ಜೀವನದಲ್ಲಿ ಯಾರಿಗೂ ತಿಳಿಯದ 12 ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ. ನಾನು ಸಿನಿಮಾ ಜಗತ್ತಿಗೆ 16 ವಯಸ್ಸಿಗೆ ಕಾಲಿಟಿರುವೆ ಎಂದಿದ್ದಾರೆ. ಫಸ್ಟ್ ಕಿಸ್ ಬಗ್ಗೆ ನಟಿ ಮಾತನಾಡಿದ್ದಾರೆ. ನನ್ನ ಫಸ್ಟ್ ಕಿಸ್ ಬಗ್ಗೆ ತಿಳಿದುಕೊಳ್ಳಲು ಅಷ್ಟು ಕುತೂಹಲನಾ ಎಂದು ನಾಚಿಕೊಂಡಿದ್ದಾರೆ. ನನಗೆ ಕಂಫರ್ಟ್ ಫೀಲ್ ಇರಲಿಲ್ಲ ಎಂದಿದ್ದಾರೆ. ಈ ಕುರಿತ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಈ ಕುರಿತ ಎಪಿಸೋಡ್ ಸದ್ಯದಲ್ಲೇ ಹರಿಪ್ರಿಯಾ ಯೂಟ್ಯೂಬ್ ಚಾನೆಲ್‌ನಲ್ಲಿ ಬರಲಿದೆ.