ಕನ್ನಡದ ನಟಿ ಹರಿಪ್ರಿಯಾ (Haripriya) ಅವರು ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಿರುವಾಗ ಹರಿಪ್ರಿಯಾಗೆ ಅದ್ಧೂರಿಯಾಗಿ ಸೀಮಂತ ಶಾಸ್ತ್ರ ಮಾಡಲಾಗಿದೆ. ಹಸಿರು ಬಣ್ಣದ ಸೀರೆಯುಟ್ಟು ಮುದ್ದಾಗಿ ನಟಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:BBK 11: 9 ಸ್ಪರ್ಧಿಗಳ ನಡುವೆ ಪೈಪೋಟಿ- ಟಿಕೆಟ್ ಟು ಫಿನಾಲೆ ಪಾಸ್ ಸಿಗೋದು ಯಾರಿಗೆ?
ವಸಿಷ್ಠ ಸಿಂಹ (Vasishta Simha) ಮತ್ತು ಹರಿಪ್ರಿಯಾ ಜೋಡಿ ಮೊದಲ ಮಗು ಮನೆಗೆ ಎಂಟ್ರಿ ಕೊಡಲಿರುವ ಖುಷಿಯಲ್ಲಿದ್ದಾರೆ. ಸದ್ಯ ತುಂಬು ಗರ್ಭಿಣಿಯಾಗಿರುವ ನಟಿಗೆ ಸೀಮಂತ (Baby Shower) ಶಾಸ್ತ್ರ ಜರುಗಿದೆ. ಈ ಕಾರ್ಯಕ್ರಮದಲ್ಲಿ ಹಿರಿಯ ನಟಿ ತಾರಾ ಕೂಡ ಭಾಗವಹಿಸಿ ಹರಿಪ್ರಿಯಾ ಶುಭಕೋರಿದ್ದಾರೆ. ನಟಿಗೆ ಕುಂಕುಮ ಇಟ್ಟು ಗಿಫ್ಟ್ ನೀಡಿ ವಿಶ್ ಮಾಡಿದ್ದಾರೆ. ಆ ನಂತರ ವಸಿಷ್ಠ ಪತ್ನಿಗೆ ಮುದ್ದು ಮಾಡಿದ್ದಾರೆ.
ಕಳೆದ ವರ್ಷ ಜ.26ರಂದು ಮೈಸೂರಿನಲ್ಲಿ ವಸಿಷ್ಠ ಸಿಂಹ ಜೊತೆ ನಟಿ ಹಸೆಮಣೆ ಏರಿದರು. ಹಲವು ವರ್ಷಗಳು ಪ್ರೀತಿಸಿ ಗುರುಹಿರಿಯರ ಒಪ್ಪಿಗೆ ಪಡೆದು ಮದುವೆಯಾದರು. ಇದೀಗ ಚೊಚ್ಚಲ ಮಗುವನ್ನು ಬರಮಾಡಿಕೊಳ್ಳುವ ತವಕದಲ್ಲಿದ್ದಾರೆ.
ಅಂದಹಾಗೆ, ವಸಿಷ್ಠ ಸಿಂಹ ಕನ್ನಡದ ಜೊತೆ ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಲವು ಪಾತ್ರಗಳ ಮೂಲಕ ಗಮನ ಸೆಳೆಯಲು ಸಜ್ಜಾಗಿದ್ದಾರೆ. ಹರಿಪ್ರಿಯಾ ಪ್ರಸ್ತುತ ನಟನೆಯಿಂದ ಅಂತರ ಕಾಯ್ದುಕೊಂಡಿದ್ದಾರೆ.