ಅರಿಶಿನ ಶಾಸ್ತ್ರದ ಸಂಭ್ರಮದಲ್ಲಿ ಮಿಂದೆದ್ದ `ಸಿಂಹಪ್ರಿಯ’ ಜೋಡಿ

ಸ್ಯಾಂಡಲ್‌ವುಡ್‌ನ (Sandalwood) ಮುದ್ದಾದ ಜೋಡಿ ಹರಿಪ್ರಿಯಾ (Haripriya) ಮತ್ತು ವಸಿಷ್ಠ ಸಿಂಹ (Vasishta simha) ಮದುವೆಗೆ ಕೌಂಟ್‌ಡೌನ್ ಶುರುವಾಗಿದೆ. ಈ ಬೆನ್ನಲ್ಲೇ ಅರಿಶಿನ ಶಾಸ್ತ್ರದ ಸಂಭ್ರಮದಲ್ಲಿ ಮಿಂಚಿರುವ ಫೋಟೋವನ್ನು ಸಿಂಹಪ್ರಿಯ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಸಾಕಷ್ಟು ವರ್ಷಗಳ ಪ್ರೀತಿಗೆ ಮದುವೆ ಮುದ್ರೆ ಒತ್ತಲು ಹರಿಪ್ರಿಯಾ ಮತ್ತು ವಸಿಷ್ಠ ರೆಡಿಯಾಗಿದ್ದಾರೆ. ಈಗಾಗಲೇ ಈ ಜೋಡಿಯ ಮನೆಯಲ್ಲಿ ಮದುವೆಯ ಸಂಭ್ರಮ ಕಳೆಗಟ್ಟಿದೆ. ಮೈಸೂರಿನಲ್ಲಿ ಜನವರಿ 26ರಂದು ಸಿಂಹಪ್ರಿಯ ಜೋಡಿ ಹಸೆಮಣೆ (Wedding) ಏರಲು ರೆಡಿಯಾಗಿದೆ. ಇದನ್ನೂ ಓದಿ: ಪತ್ನಿ ಸಂಗೀತಾಗೆ ವಿಜಯ್ ಡಿವೋರ್ಸ್, ಕೀರ್ತಿ ಸುರೇಶ್ ಜೊತೆ 2ನೇ ಮದುವೆ?
ಇದೀಗ ಅರಿಶಿನ ಶಾಸ್ತ್ರದ (Arashina Shastra) ಸುಂದರ ಕ್ಷಣಗಳ ಫೋಟೋವನ್ನು ಹರಿಪ್ರಿಯಾ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಹರಿಪ್ರಿಯಾ ಬಿಳಿ ಬಣ್ಣದ ಚೂಡಿದಾರ್‌ನಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ವಸಿಷ್ಠ ಸಿಂಹ ಬಿಳಿ ಬಣ್ಣದ ಶೆರ್ವಾನಿಯಲ್ಲಿ ಮಿಂಚಿದ್ದಾರೆ.
View this post on Instagram
ಹರಿಪ್ರಿಯಾಗೆ ತಾಳಿ ಕಟ್ಟಲು ಕೌಂಟ್‌ಡೌನ್ ಶುರುವಾಗಿದೆ. ಸದ್ಯ ಅರಿಶಿನ ಶಾಸ್ತ್ರದ ಫೋಟೋಸ್ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಹೊಸ ಬಾಳಿಗೆ ಕಾಲಿಡ್ತಿರುವ ಸಿಂಹಪ್ರಿಯ (Simhapriya) ಜೋಡಿಗೆ ಫ್ಯಾನ್ಸ್ ಶುಭಕೋರುತ್ತಿದ್ದಾರೆ.
Live Tv
Join our Whatsapp group by clicking the below link
https://chat.whatsapp.com/E6YVEDajTzH06LOh77r25k