ಸ್ಯಾಂಡಲ್‌ವುಡ್ ನಟಿ ಹರಿಪ್ರಿಯಾ (Haripriya) ಮತ್ತು ವಸಿಷ್ಠ ಸಿಂಹ (Vasishta Simha) ದಂಪತಿ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮಗು ಜನಿಸಿ 3 ತಿಂಗಳು ತುಂಬಿದ ಖುಷಿಯಲ್ಲಿ ಮಗನ ಫೋಟೋವನ್ನು ವಸಿಷ್ಠ ಜೋಡಿ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:‘ಬಾಹುಬಲಿ’ ನಟನ ಬಗ್ಗೆ ಹಗುರವಾಗಿ ಮಾತನಾಡಿದ ಮಂಚು ವಿಷ್ಣು- ಪ್ರಭಾಸ್ ಫ್ಯಾನ್ಸ್ ರೆಬೆಲ್
ಜ.26ರಂದು ಹರಿಪ್ರಿಯಾ ಮುದ್ದಾದ ಗಂಡು ಮಗನಿಗೆ ಜನ್ಮ ನೀಡಿದರು. ಹೀಗಾಗಿ ಸಿನಿಮಾಗೆ ಬ್ರೇಕ್ ಕೊಟ್ಟು ಮಗನ ಆರೈಕೆಯಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಮಗನಿಗೆ 3 ತಿಂಗಳು ತುಂಬಿದ ಖುಷಿಯಲ್ಲಿ ಫೋಟೋವನ್ನು ಮೊದಲ ಬಾರಿಗೆ ಹರಿಪ್ರಿಯಾ ದಂಪತಿ ರಿವೀಲ್ ಮಾಡಿದ್ದಾರೆ.
View this post on Instagram
ಮಗನೊಂದಿಗಿನ ಬ್ಲ್ಯಾಕ್ & ವೈಟ್ ಫೋಟೋ ಶೇರ್ ಮಾಡಿ, ನಾವಿಬ್ಬರೂ ಮೂವರಾಗಿ ಇಂದಿಗೆ 3 ತಿಂಗಳು ಎಂದು ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೋಡಿ ಇನ್ಸ್ಟಾಗ್ರಾಂ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಫೋಟೋ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
2023ರ ಜನವರಿ 26ರಂದು ವಸಿಷ್ಠ ಮತ್ತು ಹರಿಪ್ರಿಯಾ ಮೈಸೂರಿನಲ್ಲಿ ಮದುವೆಯಾದರು. ಇದೇ ದಿನಾಂಕ ಈ ವರ್ಷ ಜ.26ರಂದು ಗಂಡು ಮಗುವಿಗೆ ನಟಿ ಜನ್ಮ ನೀಡಿದರು.