ದಕ್ಷಿಣದ ಖ್ಯಾತ ನಟಿ ಹನ್ಸಿಕಾ ಮೊಟ್ವಾಣಿ (Hansika Motwani) ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಯನ್ನು ಹಂಚಿಕೊಂಡಿದ್ದಾರೆ. ತಮ್ಮ ಸಿನಿ ಕೆರಿಯರ್ ಆರಂಭದ ದಿನಗಳಲ್ಲಿ ನಡೆದ ಆ ಘಟನೆಯ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಆ ನಟನಿಂದಾಗಿ ಸಾಕಷ್ಟು ಹಿಂಸೆ ಮತ್ತು ಅವಮಾನವನ್ನು ಎದುರಿಸಬೇಕಾಯಿತು ಅಂದಿದ್ದಾರೆ.
Advertisement
ಅದು ನನ್ನ ಸಿನಿಮಾ ರಂಗದ ಆರಂಭದ ದಿನಗಳು. ಸಿನಿಮಾ ರಂಗದಲ್ಲೇ ನೆಲೆಯೂರಬೇಕು ಎಂದು ಬಂದವಳಿಗೆ ಸಾಕಷ್ಟು ಅವಮಾನಗಳು ಆಗಿವೆ. ಅದರಲ್ಲೂ ಆ ನಟನೊಬ್ಬ ಆತನೊಂದಿಗೆ ಡೇಟ್ ಮಾಡುವಂತೆ ಸಾಕಷ್ಟು ತೊಂದರೆ ಕೊಟ್ಟ. ನಾನು ಒಪ್ಪದೇ ಇದ್ದಾಗ ಅವಮಾನಿಸಿದ. ಆ ನೋವಿನಿಂದ ಆಚೆ ಬರುವುದಕ್ಕೆ ಸಾಕಷ್ಟು ಕಷ್ಟಪಟ್ಟೆ ಎಂದಿದ್ದಾರೆ ಹನ್ಸಿಕಾ. ಆದರೆ, ಆ ನಟ ಯಾರು ಎನ್ನುವುದನ್ನು ಅವರು ಹೇಳಿಲ್ಲ. ಇದನ್ನೂ ಓದಿ:ಕನ್ನಡದ ‘ಅಮೃತವರ್ಷಿಣಿ’ ಖ್ಯಾತಿಯ ನಟ ಶರತ್ ಬಾಬು ನಿಧನ
Advertisement
Advertisement
ದೇಶಮುದುರು ಚಿತ್ರದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ಹನ್ಸಿಕಾ, ಆನಂತರ ತಮಿಳು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಚಿತ್ರಗಳಲ್ಲಿ ನಟಿಸಿದ್ದಾರೆ. ಹನ್ಸಿಕಾ ಬಾಲನಟಿಯಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದರೂ, ನಾಯಕಿಯಾಗಿ ನೆಲೆಯೂರಲು ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಸಿನಿಮಾಗಳ ಹಿಟ್ ನಂತರ ತೆಲುಗು (Telugu), ತಮಿಳು ಹಾಗೂ ಕನ್ನಡ ಸಿನಿಮಾಗಳ ಸೂಪರ್ ಸ್ಟಾರ್ ಗಳ ಜೊತೆಯೇ ತೆರೆ ಹಂಚಿಕೊಂಡಿದ್ದಾರೆ.
Advertisement
ತಮಿಳು (Tamil) ಸಿನಿಮಾ ರಂಗದಲ್ಲಿ ಹನ್ಸಿಕಾಗೆ ತನ್ನದೇ ಅಭಿಮಾನಿ ಬಳಗವಿದ್ದು, ಅವಳಿಗಾಗಿ ದೇವಸ್ಥಾನವನ್ನೂ ಕಟ್ಟಿದ್ದರು. ಅಲ್ಲದೇ, ಹನ್ಸಿಕಾ ಹೆಸರಿನಲ್ಲಿ ಸಾಕಷ್ಟು ಸಮಾಜಮುಖಿ ಕೆಲಸಗಳನ್ನೂ ಅವರ ಅಭಿಮಾನಿಗಳು ಮಾಡಿದ್ದಾರೆ.