Connect with us

Cinema

ಖ್ಯಾತ ನಟಿಯ ನಂಬರನ್ನು ಅಡಲ್ಟ್ ಗ್ರೂಪ್‍ಗೆ ಹಾಕಿದ ಪಿಜ್ಜಾ ಡೆಲಿವರಿ ಬಾಯ್

Published

on

ಚೆನ್ನೈ: ಹಲವು ನಟಿಯರು ಹಲವು ರೀತಿಯ ಸಂಕಷ್ಟಗಳನ್ನು ಎದುರಿಸುತ್ತಾರೆ. ಕೆಲವರು ಈ ಕುರಿತು ಹೇಳಿಕೊಂಡು ಇತರರಲ್ಲಿ ಜಾಗೃತಿ ಮೂಡಿಸುತ್ತಾರೆ. ಇನ್ನೂ ಕೆಲವರು ಅದನ್ನು ಅಲ್ಲಿಗೇ ಮುಚ್ಚಿ ಹಾಕುತ್ತಾರೆ. ಇದೀಗ ದಿಕ್ಷಿಣದ ಖ್ಯಾತ ನಟಿಗೂ ಅದೇ ರೀತಿಯಾಗಿದ್ದು, ಫಿಜ್ಜಾ ಡೆಲಿವರಿ ಬಾಯ್ ನಟಿಯ ಮೊಬೈಲ್ ನಂಬರನ್ನು ಅಡಲ್ಟ್ ಗ್ರೂಪ್‍ಗೆ ಶೇರ್ ಮಾಡುವ ಮೂಲಕ ಪುಂಡಾಟ ಮೆರೆದಿದ್ದಾನೆ. ಈ ಕುರಿತು ಅವರು ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ದಕ್ಷಿಣದ ಚಿತ್ರರಂಗದಲ್ಲಿ ಅಪಾರ ಖ್ಯಾತಿ ಪಡೆದಿರುವ ನಟಿ ಗಾಯಾತ್ರಿ ಸಾಯಿ ಸಂಕಷ್ಟಕ್ಕೆ ಸಿಲುಕಿದ್ದು, ಅವರ ನಂಬರನ್ನು ಅಡಲ್ಟ್ ವಾಟ್ಸಪ್ ಗ್ರೂಪ್ ನಲ್ಲಿ ಹಂಚಿಕೊಳ್ಳಲಾಗಿದೆ. ಇದರಿಂದಾಗಿ ಅವರಿಗೆ ಸಿಕ್ಕಾಪಟ್ಟೆ ಕರೆಗಳು ಬರುತ್ತಿದ್ದು, ತೀವ್ರ ಕಿರುಕುಳ ಅನುಭವಿಸುತ್ತಿದ್ದಾರೆ. ಅಷ್ಟಕ್ಕೂ ಈ ನಂಬರ್ ಹೇಗೆ ಗ್ರೂಪ್‍ನಲ್ಲಿ ಶೇರ್ ಮಾಡಲಾಗಿದೆ, ಯಾರು ಶೇರ್ ಮಾಡಿದರು ಎಂಬುದಕ್ಕೆ ಅಚ್ಚರಿಯ ಉತ್ತರ ಸಿಕ್ಕಿದ್ದು, ಫಿಜ್ಜಾ ಡೆಲಿವರಿ ಬಾಯ್ ಈ ರೀತಿಯ ಕೃತ್ಯ ಎಸಗಿದ್ದಾನೆ ಎಂಬ ಭಯಾನಕ ಮಾಹಿತಿ ಹೊರ ಬಿದ್ದಿದೆ.

ಗಾಯತ್ರಿಯವರು ಪಿಜ್ಜಾ ಆರ್ಡರ್ ಮಾಡಿದ್ದಾರೆ. ಈ ವೇಳೆ ಪಿಜ್ಜಾ ಡೆಲಿವರಿ ಮಾಡಲು ಬಂದ ಬಾಯ್ ಅದೇ ಮೊಬೈಲ್ ಸಂಖ್ಯೆಯನ್ನು ಅಡಲ್ಟ್ ವಾಟ್ಸಪ್ ಗ್ರೂಪ್ ನಲ್ಲಿ ಹಂಚಿಕೊಂಡಿದ್ದಾನೆ. ಹೀಗಾಗಿ ನಟಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೆ ಪರಿಹಾರಕ್ಕಾಗಿ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ 26 ವರ್ಷದ ನಟಿ ಗಾಯತ್ರಿಯವರು ಮಾಹಿತಿ ಹಂಚಿಕೊಂಡಿದ್ದು, ಮಹಿಳೆಯರು ಜಾಗೃತರಾಗಿರುವಂತೆ ಎಚ್ಚರಿಸಿದ್ದಾರೆ. “ಡೊಮಿನೋಸ್ ಡೆಲಿವರಿ ಬಾಯ್ ಫೆಬ್ರವರಿ 9 ರಂದು ಚೆನ್ನೈನಲ್ಲಿರುವ ನಮ್ಮ ನಿವಾಸಕ್ಕೆ ಭೇಟಿ ನೀಡಿ ಪಿಜ್ಜಾ ಡೆಲಿವರಿ ಮಾಡಿದ್ದಾನೆ. ಆದರೆ ನನ್ನ ಮೊಬೈಲ್ ಸಂಖ್ಯೆಯನ್ನು ಅಡಲ್ಟ್ ವಾಟ್ಸಪ್ ಗ್ರೂಪ್ ನಲ್ಲಿ ಹಂಚಿಕೊಂಡಿದ್ದಾನೆ. ಈ ಕುರಿತು ಡೊಮಿನೋಸ್‍ಗೆ ದೂರು ನೀಡಿದರೂ ಅದು ಪೆಂಡಿಂಗ್‍ನಲ್ಲಿದೆ. ಪ್ರಕರಣದ ಕುರಿತು ನಿಮ್ಮ ಕಚೇರಿಯ ಯಾವುದೇ ಸದಸ್ಯ ನಮ್ಮನ್ನು ಸಂಪರ್ಕಿಸಿಲ್ಲ. ನನಗೆ ಹಲವರು ಕಾಲ್ ಹಾಗೂ ಮೆಸೇಜ್ ಮಾಡುತ್ತಿದ್ದಾರೆ ಎಂದು ಡೊಮಿನೋಸ್ ಇಂಡಿಯಾಗೆ ಟ್ಯಾಗ್ ಮಾಡಿ ಗಾಯತ್ರಿ ದೂರು ಸಲ್ಲಿಸಿದ್ದಾರೆ. ಅಲ್ಲದೆ ಈ ಕುರಿತು ಎಚ್ಚರದಿಂದಿರುವಂತೆ ಮಹಿಳೆಯರಿಗೆ ಕರೆ ನಿಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಚೆನ್ನೈ ಮಹಿಳಾ ಆಯೋಗಕ್ಕೂ ಗಾಯತ್ರಿ ದೂರು ನೀಡಿದ್ದು, ಕೂಡಲೇ ತಮ್ಮ ನಂಬರ್ ತೆಗೆದುಹಾಕಿ, ಅಲ್ಲದೆ ಅಪರಾಧಿಗಳಿಗೆ ತಕ್ಕ ಶಿಕ್ಷೆ ವಿಧಿಸಿ ಎಂದು ಕೋರಿದ್ದಾರೆ.

ದಕ್ಷಿಣ ಚಿತ್ರರಂಗದಲ್ಲಿ ಗಾಯತ್ರಿ ಚಿರಪರಿಚಿತರಾಗಿದ್ದು, ಬಾಲಿವುಡ್ ನ ಒಂದು ಚಿತ್ರದಲ್ಲಿಯೂ ನಟಿಸಿದ್ದಾರೆ. 1990ರಲ್ಲಿ ತೆರೆಕಂಡ ಮಣಿರತ್ನಂ ನಿರ್ದೇಶನದ ‘ಅಂಜಲಿ’ ತಮಿಳು ಚಿತ್ರದಲ್ಲಿ ಬಾಲನಟಿಯಾಗಿ ನಟಿಸುವ ಮೂಲಕ ಗಾಯತ್ರಿ ಸಾಯಿ ಅವರು ಚಿತ್ರರಂಗವನ್ನು ಪ್ರವೇಶಿಸಿದ್ದರು. ಇದೀಗ ಬಾಲಿವುಡ್ ಸೇರಿದಂತೆ ತಮಿಳಿನ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

Click to comment

Leave a Reply

Your email address will not be published. Required fields are marked *