ತೆಲುಗಿನ (Tollywood) ನಟಿ ಫರಿಯಾ ಅಬ್ದುಲ್ಲಾ (Faria Abdullah) ನಟನೆಯ ‘ಆ ಒಕ್ಕಟಿ ಅಡಕ್ಕು’ ಸಿನಿಮಾ ಮೇ 3ರಂದು ರಿಲೀಸ್ ಆಗಿದ್ದು, ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಸಂದರ್ಶನದಲ್ಲಿ ಮದುವೆ ಬೇಡ ಆದರೆ ಮಕ್ಕಳು ಬೇಕು ಎಂದು ಶಾಕಿಂಗ್ ಕಾಮೆಂಟ್‌ವೊಂದನ್ನು ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ.
ನನಗೆ ನನ್ನ ಮದುವೆಯ ಬಗ್ಗೆ ಯಾವುದೇ ಭರವಸೆ ಇಲ್ಲ. ನಾನು ಖಂಡಿತವಾಗಿಯೂ ಮದುವೆಯಾಗಬೇಕು ಎಂದು ಯೋಚಿಸುವುದಿಲ್ಲ. ಆದರೆ ನಾನು ಮಕ್ಕಳನ್ನು ಪ್ರೀತಿಸುತ್ತೇನೆ. ಮದುವೆಯಾಗದೇ ಮಕ್ಕಳನ್ನು ಪಡೆಯಲು ಬಯಸುತ್ತೇನೆ ಎಂದು ನಟಿ ಮಾತನಾಡಿದ್ದಾರೆ. ಸದ್ಯ, ಫರಿಯಾ ಅವರ ಹೇಳಿಕೆ ವೈರಲ್ ಆಗಿದೆ.
‘ಜಾತಿರತ್ನಲು’ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟರು. ಬಳಿಕ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಫರಿಯಾ ನಟಿಸಿದ್ದರು. ನರೇಶ್‌ಗೆ ನಾಯಕಿಯಾಗಿ ಸದ್ಯ ಆ ಒಕ್ಕಟಿ ಅಡಕ್ಕು ಚಿತ್ರದ ಮೂಲಕ ಸದ್ದು ಮಾಡುತ್ತಿದ್ದಾರೆ. ಇದನ್ನೂ ಓದಿ:ಸಿನಿಮಾ ರಂಗಕ್ಕೆ ಎಂಟ್ರಿ ಕೊಡ್ತಾರಾ ಕಿಚ್ಚನ ಪುತ್ರಿ ಸಾನ್ವಿ?
ಸದಾ ಒಂದಲ್ಲಾ ಒಂದು ಹಾಟ್ ಫೋಟೋಶೂಟ್ ಮೂಲಕ ಕಾಣಿಸಿಕೊಳ್ಳುವ ಫರಿಯಾ ಇದೀಗ ‘ವಲ್ಲಿ ಮಾಯಿಲ್’ ಎಂಬ ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.