‘ಉಸಿರಿಗಿಂತ ನೀನೇ ಹತ್ತಿರ’ ಸಿನಿಮಾ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಬಲಗಾಲಿಟ್ಟಿರುವ ಎಸ್ತರ್ ನರೋನ(Ester Noronha) ಮೂಲತಃ ಮಂಗಳೂರಿನವರು. ಬೆಳೆದದ್ದು ಮುಂಬೈನಲ್ಲಿ, ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದು ಕೂಡ ಬಾಲಿವುಡ್‌ನಿಂದ. ಅನುಪಮ್ ಖೇರ್ ನಟನಾ ಶಾಲೆಯಲ್ಲಿ ಕಲಿತು ಹಿಂದಿ ಚಿತ್ರರಂಗ (Bollywood) ಪ್ರವೇಶಿಸಿದ ಎಸ್ತರ್ ಮುಂದೆ ತೆಲುಗು, ತುಳು ಸಿನಿಮಾರಂಗದಲ್ಲಿಯೂ ಹೆಸರು ಮಾಡಿದರು. ನಾವಿಕ, ಅತಿರಥ, ನುಗ್ಗೇಕಾಯಿ, ಲೋಕಲ್ ಟ್ರೈನ್, ಲಂಕೆ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಮಿಂಚಿರುವ ಗ್ಲಾಮರ್ ಬ್ಯೂಟಿ ಎಸ್ತರ್ ನರೋನ ಈಗ ಹೊಸ ಹೆಜ್ಜೆ ಇಟ್ಟಿದ್ದಾರೆ.
Advertisement
ಎಸ್ತರ್ ನರೋನ ಪ್ರತಿಭಾನ್ವಿತ ನಾಯಕಿ ಅನ್ನೋದನ್ನು ಸಾಬೀತುಪಡಿಸಿದ್ದಾರೆ. ಈಗ ನಿರ್ದೇಶಕಿಯಾಗಿ ಅದೃಷ್ಟ ಪರೀಕ್ಷೆಗೆ ಇಳಿದ್ದಾರೆ. ’ದಿ ವೆಕೆಂಟ್ ಹೌಸ್’ (The Vacant House) ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ನರೋನ, ಕನ್ನಡ – ಕೊಂಕಣಿ ಭಾಷೆಯಲ್ಲಿ ಚಿತ್ರ ತಯಾರಿಸ್ತಿದ್ದಾರೆ. ನಟನೆ, ನಿರ್ದೇಶನದ ಜೊತೆಗೆ ನರೋನ ನಿರ್ಮಾಣ, ಸಂಗೀತ, ಸಾಹಿತ್ಯ, ಕಥೆ, ಕಾಸ್ಟ್ಯೂಮ್ ಎಲ್ಲಾ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡಿದ್ದಾರೆ. ಎಸ್ತರ್ ಸಾರಥ್ಯದ ಚೊಚ್ಚಲ ‘ದಿ ವೆಕೆಂಟ್ ಹೌಸ್’ ಫಸ್ಟ್ ಲುಕ್ ಅನಾವರಣಗೊಂಡಿದೆ. ಎರಡು ಮುದ್ದಾದ ಜೋಡಿಗಳ ಸುಂದರ ಪ್ರೇಮಕಥೆಯ ಫಸ್ಟ್ ಲುಕ್ ನೋಡುಗರನ್ನು ಇಂಪ್ರೆಸ್ ಮಾಡ್ತಿದೆ. ಇದನ್ನೂ ಓದಿ:69th National Film Award 2023: ಅತ್ಯುತ್ತಮ ಸಿನಿಮಾ, ರಾಕೆಟ್ರಿ ದಿ ನಂಬಿ ಎಫೆಕ್ಟ್
Advertisement
Advertisement
‘ದಿ ವೆಕೆಂಟ್ ಹೌಸ್’ ಸಿನಿಮಾವನ್ನು ಜೆನೆಟ್ ನರೋನ ಪ್ರೊಡಕ್ಷನ್ ನಡಿ ನಿರ್ಮಾಣ ಮಾಡಲಾಗಿದ್ದು, ಬಹುತೇಕ ಮಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ. ನರೇಂದ್ರ ಗೌಡ ಛಾಯಾಗ್ರಹಣ, ವಿಜಯ್ ರಾಜ್ ಸಂಕಲನ ಸಿನಿಮಾಕ್ಕಿದೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ‘ದಿ ವೆಕೆಂಟ್ ಹೌಸ್’ ಚಿತ್ರವನ್ನು ಅಕ್ಟೋಬರ್ ಅಥವಾ ನವೆಂಬರ್‌ಗೆ ತೆರೆಗೆ ಬರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
Advertisement
ನಿರ್ದೇಶನದ (Direction) ಮೂಲಕ ಹೊಸ ಹೆಜ್ಜೆ ಇಟ್ಟಿರೋ ಎಸ್ತರ್ ನರೋನ ನಾಯಕಿಯಾಗಿ ಗಮನ ಸೆಳೆದವರು. ಈಗ ಡೈರೆಕ್ಟರ್ ಆಗಿ ಅದೆಷ್ಟರ ಮಟ್ಟಿಗೆ ಮೋಡಿ ಮಾಡ್ತಾರೆ ಕಾದುನೋಡಬೇಕಿದೆ.