ಬಾಲಿವುಡ್ ನಟಿ ಇಶಾ ಡಿಯೋಲ್ (Esha Deol) ಅವರು ಇತ್ತೀಚೆಗೆ ತಮ್ಮ ಡಿವೋರ್ಸ್ (Divorce) ವಿಚಾರವಾಗಿ ಭಾರೀ ಸುದ್ದಿಯಲ್ಲಿದ್ದರು. ಈ ಬೆನ್ನಲ್ಲೇ ಇದೀಗ ಹೇಮಾ ಮಾಲಿನಿ (Hema Malini) ಪುತ್ರಿ ರಾಜಕೀಯ (Politics) ಅಖಾಡಕ್ಕೆ ಇಳಿಯಲಿದ್ದಾರೆ ಎಂಬ ವಿಚಾರ ಚರ್ಚೆಗೆ ಗ್ರಾಸವಾಗಿದೆ.
ಉದ್ಯಮಿ ಭರತ್ ಜೊತೆ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಮೇಲೆ ಇಶಾ ರಾಜಕೀಯಕ್ಕೆ ಬರುವ ಬಗ್ಗೆ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಇಷ್ಟೇಲ್ಲಾ ಸುದ್ದಿಯಾಗಲು ಇದೀಗ ಹೇಮಾ ಮಾಲಿನಿ ನೀಡಿರುವ ಹೇಳಿಕೆ. ಮಗಳಿಗೆ ರಾಜಕೀಯಕ್ಕೆ ಬರಲು ಆಸಕ್ತಿಯಿದೆ ಎಂದು ಆಡಿರುವ ಮಾತು ಸದ್ದು ಮಾಡುತ್ತಿದೆ.

ಈ ಮೂಲಕ ಇಶಾ ರಾಜಕೀಯ ಅಖಾಡಕ್ಕೆ ಇಳಿಯುವ ಬಗ್ಗೆ ನಟಿ ಹೇಮಾ ಮಾಲಿನಿ ರಿವೀಲ್ ಮಾಡಿದ್ದಾರೆ. ಮಗಳ ನಿರ್ಧಾರದ ಬಗ್ಗೆ ಬೆಂಬಲಿದೆ ಎಂಬುದನ್ನು ನಟಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ಅನುಷ್ಕಾ ಶೆಟ್ಟಿ ಹೊಸ ಚಿತ್ರಕ್ಕೆ ಟೈಟಲ್ ಫಿಕ್ಸ್
2 ವಾರಗಳ ಹಿಂದೆ ವಿಚ್ಛೇದನದ ಬಗ್ಗೆ ಇಶಾ ಡಿಯೋಲ್- ಭರತ್ ತಖ್ತಾನಿ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದರು. ಈ ಬಗ್ಗೆ ಖಾಸಗಿ ಪತ್ರಿಕೆಯೊಂದು ವರದಿ ಮಾಡಿತ್ತು. ನಾವು ಪರಸ್ಪರ ಒಪ್ಪಿಗೆಯ ಮೇರೆಗೆ ಸೌಹಾರ್ದಯುತವಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ನಮ್ಮ ಜೀವನ ಬದಲಾಗುತ್ತಿರುವ ಈ ಸಮಯದಲ್ಲಿ ನಮ್ಮ ಇಬ್ಬರು ಮಕ್ಕಳ ಉತ್ತಮ ಹಿತಾಸಕ್ತಿ ಮತ್ತು ಯೋಗಕ್ಷೇಮ ನಮಗೆ ಅತ್ಯಂತ ಮಹತ್ವದ್ದಾಗಿದೆ. ನಮ್ಮ ಗೌಪ್ಯತೆಯನ್ನ ಗೌರವಿಸುವುದನ್ನು ನಾವು ಪ್ರಶಂಸಿಸುತ್ತೇವೆ ಎಂದು ಇಶಾ ಡಿಯೋಲ್ ಹಾಗೂ ಭರತ್ ತಖ್ತಾನಿ ಹೇಳಿಕೆ ನೀಡಿದ್ದರು.
2012ರಲ್ಲಿ ಇಶಾ ಡಿಯೋಲ್- ಭರತ್ ತಖ್ತಾನಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2017ರಲ್ಲಿ ಮಗಳು ರಾಧ್ಯಗೆ ಇಶಾ ಡಿಯೋಲ್ ಜನ್ಮ ನೀಡಿದರು. 2019ರಲ್ಲಿ ಎರಡನೇ ಮಗುವನ್ನ ಇಶಾ ಡಿಯೋಲ್ ಹಾಗೂ ಭರತ್ ತಖ್ತಾನಿ ಬರಮಾಡಿಕೊಂಡಿದ್ದರು. ಇದೀಗ 12 ವರ್ಷಗಳ ದಾಂಪತ್ಯ ಜೀವನಕ್ಕೆ ಇಶಾ ಡಿಯೋಲ್- ಭರತ್ ಬ್ರೇಕ್ ಹಾಕಿದ್ದರು.
ಧೂಮ್, ಜಸ್ಟ್ ಮ್ಯಾರೀಡ್, ನೋ ಎಂಟ್ರಿ, ಡಾರ್ಲಿಂಗ್, ಶಾದಿ ನಂ.1 ಸೇರಿದಂತೆ ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ಇಶಾ ನಟಿಸಿದ್ದಾರೆ.




