ಮಗಳಿಗೆ ನಾಮಕರಣ ಮಾಡಿದ ನಟಿ ದಿಶಾ ಮದನ್

Public TV
1 Min Read
disha madan

ಟಿ ದಿಶಾ ಮದನ್ 2 ಮಕ್ಕಳ ತಾಯಿಯಾಗಿದ್ದಾರೆ. ಇವರು ಫೋಟೋಶೂಟ್ ಮೂಲಕವಾಗಿ ಆಗಾಗ ಸುದ್ದಿಯಾಗುತ್ತಲಿರುತ್ತಾರೆ. ಈ ನಟಿ ತಮ್ಮ ಮಗಳಿಗೆ ನಾಮಕರಣ ಮಾಡಿದ್ದಾರೆ. ಮೊದಲ ಬಾರಿಗೆ ತಮ್ಮ ಪುತ್ರಿಯ ಜೊತೆಗೆ ತೆಗೆಸಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

disha madan 2

2022 ಮಾರ್ಚ್ 1ರಂದು ದಿಶಾ ಮದನ್ ಎರಡನೇ ಮಗುವನ್ನು ಬರ ಮಾಡಿಕೊಂಡಿದ್ದಾರೆ. ಹೆಣ್ಣು ಮಗುವಿಗೆ ಅವಿರಾ ಎಂದು ಕೂಡ ಹೆಸರು ರಿವೀಲ್ ಮಾಡಿದ್ದಾರೆ. ಮಗಳಿಗೆ 28 ದಿನ ತುಂಬುತ್ತಿದ್ದಂತೆ ಫೋಟೋ ಶೂಟ್ ಮಾಡಿಸಿದ್ದಾರೆ. ಇಡೀ ಕುಟುಂಬ ಪಿಂಕ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದನ್ನೂ ಓದಿ: ಕಷ್ಟಪಟ್ಟು ಮಾಡುವ ಸಿನಿಮಾ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಆಲಿಯಾ ಗರಂ

disha madan 1

2016ರಲ್ಲಿ ಉದ್ಯಮಿ ಶಶಾಂಕ್ ಜೊತೆ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ದಿಶಾ ಮದನ್ 2019ರಲ್ಲಿ ಮೊದಲ ಮಗು ವಿವಾನ್‍ಗೆ ಜನ್ಮ ನೀಡಿದ್ದರು. 2ನೇ ಪುತ್ರಿಗೆ ಅವೀರಾ ಎಂದು ಹೆಸರಿಟ್ಟಿದ್ದಾರೆ.

disha madan 1 1

ಕುಲವಧು ಧಾರಾವಾಹಿಯಲ್ಲಿ ವಚನಾ ಆಗಿ ಮತ್ತು ಡ್ಯಾನ್ಸಿಂಗ್ ಸ್ಟಾರ್‌ನಲ್ಲಿ ವಿಜೇತಳಾಗಿರುವ ದಿಶಾ ಮದನ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುತ್ತಾರೆ. ಫ್ರೆಂಚ್ ಬಿರಿಯಾನಿ, ಹಂಬಲ್ ಪೊಲೀಟಿಷಿಯನ್ ನೋಗರಾಜ್ ಚಿತ್ರದಲ್ಲಿ  ದಿಶಾ ಮದನ್ ನಟಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *