2ನೇ ಮಗು ನಿರೀಕ್ಷೆಯಲ್ಲಿ ಫ್ರೆಂಚ್ ಬಿರಿಯಾನಿ ನಟಿ ದಿಶಾ ಮದನ್

Public TV
2 Min Read
disha

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ದಿಶಾ ಮದನ್ 2ನೇ ಮಗುವಿನ ನಿರೀಕ್ಷೆಯಲ್ಲಿ ಇದ್ದೇನೆ ಎಂದು ಹೇಳುವ ಮೂಲಕವಾಗಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

 

View this post on Instagram

 

A post shared by Disha Madan (@disha.madan)

 ನಟಿ ದಿಶಾ ಮದನ್, ಶಶಾಂಕ್ ವಾಸುಕಿ ಗೋಪಾಲ್ ದಂಪತಿ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ವಿಚಾರವನ್ನು ಸ್ವತ ಅವರೇ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

 

View this post on Instagram

 

A post shared by Disha Madan (@disha.madan)

ನಿಮ್ಮೊಂದಿಗೆ ಹಂಚಿಕೊಳ್ಳಲು ಒಂದು ಸಂತಸದ ವಿಚಾರವಿದೆ. ಕೆಲವು ದಿನಗಳಿಂದ ನಾನು ಕಾಣಿಸದೇ ಇರುವುದಕ್ಕೆ ಕಾರಣ ಇಲ್ಲಿದೆ. ಮಾರ್ಚ್ 2022ಕ್ಕಾಗಿ ನಾವು ಕಾಯುತ್ತಿದ್ದೇವೆ. ನಾವು ಮೂವರಿಂದ ನಾಲ್ವರಾಗುತ್ತಿದ್ದೇವೆ ಎಂದು ಸೋಷಿಯಲ್ ಮೀಡಿಯಾದಲ್ಲಿ ನಟಿ ದಿಶಾ ಮದನ್ ಬರೆದುಕೊಂಡು ಒಂದು ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:  ಮೂರನೇ ಅಲೆ ತಡೆಯಲು ಸಜ್ಜಾಗಿ: ಗೋಪಾಲಯ್ಯ

 

View this post on Instagram

 

A post shared by Disha Madan (@disha.madan)

ತಮ್ಮ ಲವ್ ಜರ್ನಿ ಕುರಿತಾಗಿ ಒಂದು ವಿಡಿಯೋವನ್ನೂ ಇನ್ಸ್ಟಾಗ್ರಾಮ್‍ನಲ್ಲಿ ನಟಿ ದಿಶಾ ಮದನ್ ಹಂಚಿಕೊಂಡಿದ್ದಾರೆ. ಇದು ನಮ್ಮ ಕಥೆ, ನಾನು ಶಶಾಂಕ್ ವಾಸುಕಿ ಗೋಪಾಲ್ ಭೇಟಿಯಾಗಿದ್ದು 2016ರಲ್ಲಿ. 2017ರಲ್ಲಿ ನಮ್ಮ ಪ್ರೀತಿ ಅಧಿಕೃತವಾಯಿತು. ವೈವಾಹಿಕ ಬದುಕಿಗೆ ಕಾಲಿಟ್ಟೆವು, 2018ರಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವು, 2019ರಲ್ಲಿ ಗಂಡು ಮಗು ಜನಿಸಿತು. 2022ರಲ್ಲಿ ನಮ್ಮ ಮೊದಲನೇ ಮಗ ಅಣ್ಣನಾಗಲಿದ್ದಾನೆ. 2022ರಲ್ಲಿ ನಾವು ಮೂವರಿಂದ ನಾಲ್ವರಾಗುತ್ತೇವೆ ಎಂದು ವೀಡಿಯೋ ಮೂಲಕ ನಟಿ ದಿಶಾ ಮದನ್ ಹಾಗೂ ಶಶಾಂಕ್ ವಾಸುಕಿ ಗೋಪಾಲ್ ದಂಪತಿ ತಿಳಿಸಿದ್ದಾರೆ.

disha madan

ಕಿರುತೆರೆ ಹಾಗೂ ಬೆಳ್ಳಿ ತೆರೆಯಲ್ಲಿ ಸಕ್ರಿಯವಾಗಿರುವ ನಟಿ ದಿಶಾ ಮದನ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿರುತ್ತಾರೆ. ಆಗ್ಗಾಗ ತಮ್ಮ ಮುದ್ದು ಮಗನ ಜೊತೆ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕ್ಯಾಮೆರಾಗೆ ಫೋಸ್ ಕೊಡುವ ದಿಶಾ ಮದನ್ ಈಗ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

Share This Article