ಹಿಂದಿ ಕಿರುತೆರೆಯ ಜನಪ್ರಿಯ ನಟಿ ದೀಪಿಕಾ ಕಕ್ಕರ್‌ಗೆ (Dipika Kakar) 2ನೇ ಹಂತದ ಯಕೃತ್‌ಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ನಟಿ ತಿಳಿಸಿದ್ದಾರೆ. ಈ ಸುದ್ದಿ ಕೇಳಿ ಫ್ಯಾನ್ಸ್‌ಗೆ ಶಾಕ್ ಆಗಿದೆ. ಇದನ್ನೂ ಓದಿ:ವಿದೇಶಕ್ಕೆ ಶೂಟಿಂಗ್ ತೆರಳಲು ಅನುಮತಿ ಕೋರಿ ದರ್ಶನ್ ಅರ್ಜಿ
ನಟಿಯ ಇನ್ಸ್ಟಾಗ್ರಾಂ ಪೋಸ್ಟ್‌ನಲ್ಲಿ, ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ಕೆಲವು ವಾರಗಳು ನನಗೆ ತುಂಬಾ ಕಷ್ಟಕರವಾಗಿತ್ತು. ನನ್ನ ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ಹೋದಾಗ ಲಿವರ್‌ನಲ್ಲಿ ಟೆನ್ನಿಸ್ ಚೆಂಡಿನ ಗಾತ್ರದ ಗೆಡ್ಡೆ ಇರುವುದು ತಿಳಿಯಿತು. ಆ ಗೆಡ್ಡೆ ಎರಡನೇ ಹಂತದ ಮಾರಕ ಕ್ಯಾನ್ಸರ್ ಎಂದು ಗೊತ್ತಾಯ್ತು. ನಾನು ನೋಡಿದ ಅತ್ಯಂತ ಕಷ್ಟಕರ ಸಮಯಗಳಲ್ಲಿ ಇದು ಒಂದು ಎಂದಿದ್ದಾರೆ. ಕ್ಯಾನ್ಸರ್ ವಿಚಾರ ತಿಳಿದ ಮೇಲೆ ನಾನು ಈಗ ಪಾಸಿಟಿವ್ ಆಗಿ ಇದ್ದೇನೆ. ಕ್ಯಾನ್ಸರ್ ಅನ್ನು ಎದುರಿಸಿ ಬಲಶಾಲಿಯಾಗಿ ಹೊರಬರಲು ದೃಢನಿಶ್ಚಯ ಮಾಡಿದ್ದೇನೆ. ನನ್ನ ಇಡೀ ಕುಟುಂಬ ನನ್ನೊಂದಿಗೆ ಇದೆ. ನಿಮ್ಮೆಲ್ಲರ ಪ್ರೀತಿ ಮತ್ತು ಪ್ರಾರ್ಥನೆಗಳು ನನ್ನೊಂದಿಗೆ ಇದೆ. ದಯವಿಟ್ಟು ನನಗಾಗಿ ಪ್ರಾರ್ಥಿಸಿ ಎಂದು ಬರೆದುಕೊಂಡಿದ್ದಾರೆ.
View this post on Instagram
ಕ್ಯಾನ್ಸರ್‌ನಿಂದ ಮುಕ್ತರಾಗಲು ನಟಿ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ದೀಪಿಕಾಗೆ ಕ್ಯಾನ್ಸರ್ ಎಂದು ಸುದ್ದಿ ಕೇಳಿ ಫ್ಯಾನ್ಸ್ ಕಂಗಾಲಾಗಿದ್ದಾರೆ. ಆದಷ್ಟು ಬೇಗ ಅವರು ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಇದನ್ನೂ ಓದಿ:ತಮಿಳಿನಿಂದ ಕನ್ನಡ ಎಂದ ಕಮಲ್ ಹಾಸನ್‌ಗೆ ಸಂಕಷ್ಟ- ಕ್ಷಮೆಯಾಚಿಸುವಂತೆ ಆಗ್ರಹ
ಸಲ್ಮಾನ್ ಖಾನ್ ನಿರೂಪಣೆಯ ‘ಬಿಗ್ ಬಾಸ್ ಹಿಂದಿ 12’ರಲ್ಲಿ ದೀಪಿಕಾ ವಿನ್ನರ್ ಆಗಿದ್ದರು. ಕಿರುತೆರೆ ಹಲವು ಸೀರಿಯಲ್‌ನಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಶೋಯೆಬ್ ಇಬ್ರಾಹಿಂ ಜೊತೆ ನಟಿ ಮದುವೆಯಾಗಿದ್ದಾರೆ. 2023ರಲ್ಲಿ ನಟಿ ಗಂಡು ಮಗುವಿಗೆ ಜನ್ಮ ನೀಡಿದರು.