ಸ್ಯಾಂಡಲ್‌ವುಡ್ ನಟಿ ಧನ್ಯಾ ರಾಮ್‌ಕುಮಾರ್ (Dhanya Ramkumar) ಜೊತೆ ‘ಬಿಗ್ ಬಾಸ್’ (Bigg Boss Kannada) ಖ್ಯಾತಿಯ ಕಿಶನ್ (Kishen Bilagali) ಡ್ಯುಯೇಟ್ ಹಾಡಿದ್ದಾರೆ. ನಿನ್ನದೇ ನೆನಪು ದಿನವೂ ಮನದಲ್ಲಿ ಎಂದು ಅಣ್ಣಾವ್ರ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಡಾ.ರಾಜ್‌ಕುಮಾರ್ (Rajkumar) ಹುಟ್ಟುಹಬ್ಬದಂದು (Birthday) ಅವರ ಮೊಮ್ಮಗಳು ಧನ್ಯಾ ಡ್ಯಾನ್ಸ್ ಮಾಡಿದ್ದಾರೆ. ರಾಜ ನನ್ನ ರಾಜ ಚಿತ್ರದ ಅಣ್ಣಾವ್ರು ನಟಿಸಿರುವ ಹಾಡಿಗೆ ಮಸ್ತ್ ಆಗಿ ಕಿಶನ್ ಜೊತೆ ಹೆಜ್ಜೆ ಹಾಕಿದ್ದಾರೆ. ಈ ಮೂಲಕ ತಾತನಿಗೆ ವಿಶೇಷವಾಗಿ ಟ್ರಿಬ್ಯೂಟ್ ಕೊಟ್ಟಿದ್ದಾರೆ. ಇದನ್ನೂ ಓದಿ:ನೇಹಾ ಹಿರೇಮಠ ಮನೆಗೆ ಭೇಟಿ- ಪೋಷಕರಿಗೆ ಹರ್ಷಿಕಾ ದಂಪತಿ ಸಾಂತ್ವನ
View this post on Instagram
ರೆಟ್ರೋ ಹಾಡಿಗೆ ಸ್ಟೈಲೀಶ್ ಆಗಿ ಇಬ್ಬರೂ ಕಾಣಿಸಿಕೊಂಡಿದ್ದಾರೆ. ಇಬ್ಬರ ಡ್ಯಾನ್ಸ್ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ‘ಹುಟ್ಟುಹಬ್ಬದ ಶುಭಾಶಯಗಳು ಎಂದು ಡಾ.ರಾಜ್‌ಕುಮಾರ್ ಸರ್’ ಎಂದು ಅಡಿಬರಹ ನೀಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಡಾ.ರಾಜ್‌ಕುಮಾರ್ ಮತ್ತು ಆರತಿ ನಟನೆಯ ರಾಜ ನನ್ನ ರಾಜ ಸಿನಿಮಾ 1976ರಲ್ಲಿ ತೆರೆಕಂಡಿತ್ತು. 25 ವಾರಗಳ ಪ್ರದರ್ಶನ ಕಂಡು ‘ರಾಜ ನನ್ನ ರಾಜ’ ಸಿನಿಮಾ ದಾಖಲೆ ಬರೆದಿತ್ತು.